More

    ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಬ್ರೇಕ್

    ಬ್ಯಾಡಗಿ: ಕರೊನಾ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕನಕದಾಸರ ಕರ್ಮಭೂಮಿ ಕಾಗಿನೆಲೆ, ಎರಡನೇ ತಿರುಪತಿ ಎಂದೇ ಪ್ರಸಿದ್ಧವಾಗಿರುವ ಕದರಮಂಡಲಗಿ ಕಾಂತೇಶ, ಗುಡ್ಡದಮಲ್ಲಾಪುರ ದಾಸೋಹಮಠದ ವೃಷಭಸ್ವರೂಪಿ ಷ.ಬ್ರ. ಮೂಕಪ್ಪಸ್ವಾಮಿಗಳ ಮಠಕ್ಕೆ ಭಕ್ತರ ಬರುವಿಕೆಯನ್ನು ನಿಷೇಧಿಸಲಾಗಿದೆ.

    ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಾಗಿ ತಾಲೂಕಿನ ಕಾಗಿನೆಲೆ ಹಾಗೂ ಕದರಮಂಡಲಗಿ, ಗುಡ್ಡದಮಲ್ಲಾಪುರ ದೇವಸ್ಥಾನಗಳ ದರ್ಶನಕ್ಕೆ ಬ್ರೇಕ್ ಬಿದ್ದಿದೆ. ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರಸಿದ್ಧ ತಾಣಗಳು ಬಿಕೋ ಎನ್ನುತ್ತಿವೆ. ಈ ಕುರಿತು ಕದರಮಂಡಲಗಿ ದೇವಸ್ಥಾನದ ಟ್ರಸ್ಟ್ ಹಾಗೂ ಗುಡ್ಡದಮಲ್ಲಾಪುರ ಧರ್ಮಾಧಿಕಾರಿ ವೇ. ಮೃತ್ಯುಂಜಯ ಶ್ರೀಗಳು ಅಮವಾಸ್ಯೆ ಸೇರಿ ವಿವಿಧ ಧಾರ್ವಿುಕ ಸೇವೆಯನ್ನು ಭಕ್ತರ ಆರೋಗ್ಯ ದೃಷ್ಟಿಯಿಂದ ನಿಷೇಧಿಸಿ ಪ್ರಕಟಣೆ ಹೊರಡಿಸಿದ್ದಾರೆ.

    ಕನಕದಾಸರ ಕರ್ಮಭೂಮಿ ಕಾಗಿನೆಲೆ, ಬಾಡ ಗ್ರಾಮಗಳಿಗೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಈ ಕುರಿತು ನಾಲ್ಕಾರು ದಿನಗಳ ಹಿಂದೆ ಜಿಲ್ಲಾಧಿಕಾರಿ ಆದೇಶ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಆವರಣದಲ್ಲಿ ಸ್ವಚ್ಛತೆ ಹಾಗೂ ಕರೊನಾ ತಿಳಿವಳಿಕೆ ಕುರಿತು ಭಿತ್ತಿಪತ್ರ ಅಂಟಿಸಲಾಗಿದೆ. ನಾಗರಿಕರು ಸಹಕಾರ ನೀಡುವ ಮೂಲಕ ನಿಯಮ ಪಾಲಿಸಬೇಕು.

    | ಮಲ್ಲೇಶಪ್ಪ ಹೊರಪೇಟಿ, ಕಾಗಿನೆಲೆ ಪ್ರಾಧಿಕಾರದ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts