More

    ಏಡ್ಸ್ ತಡೆಗೆ ಜಾಗ್ರತೆ ಅಗತ್ಯ

    ರಾಮದುರ್ಗ: ಏಡ್ಸ್ ಬಾರದಂತೆ ತಡೆಯಲು ಜಾಗ್ರತೆ ಹಾಗೂ ಜಾಗೃತಿ ಅವಶ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನಿರ್ಮಲಾ ಹಂಜಿ ಹೇಳಿದರು.

    ಪಟ್ಟಣದ ಸಿ.ಎಸ್.ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,
    ಎನ್‌ಎಸ್‌ಎಸ್ ಹಾಗೂ ರೆಡ್ ರಿಬ್ಬನ್ನ ಕ್ಲಬ್‌ಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಚ್‌ಐವಿ ಏಡ್ಸ್ ಜಾಗತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸುರಕ್ಷಿತ ಲೈಂಗಿಕ ಚಟುವಟಿಕೆಗಳಿಂದ ದೂರವಿದ್ದು, ಜಾಗತಿ ಮೂಡಿಸುವ ಮೂಲಕ ದೇಶವನ್ನು ಎಚ್‌ಐವಿ ಮುಕ್ತ ರಾಷ್ಟ್ರ ಮಾಡಬೇಕೆಂದು ಕರೆ ನೀಡಿದರು.

    ಪ್ರಾಚಾರ್ಯ ಪ್ರೊ.ಎಸ್.ಎಂ.ಸಕ್ರಿ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು. ಐಕ್ಯೂಎಸಿ ಸಂಯೋಜಕ ಡಾ.ಪಿ.ಬಿ.ತೆಗ್ಗಿಹಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಜಿ.ಡಿ.ರಾಠೋಡ ಪರಿಚಯಿಸಿದರು. ಐಶ್ವರ್ಯ ದೊಡಮನಿ ವಂದಿಸಿದರು. ಸಾವಿತ್ರಿ ಕಡ್ಡಿ ಹಾಗೂ ಹರ್ಷಿತಾ ಹಳ್ಳಿಕೆರೆ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts