More

    ಪೂರ್ಣ ಮೀಸಲಿಗಾಗಿ ಬಲಿಜ ಸಂಘದಿಂದ 9ಕ್ಕೆ ಬೆಂಗಳೂರು ಚಲೋ  

    ದಾವಣಗೆರೆ: ಬಲಿಜ ಸಮಾಜಕ್ಕೆ ಪ್ರವರ್ಗ2ಎ ಅಡಿಯಲ್ಲಿ ಪೂರ್ಣ ಪ್ರಮಾಣದ ಮೀಸಲು ಕಲ್ಪಿಸಲು ಆಗ್ರಹಿಸಿ ಜ.9 ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಎಸ್.ನರಸಿಂಹಮೂರ್ತಿ ತಿಳಿಸಿದರು.
    ಹಿಂದುಳಿದ 2ಎ ಪ್ರವರ್ಗದಲ್ಲಿದ್ದ ಬಲಿಜ ಸಮಾಜವನ್ನು 1994 ರಲ್ಲಿ ವೀರಪ್ಪ ಮೊಯ್ಲಿ ಸರ್ಕಾರವು 3 ಎ ಪ್ರವರ್ಗಕ್ಕೆ ಸೇರಿಸಿದ್ದು, ಇದರಿಂದ ಸಮಾಜದ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ಬಲಿಜ ಸಮಾಜದವರು ಕೃಷಿ ಹಾಗೂ ಹೈನುಗಾರಿಕೆ ಮೂಲ ಕಸುಬು ನಿರ್ವಹಿಸುತ್ತಿದ್ದು, ಬಳೆ, ಹೂವು ಹಾಗೂ ಮಂಗಳದ್ರವ್ಯ ಮಾರಾಟವನ್ನು ಉಪ ಕಸುಬನ್ನಾಗಿಸಿಕೊಂಡಿದ್ದಾರೆ.
    3ಎ ಮೀಸಲಾತಿ ವಿರೋಧಿಸಿ ಸಮಾಜದಿಂದ ರಾಜ್ಯಾದ್ಯಂತ ಹಲವು ಹೋರಾಟಗಳನ್ನು ನಡೆಸಿದ ಪರಿಣಾಮ 2011 ರಲ್ಲಿ ಯಡಿಯೂರಪ್ಪ ಸರ್ಕಾರ, ಬಲಿಜ ಸಮಾಜವನ್ನು ಶೈಕ್ಷಣಿಕ ಮೀಸಲಿಗಾಗಿ 2ಎ ಪ್ರವರ್ಗಕ್ಕೆ ಸೇರಿಸಿದ್ದು, ಉದ್ಯೋಗ ಹಾಗೂ ರಾಜಕೀಯವಾಗಿ 2ಎ ಮೀಸಲಿನಿಂದ ವಂಚಿತವಾಗಿದೆ. ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಪೂರ್ಣ ಪ್ರಮಾಣದ 2ಎ ಮೀಸಲು ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
    ಸಂಘದ ಸದಸ್ಯರಾದ ಎನ್.ಬಿ.ಗಣೇಶ್, ಬಿ.ಎಸ್. ಶ್ರೀನಿವಾನ್, ಚಂದ್ರಶೇಖರಪ್ಪ ಗುಂಡೇರಿ, ಭೀಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts