More

    ಪುಲಿಯಂಡ, ಪೊನ್ನೋಲತಂಡಕ್ಕೆ ಗೆಲುವು

    ನಾಪೋಕ್ಲು: ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಸಾರಥ್ಯ ವಹಿಸಿದ್ದ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಪಂದ್ಯಾಟದ ಎರಡನೇ ದಿನದ ಪಂದ್ಯದಲ್ಲಿ ಪೊನ್ನೋಲತಂಡ, ಪುಲಿಯಂಡ ತಂಡಗಳು ಭರ್ಜರಿ ಗೆಲುವು ಸಾಧಿಸಿದವು.


    ಮೈದಾನ ಒಂದರಲ್ಲಿ ಕಟ್ಟಂಡ (ಅಮ್ಮತ್ತಿ) ಮತ್ತು ಪೊನ್ನೋಲತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊನ್ನೋಲತಂಡ 6-4ಮುನ್ನಡೆಯೊಂದಿಗೆ ಜಯ ಸಾಧಿಸಿತು. ವಾಟೆರಿರ ಮತ್ತು ನಂದಿನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಾಟೇರಿರ ತಂಡ 4-0 ಅಂತರದ ಜಯ ಸಾಧಿಸಿತು. ನಂದಿನೆರವಂಡ ತಂಡ ಯಾವುದೇ ಗೋಲು ಗಳಿಸಲಿಲ್ಲ. ನಾಗಂಡ ಮತ್ತು ಕುಪ್ಪಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಗಂಡ 1-0 ಅಂತರದ ಜಯ ಸಾಧಿಸಿತು. ಮದ್ರೀರ ಮತ್ತು ಪಾಲೆಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮದ್ರೀರ ತಂಡ 3-0 ಅಂತರದಿಂದ ಗೆಲುವು ಸಾಧಿಸಿತು. ತಂಬುಕುತ್ತೀರ ಮತ್ತು ಬಾದುಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಂಬುಕುತ್ತಿರ 2-0 ಅಂತರದ ಗೆಲುವು ಸಾಧಿಸಿತು.


    ನಾಪಂಡ, ತಿರೋಡಿರ ಮತ್ತು ಅಪ್ಪಾರಂಡ ತಂಡಗಳು ಮುಂದಿನ ಸುತ್ತುಪ್ರವೇಶಿಸಿದವು. ಮೈದಾನ ಎರಡರಲ್ಲಿ ನಡೆದ ಪಂದ್ಯದಲ್ಲಿ ಓಡಿಯಂಡ ತಂಡದ ವಿರುದ್ಧ ಪುಲಿಯಂಡ ತಂಡ ಭರ್ಜರಿ ಗೆಲುವು ಸಾಧಿಸಿತು. ಪುಲಿಯಂಡ ತಂಡ ಆರು ಗೋಲು ಗಳಿಸಿದರೆ ಓಡಿಯಂಡ ತಂಡ ಯಾವುದೇ ಗೋಲು ಗಳಿಸಲಿಲ್ಲ. ಕಂಜಿತಂಡ ಮತ್ತು ಚೋಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಕಂಜಿತಂಡ ತಂಡ 4-3 ಅಂತರದ ಗೆಲುವು ಸಾಧಿಸಿತು. ಮೂಡೇರ, ಕಾಂಗೀರ, ನಂಬುಡಮಾಡ, ಪಟ್ಟಮಾಡ, ಐಚಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.


    ಮೈದಾನ ಮೂರರಲ್ಲಿ ನಡೆದ ಪಂದ್ಯದಲ್ಲಿ ಕುಂಚೆಟ್ಟಿರ ತಂಡ ಕೈಬುಲಿರ ತಂಡದ ವಿರುದ್ಧ ನಾಲ್ಕು ಗೋಲು ಗಳಿಸಿ ಗೆಲುವು ಸಾಧಿಸಿತು.ಕೈಬುಲಿರತಂಡ ಯಾವುದೇ ಗೋಲು ಗಳಿಸಲಿಲ್ಲ.ಬಟ್ಟಿರ ಮತ್ತು ಚೊಟ್ಟೇರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೊಟ್ಟೇರ ತಂಡಕ್ಕೆ 5-4 ಅಂತರದ ಜಯ ಲಭಿಸಿತು. ಕೇತಿರ ಮತ್ತು ಮಾಣಿಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೇತಿರ ತಂಡವು ಭರ್ಜರಿ ಜಯ ಸಾಧಿಸಿತು. ಕೇತಿರ ತಂಡಕ್ಕೆ ಐದು ಗೋಲುಗಳು ಲಭಿಸಿದರೆ ಮಾಣಿಪಂಡ ತಂಡ ನಾಲ್ಕು ಗೋಲು ಗಳಿಸಿತು.

    ಆದೆಂಗಡ ಮತ್ತು ಕೋದಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋದಂಡ ತಂಡ 5 ಗೋಲು ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅರಮಣಮಾಡ ಮತ್ತು ಆಲೆಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಆಲೆಮಾಡ ತಂಡ 5-2 ಅಂತರದ ಮುನ್ನಡೆ ಸಾಧಿಸಿತು. ಗೋಲು ಗಳಿಸಿತು ಕೀತಿಯಂಡ ಮತ್ತು ಅಪ್ಪು ಮಣಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಪ್ಪುಮಣಿಯಂಡ ತಂಡವು 3- 1 ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾದಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು.


    ಪಂದ್ಯಾವಳಿಯ ಹಾಕಿ ತೀರ್ಪುಗಾರರಾಗಿ ಕೋಡಿಮಣಿಯಂಡ ಗಣಪತಿ, ಚೆಯ್ಯಂಡ ಅಪ್ಪಚ್ಚು, ಸುಳ್ಳಿಮಡ ಸುಬ್ಬಯ್ಯ, ಕುಪ್ಪಂಡ ದಿಲನ್, ಕರವಂಡ ಅಪ್ಪಣ್ಣ, ಕೊಂಡಿರ ಕೀರ್ತಿ ಮುತ್ತಪ್ಪ ಬೊಳ್ಳಚಂಡ ನಾಣಯ್ಯ,ಅಂಜಪರವಂಡ ಕುಶಾಲಪ್ಪ, ಚಂದಪಂಡ ಆಕಾಶ್, ಚೋಯಾಮಾಡನ್ಡ ಚೆಂಗಪ್ಪ, ಅಪ್ಪಚೆಟ್ಟೋಳಂಡ ಅಯ್ಯಪ್ಪ
    ಕುಮ್ಮಂಡ ಬೋಸ್ ಚೆಂಗಪ್ಪ, ಪಟ್ರಪ್ಪಂಡ ಸಚಿನ್ ಮಂದಣ್ಣ,ಬೊಟ್ಟಂಗಡ ಕೌಶಿಕ್, ತಾಂತ್ರಿಕ ವಿಭಾಗದಲ್ಲಿ ಪಾಲೆಯಡ ಮೊಣ್ಣಪ್ಪ,ಚೋಯಮಾಡಂಡ ಮಿಲನ್, ಪಾಂಡಿರ ಸುಬ್ರಮಣಿ, ವಲ್ಲಂಡ ಸೋಮಣ್ಣ, ಚಿಯಂಡಿರ ಕಿಲನ್, ಅಜ್ಜೆಟ್ಟಿರ ಪೊನ್ನಣ್ಣ ಪಾಲ್ಗೊಂಡಿದ್ದರು.


    ಅಂಪೇರ್ಸ್‌ ಮ್ಯಾನೇಜರ್ ಆಗಿ ನೆಲ್ಲಮಕ್ಕಡ ಪವನ್, ಟೂರ್ನಮೆಂಟ್ ಡೈರೆಕ್ಟರ್ ಆಗಿ ನಾಯಕಂಡ ದೀಪು ಚೆಂಗಪ್ಪ, ವೀಕ್ಷಕ ವಿವರಣೆ ವಿಭಾಗದಲ್ಲಿ ಮೂಡೆರ ಹರೀಶ್ ಕಾಳಯ್ಯ, ಕರವಂಡ ಅಪ್ಪಣ್ಣ ಕಾರ್ಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts