More

    ಪೌರಕಾರ್ವಿುಕರ ಕಾರ್ಯ ಶ್ಲಾಘನೀಯ

    ಹಿರೇಕೆರೂರ: ಜನತೆಯ ಆರೋಗ್ಯದ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ಪೌರಕಾರ್ವಿುಕರು ತಮ್ಮ ಜೀವ ಲೆಕ್ಕಿಸದೆ ಪಟ್ಟಣ ಸ್ವಚ್ಛಗೊಳಿಸುವ ಹಾಗೂ ರೋಗ ಹರಡದಂತೆ ವಿವಿಧ ರಾಸಾಯನಿಕ ಸಿಂಪಡಣೆ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್ ಹೇಳಿದರು.

    ಪಟ್ಟಣದಲ್ಲಿ ಪಪಂ ವತಿಯಿಂದ ಪೌರಕಾರ್ವಿುಕರಿಗೆ ಮಾಸ್ಕ್, ಸ್ಯಾನಿಟೈಸರ್, ಹೋಮ್ ಕ್ವಾರಂಟೈನ್ ಮನೆಗೆ ಹೋಗಿ ಬರುವವರಿಗೆ ರಕ್ಷಣಾ ಕವಚಗಳ ಕಿಟ್​ಗಳನ್ನು ವಿತರಿಸಿ ಅವರು ಮಾತನಾಡಿದರು.

    ಪೌರಕಾರ್ವಿುಕರು, ಪಟ್ಟಣ ಪಂಚಾಯಿತಿ, ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆಯವರು ತಮ್ಮ ಜೀವ ಲೆಕ್ಕಿಸದೆ ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕರೊನಾ ರೋಗ ಹರಡದಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಎಲ್ಲರಿಗೂ ಯಾವುದೇ ತೊಂದರೆ ಕಿರುಕುಳ ನೀಡದೆ, ಅವರು ನಮ್ಮಂತೆ ಮನುಷ್ಯರು ಎಂಬ ಭಾವನೆಯಿಂದ ಸಹಾಯ, ಸಹಕಾರ, ಪ್ರೀತಿ ತೋರಿಸುವುದು ಅತಿ ಅವಶ್ಯವಾಗಿದೆ ಎಂದರು.

    ಪಪಂ ಮುಖ್ಯಾಧಿಕಾರಿ ರಾಜಾರಾಮ ಪವಾರ, ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ಅಲ್ತಾಫಖಾನ್ ಪಠಾಣ, ಹನುಮಂತಪ್ಪ ಕುರಬರ, ಪಪಂ ಅಧಿಕಾರಿಗಳಾದ, ಮಮತಾ ಪಾಟೀಲ, ಡಿ. ನಾಗರಾಜ, ಗಾಯಿತ್ರಿ ಬಿಳಚಿ, ಮಲ್ಲಿಕಾರ್ಜುನ ಎಲ್ಲಣ್ಣನವರ, ಶಂಭು ವಾಳದ, ಐ.ಎ. ಮಂಕಾದರ, ನಾಗರಾಜ ಶ್ಯಾಮನೂರು, ರಾಮಣ್ಣ, ಐ.ಎ. ಮಕಾಂದಾರ, ರಮೇಶ ಬಾತವ್ವನವರ, ಶಿವಯೋಗಿ ಗೌಡ್ರ, ಸುನೀಲ ಕುಲಕರ್ಣಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts