More

    ಪೊಲೀಸ್, ಅಗ್ನಿ ಶಾಮಕ, ವೈದ್ಯಕೀಯ ಸೇರಿ ಹಲವು ತುರ್ತು ಸೇವೆಗೆ 112

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಒಂದೇ ಕರೆ ಸಂಖ್ಯೆಯಡಿ (112) ಪೊಲೀಸ್, ಅಗ್ನಿ ಶಾಮಕ, ವೈದ್ಯಕೀಯ ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಜನರಿಗೆ ಸೇವೆ ಒದಗಿಸುವ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.

    ಕೇಂದ್ರ ಸರ್ಕಾರವು ಒಂದೇ ಭಾರತ, ಒಂದೇ ತುರ್ತು ಕರೆ ಎಂಬುದರಡಿ ತುರ್ತು ಅವಘಡಗಳ ಸೇವೆಯನ್ನು ಒಂದೇ ಸಹಾಯವಾಣಿ ಸಂಖ್ಯೆಯಡಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ತ್ವರಿತವಾಗಿ ಜಿಲ್ಲೆಯಲ್ಲೂ ಅನುಷ್ಠಾನಗೊಳ್ಳುತ್ತಿದೆ.

    ಹಿಂದೆ ಪೊಲೀಸ್ ಇಲಾಖೆಗೆ 100, ಅಗ್ನಿ ಶಾಮಕ ದಳ ಸೇವೆಗೆ 101, ಆಂಬುಲೆನ್ಸ್‌ಗೆ 108 ಪ್ರತ್ಯೇಕ ಸಹಾಯವಾಣಿ ಕರೆ ಸಂಖ್ಯೆ ಇತ್ತು. ಇದರಿಂದ ಬಹುತೇಕ ಸಂದರ್ಭದಲ್ಲಿ ಅಂಕಿ ವಿಚಾರದಲ್ಲಿ ಗೊಂದಲಕ್ಕೊಳಗಾಗುತ್ತಿದ್ದರು. ಆದರೆ, ಇದೀಗ ಒಂದೇ ಸಂಖ್ಯೆಯ ಕರೆ ಪರಿಣಾಮಕಾರಿ ಸೇವೆಯಿಂದ ಸರಳೀಕರಣಗೊಳಿಸಲಾಗಿದೆ.

    ಜನರಿಗೆ ತ್ವರಿತ ಸೇವೆ: 112 ಕರೆ ಸಂಖ್ಯೆಯ ಸಹಾಯವಾಣಿ ಕೇಂದ್ರವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿದ್ದಾಗ ಇದಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಡಯಲ್ ಮಾಡಿದ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ, ತ್ವರಿತವಾಗಿ ಸೇವೆ ನೀಡಲಾಗುತ್ತದೆ.

    ಜಿಲ್ಲೆಯಲ್ಲಿ ಒಂದೇ ಕರೆ ಸಂಖ್ಯೆಯಡಿ (112) ಪೊಲೀಸ್, ಅಗ್ನಿ ಶಾಮಕ, ವೈದ್ಯಕೀಯ ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಜನರಿಗೆ ಸೇವೆ ಒದಗಿಸುವ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.
    ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts