More

    ಪೌರ ಕಾರ್ಮಿಕರ ಕಾರ್ಯ ವರ್ಗೀಕರಣ

    ಗಂಗಾವತಿ: ಹಿರಿತನ ಮತ್ತು ಕಾರ್ಯಕ್ಷಮತೆ ಆಧಾರದ ಮೇಲೆ 43 ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗಿದ್ದು, ನಗರದ ಹಿತದೃಷ್ಟಿಯಿಂದ ಇನ್ನಷ್ಟು ಪೌರ ಕಾರ್ಮಿಕರ ಅಗತ್ಯವಿದೆ ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು.

    ಇಲ್ಲಿನ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಿಸಿರುವ ವಿಶ್ರಾಂತಿ ಗೃಹ ಗುರುವಾರ ಉದ್ಘಾಟಿಸಿ ಮಾತನಾಡಿದರು. ನಗರದ 35 ವಾರ್ಡ್‌ಗಳಲ್ಲಿ ಸ್ವಚ್ಛತೆಗಾಗಿ 180 ಪೌರ ಕಾರ್ಮಿಕರ ಅಗತ್ಯವಿದ್ದು, ಸದ್ಯ 165 ಸಿಬ್ಬಂದಿ ಇದ್ದಾರೆ. ಪೌರ ಕಾರ್ಮಿಕರ ಕಾರ್ಯ ವರ್ಗೀಕರಣ ಮಾಡಲಾಗಿದ್ದು, ಸ್ವಚ್ಛತೆಗೆ ತೊಂದರೆಯಾಗದಂತೆ ನಿಯೋಜಿಸಲಾಗುತ್ತಿದೆ. ಅವರ ಆರೋಗ್ಯ ದೃಷ್ಟಿಯಿಂದ ಶಿಬಿರ, ವಿಶ್ರಾಂತಿ ಗೃಹ ಸೇರಿ ಹಲವು ಸೌಲಭ್ಯ ಒದಗಿಸಲಾಗಿದೆ ಎಂದರು. ಹೈ.ಕ.ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಗಡಪ್ಪ ಹುಲಿಹೈದರ್ ಮಾತನಾಡಿ, ಪೌರ ಕಾರ್ಮಿಕರಿಗಾಗಿ ಈಗಾಗಲೇ ಮನೆಗಳು ನಿರ್ಮಾಣವಾಗಿದ್ದು, ಇನ್ನೂ ಕೆಲವರ ಕಾಯಂ ಜತೆಗೆ ಮೂಲ ಸೌಕರ್ಯ ಒದಗಿಸಬೇಕಿದೆ ಎಂದರು. ಎಇಇ ಶಂಕರಗೌಡ, ವ್ಯವಸ್ಥಾಪಕ ಎ್.ಷಣ್ಮುಖಪ್ಪ, ಪರಿಸರ ಇಂಜಿನಿಯರ್ ಚೇತನನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts