More

    ಪೌರಾಯುಕ್ತರ ನೇಮಕ ವಿಳಂಬ, ಶಾಸಕರ ವೈಲ್ಯ

    ಚಾಮರಾಜನಗರ : ಕೊಳ್ಳೇಗಾಲ ನಗರಸಭೆಗೆ ಕಾಯಂ ಪೌರಾಯುಕ್ತರನ್ನು ನೇಮಕ ಮಾಡದಿರುವುದು ಕ್ಷೇತ್ರದ ಶಾಸಕರ ವೈಲ್ಯ ಎಂದು ಮಾಜಿ ಶಾಸಕ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.


    ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಿತ್ಯ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಕೇಂದ್ರ ನಗರಸಭೆ. ಚುನಾವಣೆ ಮುಗಿದು ಏಳೆಂಟು ತಿಂಗಳಾದರೂ ಪೌರಯುಕ್ತರ ನೇಮಕವಾಗಿಲ್ಲ. ಈಗಾದರೇ ಸಾರ್ವಜನಿಕರ ಕೆಲಸಗಳು ಹೇಗಾಗುತ್ತದೆ. ಇದು ಶಾಸಕರ ವೈಲ್ಯ. ಜನರು ಇದನ್ನು ಪ್ರಶ್ನೆ ಮಾಡಬೇಕು ಎಂದು ಒತ್ತಾಯಿಸಿದರು.


    ಪಕ್ಷ ತೀರ್ಮಾನಿಸುತ್ತದೆ: ರಾಜ್ಯ ಬಿಜೆಪಿ ಪಕ್ಷದಲ್ಲಿ ನನಗೆ ಕೊಡಬೇಕಾದ ಸ್ಥಾನಮಾನಗಳ ಬಗ್ಗೆ ನಿರ್ಧಾರ ರಾಷ್ಟ್ರ ಹಾಗೂ ರಾಜ್ಯನಾಯಕರಿಗೆ ಬಿಟ್ಟ ತೀರ್ಮಾನ. ಮಹೇಶ್‌ಗೆ ಎಸ್ಸಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡುತ್ತಾರೆ ಎಂಬುದು ಉಹಾಪೋಹ ಅಷ್ಟೆ. ನಾನೊಬ್ಬ ಪಕ್ಷದ ಕಾರ್ಯಕರ್ತ ಅಷ್ಟೆ ಎಂದರು.
    ಬಾಲ್‌ರಾಜ್ ಪರ ಕೆಲಸ ಮಾಡ್ತೀನಿ: ಚಾಮರಾಜನಗರ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹೇಶ್ ಅವರು, ಈ ಭಾರಿ ಬಿಜೆಪಿಯಲ್ಲಿ ತುಂಬಾ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಮಾಜಿ ಶಾಸಕ ಬಾಲರಾಜ್ ಕೂಡ ಒಬ್ಬರು. ಮುಂದೆ ಏನಾಗುತ್ತದೆ ನೋಡೋಣ. ಟಿಕೆಟ್ ಕೊಡುವ ವಿಚಾರ ಪಕ್ಷಕ್ಕೆ ಬಿಟ್ಟದ್ದು. ನಾನು ಬಾಲರಾಜ್ ಪರ ಕೆಲಸ ಮಾಡುತ್ತೇನೆ ಎಂದರು.

    ಮಾಜಿ ಶಾಸಕ ಎಸ್.ಬಾಲರಾಜ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಶಾಸಕರಿಂದ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆರೇಳು ತಿಂಗಳಾದರೂ ಯಾವ ಕೆಲಸವೂ ಅವರಿಂದ ಮಾಡಲು ಸಾಧ್ಯವಾಗಿಲ್ಲ. ಶಿವಕಳ್ಳಿ ಗ್ರಾಮದಲ್ಲಿ ಈಗಾಗಲೆ ಎನ್.ಮಹೇಶ್ ಅವರಿಂದ ಭೂಮಿ ಪೂಜೆ ಆಗಿರುವ ಕಾಮಗಾರಿಗೆ ಮತ್ತೆ ಶಾಸಕರು ಭೂಮಿ ಪೂಜೆ ಮಾಡಿದ್ದಾರೆ. ಶಾಸಕರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts