More

    ಪುರಸಭೆಯಿಂದ ದಿನಸಿ ವಿತರಣೆ

    ಹಳಿಯಾಳ: ಸಾರ್ವಜನಿಕರು ಮಾರುಕಟ್ಟೆಗೆ ಬರುವುದನ್ನು ನಿಲ್ಲಿಸಲು ಮನೆ ಬಾಗಿಲಿಗೆ ದಿನಸಿ ಆಹಾರ ಸಾಮಗ್ರಿಗಳನ್ನು ಪೂರೈಸುವ ಕಾರ್ಯವನ್ನು ಪುರಸಭೆಯಿಂದ ಗಣೇಶ ನಗರ ಮತ್ತು ಸದಾಶಿವ ನಗರದ ಮೂಲಕ ಆರಂಭಿಸಲಾಗಿದೆ. ಇದಕ್ಕಾಗಿ ಪುರಸಭೆಯು ನೂತನವಾಗಿ ಖರೀದಿಸಿರುವ ಮೂರು ವಾಹನಗಳನ್ನು ಈ ಕಾರ್ಯಗಳಿಗೆ ಬಳಸಲಾಗುತ್ತಿವೆ.

    ತಹಸೀಲ್ದಾರ ವಿದ್ಯಾಧರ ಗುಳಗುಳೆ, ಸಿಪಿಐ ಬಿ.ಎಸ್.ಲೋಕಾಪುರ ಹಾಗೂ ಮುಖ್ಯಾಧಿಕಾರಿ ಕೇಶವ ಚೌಗಲೆ ಗಣೇಶ ನಗರದಲ್ಲಿ ಆಹಾರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು. ಆಹಾರ ವಿತರಣೆಯ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಮುಖ್ಯಾಧಿಕಾರಿ, ಮೊದಲ ಹಂತದಲ್ಲಿ ಪುರಸಭೆಯು 50,000ರೂ ಮೌಲ್ಯದ ಆಹಾರ ಸಾಮಗ್ರಿಗಳನ್ನು ಸ್ಥಳೀಯರಿಂದ ಖರೀದಿಸಿದೆ. ಸಾರ್ವಜನಿಕರ ಬೇಡಿಕೆಯನ್ನು ಆದರಿಸಿ ಹುಬ್ಬಳ್ಳಿಯಿಂದ ದಿನಸಿಯನ್ನು ಖರೀದಿಸಿ ತರಲು ಯೋಜಿಸಲಾಗುತ್ತಿದೆ ಎಂದಿದ್ದಾರೆ.

    ಏನೆಲ್ಲ ಮಾರಾಟ: ಅಕ್ಕಿ, ಜೊಗರಿ ಬೆಳೆ, ಸಕ್ಕರೆ, ಕುಚ್ಲಕ್ಕಿ, ಗೋದಿ ಹಿಟ್ಟು, ಜೋಳ, ಹೆಸರು ಬೆಳೆ, ಅವಲಕ್ಕಿ, ಕಡಲೆ, ಬೆಲ್ಲಾ, ಚಹಾಪುಡಿ, ಪಾಮ ಎಣ್ಣೆ, ಮೈದಾ, ಉದ್ದಿನ ಬೆಳೆ, ಬಾಂಬೆ ರವಾ, ಖಾರದ ಪುಡಿ ಕೊಬ್ಬರಿ ಎಣ್ಣೆಯನ್ನು ಮಾರಾಟ ಮಾಡಲಾಗುತ್ತಿದೆ.

    ಅಪರಿಚಿತ ವ್ಯಕ್ತಿ ಧಾರವಾಡಕ್ಕೆ: ಮುರ್ಕವಾಡ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಶಿವಪುರ ಗ್ರಾಮಕ್ಕೆ ಗುರುವಾರ ರಾತ್ರಿ ಬಂದು ಅಸ್ವಸ್ಥನಾದ ಬೆಳಗಾವಿ ಮೂಲದ ಅಪರಿಚಿತ ವ್ಯಕ್ತಿಯನ್ನು ಕಂಡು ಶಿವಪುರ ಗ್ರಾಮಸ್ಥರು ಭಯಭೀತರಾಗಿ ತಾಲೂಕಾಡಳಿತದ ಗಮನಕ್ಕೆ ತಂದಿದ್ದಾರೆ. ತಕ್ಷಣ ತಹಸೀಲ್ದಾರ್ ವಿದ್ಯಾಧರ ಗುಳಗುಳೆಯ ನೇತೃತ್ವದ ತಾಲೂಕಾಡಳಿತ ತಂಡವು ಗ್ರಾಮಕ್ಕೆ ತೆರಳಿ ಅಸ್ವಸ್ಥ ವ್ಯಕ್ತಿಯನ್ನು ಹಳಿಯಾಳ ತಾಲೂಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಸಿವಿಲ್ ಆಸ್ಪತ್ರೆಗೆ ಕಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts