More

    ಪೈಪೋಟಿಯಲ್ಲಿ ಅಡಕೆ ಖರೀದಿಸಿ

    ಸಾಗರ: ಕರೊನಾ ವೈರಸ್​ನಿಂದ ವಿದೇಶಿ ಅಡಕೆ ಭಾರತೀಯ ಮಾರುಕಟ್ಟೆಗೆ ಬರುವುದು ನಿಂತಿರುವುದು ಅಡಕೆ ಬೆಳಗಾರರರ ವಲಯದಲ್ಲಿ ಸಂತಸ ಮೂಡಿಸಿದ್ದು, ಸ್ಥಳೀಯ ಮ್ಯಾಮ್ಕೋಸ್, ಕ್ಯಾಂಪ್ಕೋ, ತುಮ್ಕೋಸ್ ಸೇರಿ ಅಡಕೆ ಖರೀದಿ ಸಂಸ್ಥೆಗಳು ಬೆಳೆಗಾರರಿಂದ ಪೈಪೋಟಿ ದರದಲ್ಲಿ ಅಡಕೆ ಖರೀದಿ ಮಾಡಬೇಕು ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್ ಒತ್ತಾಯಿಸಿದರು.

    ವಿದೇಶಿ ಅಡಕೆ ಇಲ್ಲದೆ ಇರುವುದರಿಂದ ದೇಶಿಯ ಅಡಕೆಗೆ ಉತ್ತಮ ಬೆಲೆ ಬರುವ ಕಾಲ ಇದಾಗಿದೆ. ಇಂತಹ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಅಡಿಕೆ ಖರೀದಿಗೆ ತಕ್ಷಣದಿಂದ ಚಾಲನೆ ನೀಡಬೇಕು. ಸರ್ಕಾರ ಅಡಕೆ ಖರೀದಿಗೆ ಮುಕ್ತ ಮಾರುಕಟ್ಟೆ ಒದಗಿಸುವತ್ತ ಗಮನ ಹರಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ಸಾಗರ, ಹೊಸನಗರ, ಸೊರಬ ವ್ಯಾಪ್ತಿಯಲ್ಲಿ 23,367 ಎಕರೆ ಪ್ರದೇಶದಲ್ಲಿ ಒಟ್ಟಾರೆ 17,814 ಟನ್ ಅಡಕೆ ಉತ್ಪಾದನೆಯಾಗುತ್ತಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕದ ಶೇ. 40 ಅಡಕೆ ಉತ್ಪಾದನೆ ಆಗುತ್ತಿದ್ದು ರಾಜ್ಯದಲ್ಲಿ 95 ಸಾವಿರ ಎಕರೆ ಪ್ರದೇಶದಲ್ಲಿ 53 ಸಾವಿರ ಟನ್ ಅಡಿಕೆ ಉತ್ಪಾದನೆ ಆಗುತ್ತಿದೆ. ಇದರಿಂದ 1,378 ಕೋಟಿ ರೂ. ತೆರಿಗೆ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತದೆ. ಅತಿಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ಅಡಕೆ ಕ್ಷೇತ್ರಕ್ಕೆ ಸರ್ಕಾರ ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ ಎಂದರು.

    ಇದೀಗ ಸರ್ಕಾರ ಪಾನ್ ಮಸಾಲ ಮಾರಾಟ ನಿಷೇಧಿಸಿರುವುದರಿಂದ ಅಡಕೆ ಬೆಳೆಗಾರರು ಆತಂಕ ಎದುರಿಸುವಂತೆ ಆಗಿದೆ. ಕಾಳಸಂತೆಯಲ್ಲಿ ಪಾನ್ ಮಸಾಲ ಮಾಡುವವರಿಗೆ ಅನುಕೂಲವಾಗಿದ್ದು ಮೂಲ ಅಡಕೆ ಬೆಳೆಗಾರರ ಅಡಕೆ ಸಾಗಣೆಗೆ ಸಮಸ್ಯೆಯಾಗಿದೆ. ಸರ್ಕಾರ ಪಾನ್ ಮಸಾಲ ತಯಾರಿಕೆಗೆ ನಿರ್ಬಂಧ ಹೇರಬಾರದು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts