More

    ಪಿ.ಎಂ.ನರೇಂದ್ರಸ್ವಾಮಿಗೆ 2.22 ಕೋಟಿ ರೂ. ಸಾಲ


    ಮಂಡ್ಯ: ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ 2.22 ಕೋಟಿ ರೂ.ಸಾಲ ಮಾಡಿಕೊಂಡಿದ್ದಾರೆ.
    ಪ್ರಸ್ತುತ ಅವರ ಬಳಿ 8.55 ಲಕ್ಷ ರೂ ನಗದು, ಹುಂಡೈ ವರ್ನಾ, ಮಹೇಂದ್ರ ಸ್ಕಾರ್ಪಿಯೋ, ಇನೋವಾ, ಟಯೋಟಾ ಫಾರ್ಚ್ಯೂನರ್ ಕಾರು, 1,250ಗ್ರಾಂ ಚಿನ್ನ, 7 ಕಿಲೋ ಬೆಳ್ಳಿ, ಒಂದು ಪೆಟ್ರೋಲ್ ಬಂಕ್ ಸೇರಿದಂತೆ 10.89 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪೂರಿಗಾಲಿಯಲ್ಲಿ 4,30 ಎಕರೆ ಕೃಷಿ ಜಮೀನು, 12,580 ಚದರಡಿಯ ಕೃಷಿಯೇತರ ಜಮೀನು, ಬೆಂಗಳೂರಿನ ಬಿಡಿಎ ನಿವೇಶನ ಸೇರಿದಂತೆ 4.45 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ.ಇವರ ಪತ್ನಿ ಶಶಿಕಲಾ ಅವರ ಬಳಿ 3.25 ಲಕ್ಷ ರೂ ನಗದು, 2 ಕಿಲೋ ಚಿನ್ನ, 3 ಕಿಲೋ ಬೆಳ್ಳಿ ಸೇರಿದಂತೆ 1.76 ಕೋಟಿ ರೂ. ಮೌಲ್ಯದ ಚರಾಸ್ತಿ, ಬೆಂಗಳೂರಿನ ವಿಜಯನಗರದಲ್ಲಿ ಒಂದು ಮನೆ ಸೇರಿದಂತೆ 3.93 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ 2.96 ಕೋಟಿ ರೂ ಸಾಲವಿದೆ.

    ಮುನಿರಾಜು ಬಳಿ 7.50 ಲಕ್ಷ ರೂ. ಮಾತ್ರ : ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಅವರ ಬಳಿ 7.50 ಲಕ್ಷ ರೂ ಇದೆ. ಇನೋವಾ ಕಾರು, ಮಾರುತಿ-800, ಮಾರುತಿ ಬ್ರೀಜಾ ಕಾರುಗಳಿವೆ. 100 ಗ್ರಾಂ ಚಿನ್ನ ಸೇರಿದಂತೆ 21.29 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. 2.20 ಎಕರೆ ಕೃಷಿ ಭೂಮಿ, ಕೆಂಗೇರಿ ಉಪನಗರದಲ್ಲಿ ವಾಣಿಜ್ಯ ಸಂಕೀರ್ಣ, ಬೆಂಗಳೂರಿನ ಕೆಂಗೇರಿಯಲ್ಲಿ ಒಂದು ಮನೆ ಸೇರಿದಂತೆ 10.47 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ 1.15 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ. ಇವರ ಪತ್ನಿ ಶಾರದಾ ಅವರ ಬಳಿ 2.50 ಲಕ್ಷ ರೂ. ನಗದು, 400 ಗ್ರಾಂ ಚಿನ್ನ ಸೇರಿದಂತೆ 27.25 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಕೆಂಗೇರಿ ಉಪನಗರದಲ್ಲಿ ಕೃಷಿಯೇತರ ಭೂಮಿ, ಕೆಂಗೇರಿ ಉಪನಗರದಲ್ಲಿ ವಾಣಿಜ್ಯ ಸಂಕೀರ್ಣ, ಮಳವಳ್ಳಿ ತಾಲೂಕು ಅಟುವನಹಳ್ಳಿಯಲ್ಲಿ ಒಂದು ಮನೆ ಸೇರಿದಂತೆ 1.55 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.


    ಬಿಎಲ್ಡಿ ವಾರ್ಷಿಕ ಆದಾಯ 2 ಲಕ್ಷ ರೂ. : ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರು ವಕೀಲ ವೃತ್ತಿಯಿಂದ ವಾರ್ಷಿಕ ಆದಾಯವಾಗಿ 2 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ಅವರ ಬಳಿ 1 ಲಕ್ಷ ರೂ ನಗದು, ಇನೋವಾ ಕಾರು ಇದೆ. ಒಟ್ಟು 43.17 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪಿತ್ರಾರ್ಜಿತವಾಗಿ ಬಂದ 4 ಎಕರೆ 22 ಗುಂಟೆ ಕೃಷಿ ಜಮೀನು, ಮೈಸೂರಿನ ವಿಜಯನಗರದಲ್ಲಿ ತಲಾ 4000 ಚದರ ಅಡಿಯ ಎರಡು ನಿವೇಶನ, ಬಂಡಿಹೊಳೆ, ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಒಂದೊಂದು ಮನೆಗಳು ಸೇರಿದಂತೆ ಒಟ್ಟು 2.05 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಕೆ.ಆರ್.ಪೇಟೆಯ ಕರ್ನಾಟಕ ಬ್ಯಾಂಕ್, ಬಂಡಿಹೊಳೆ ಸೊಸೈಟಿಯಲ್ಲಿ ಒಟ್ಟು 14.10 ಲಕ್ಷ ರೂ. ಸಾಲ ಮಾಡಿರುವುದಾಗಿ ನಮೂದಿಸಿದ್ದಾರೆ.ಇವರ ಪತ್ನಿ ಬಿ.ಸರ್ವಮಂಗಳಾ ಅವರ ಬಳಿ 25 ಸಾವಿರ ರೂ. ನಗದು, 500 ಗ್ರಾಂ ಚಿನ್ನ, 4 ಕಿಲೋ ಬೆಳ್ಳಿ ಸೇರಿದಂತೆ 30.55 ಲಕ್ಷ ರೂ. ಮೌಲ್ಯದ ಚರಾಸ್ತಿ, ಹೇಮಾವತಿ ಬಡಾವಣೆಯಲ್ಲಿ ವಸತಿ ಸೇರಿದಂತೆ ಒಟ್ಟು 37 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಕರ್ನಾಟಕ ಬ್ಯಾಂಕ್ ಕೆ.ಆರ್.ಪೇಟೆ ಶಾಖೆಯಲ್ಲಿ ಚಿನ್ನಾಭರಣ ಗಿರವಿ ಇಟ್ಟು 1 ಲಕ್ಷ ರೂ. ಸಾಲ ಪಡೆದಿದ್ದಾರೆ.

    ಕೋಟ್ಯಧಿಪತಿ ಕದಲೂರು ಉದಯ್ : ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ 75 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇವರು 51 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 3 ಕಿಲೋ ಬಂಗಾರ, 4 ಕಾರುಗಳ ಜತೆಗೆ 22 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 3.22 ಕೋಟಿ ರೂ. ಸಾಲ ಮಾಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. ಪತ್ನಿ ಬಳಿ 1 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಫಾರ್ಚ್ಯೂನರ್, ಇನ್ನೋವಾ ಕಾರು, 1.89 ಕೋಟಿ ರೂ ಮೌಲ್ಯದ 3.1 ಕಿಲೋ ತೂಕದ ಚಿನ್ನಾಭರಣಗಳು, ಹಲವೆಡೆ ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts