More

    ಪೂರ್ವಜರ ಜನವಾಣಿಯೇ ಜಾನಪದ

    ರಿಪ್ಪನ್‍ಪೇಟೆ: ಒಂದು ಕಾಲದಲ್ಲಿ ಇಡೀ ಪ್ರಪಂಚವೇ ಗ್ರಾಮೀಣ ಪ್ರದೇಶವಾಗಿತ್ತು. ಅಕ್ಷರಸ್ಥರಲ್ಲದ ವಿದ್ಯಾವಂತರಿಂದ ಜನವಾಣಿಯಾಗಿ ಬಂದಿದ್ದೇ ಇಂದು ಜಾನಪದವಾಗಿದೆ ಎಂದು ಹೊಸನಗರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಘಟಕದ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ತಿಳಿಸಿದರು.
    ಹಿಂದು ರಾಷ್ಟ್ರಸೇನಾ ಸಭಾಂಗಣದಲ್ಲಿ ಸೋಮವಾರ 4ನೇ ಜಿಲ್ಲಾ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಾನಪದದಲ್ಲಿ ರಾಮಾಯಣ, ವೈದ್ಯ, ಒಗಟು, ಹಾಡು, ಕಥೆಯಂತಹ ವಿವಿಧ ಪ್ರಕಾರಗಳಿವೆ. ಪೂರ್ವಿಕರು ಜನರಿಗೆ ಬದುಕು, ಬದುಕುವ ಕ್ರಮ, ಬದುಕುವ ಮೌಲ್ಯವನ್ನು ಕಲಿಸಿದರು. ಇವುಗಳೆಲ್ಲವು ನಮ್ಮ ಹಿಂದಿನವರು ಮಾಡಿಟ್ಟ ಬದುಕಿನ ಸಾರದ ಅಡುಗೆಯಾಗಿದೆ. ಅನುವಂಶೀಯವಾದ ಪರಂಪರೆ ಜಾನಪದ ಕಲೆಗಿದೆ. ಅವುಗಳನ್ನು ಸವಿಯುತ್ತ ಮುಂದಿನ ಪೀಳಿಗೆಗೆ ಉಳಿಸಿ ಬೆಳಸಬೇಕಿರುವುದು ಎಲ್ಲರ ಕರ್ತವ್ಯ ಎಂದರು.
    ಪ್ರತಿಯೊಂದು ಮನೆಯಲ್ಲೂ ತಲೆತಲಾಂತರದಿಂದ ಬಳಸುತ್ತಿದ್ದ ಅನೇಕ ಪರಿಕರಗಳು ಇವೆ. ಅವುಗಳನ್ನು ಬಿಸಾಡದೆ ಸಂರಕ್ಷಿಸುವ ಅಗತ್ಯವಿದೆ. ಅವುಗಳೆಲ್ಲವು ನಮ್ಮ ಜಾನಪದಕ್ಕೆ ಸಾಕ್ಷಿಗಳಾಗಿದ್ದು, ಆಸಕ್ತ ಮನಸ್ಸುಗಳು ಪ್ರತಿ ಮನೆಯಿಂದ ವಸ್ತುಗಳನ್ನು ಸಂಗ್ರಹ ಮಾಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಒಂದು ಅದ್ಭುತವಾದ ಜನಪದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಬೇಕು. ತನ್ಮೂಲಕ ಮುಂದಿನ ಪೀಳಿಗೆಗೂ ಇದರ ಪರಿಚಯ ನಿರಂತರವಾಗಿಸುವ ಉದ್ದೇಶ ಸಾಕಾರವಾಗುತ್ತದೆ. ಜತೆಗೆ ಕನ್ನಡ ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳ ತಲೆಯಲ್ಲಿ ಜಾನಪದ ಕಲೆ ತುಂಬಲು ಏನೂ ಕಷ್ಟವಾಗದು. ಇಂತಹ ಕಾರ್ಯದಿಂದ ನಮ್ಮ ನಾಡಿನಲ್ಲಿ ನಮ್ಮ ಕಲೆಯನ್ನು ಸದಾ ಶ್ರೀಮಂತಗೊಳಿಸಬೇಕು ಎಂದರು. ಸಮ್ಮೇಳನಾಧ್ಯಕ್ಷ ಆಂಜನೇಯ ಜೋಗಿ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ತಾಲೂಕು ಅಧ್ಯಕ್ಷ ಎಂ.ಎಂ.ಪರಮೇಶ್, ಕಸಾಪ ಅಧ್ಯಕ್ಷ ತ.ಮ.ನರಸಿಂಹ, ಮಂಜುನಾಥ ಕಾಮತ್, ಆರ್.ಉಮೇಶ್, ದೇವದಾಸ, ನಾಗಭೂಷಣ, ಎಂ.ಪಿ. ರಾಜು, ವಿಜೇಂದ್ರ ಶೇಟ್, ಪಿಯೂಸ್ ರೋಡ್ರಿಗಸ್, ಮಂಜುನಾಥ ಭಂಡಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts