More

    ಪಿಬಿ ರಸ್ತೆ ಅಗೆದ ಜಲಮಂಡಳಿ

    ಹುಬ್ಬಳ್ಳಿ: ಕೇಂದ್ರ ರಸ್ತೆ ನಿಧಿ (ಆರ್​ಎಫ್) ಯೋಜನೆ ಅಡಿ ಇತ್ತೀಚೆಗೆ ನಿರ್ವಿುಸಿರುವ ಇಲ್ಲಿನ ಕಮರಿಪೇಟ ನೂರಾನಿ ಮಾರ್ಕೆಟ್ ಬಳಿ ಪಿಬಿ ರಸ್ತೆಯನ್ನು ಜಲಮಂಡಳಿ ಸಿಬ್ಬಂದಿ ಶುಕ್ರವಾರ ಅಗೆದಿದ್ದಾರೆ.

    ಕೋಟ್ಯಂತರ ರೂ. ಖರ್ಚು ಮಾಡಿ ನಿರ್ವಿುಸಿರುವ ರಸ್ತೆಗ ಜೆಸಿಬಿ ಪೆಟ್ಟು ನೀಡಿರುವ ಜಲಮಂಡಳಿ ಕ್ರಮ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಲಮಂಡಳಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಮಹಾನಗರ ಪಾಲಿಕೆ ನಡುವೆ ಸಮನ್ವಯದ ಕೊರತೆ ಇರುವುದು ಎದ್ದು ಕಾಣುತ್ತದೆ. ಸಿಸಿ ರಸ್ತೆ ನಿರ್ವಣಕ್ಕೂ ಮುನ್ನವೇ ಜಲಮಂಡಳಿ, ಹೆಸ್ಕಾಂ, ಬಿಎಸ್​ಎನ್​ಎಲ್, ಒಳಚರಂಡಿ ಮಂಡಳಿ ಸೇರಿದಂತೆ ಇನ್ನಿತರ ಇಲಾಖೆಗಳ ಕಾಮಗಾರಿಗೆ ಸೂಚಿಸಿರಲಾಗುತ್ತದೆ.

    ರಸ್ತೆ ನಿರ್ವಣಕ್ಕೂ ಮುನ್ನವೇ ಶಾಶ್ವತ ಪರಿಹಾರ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ. ಆದರೆ, ಇಲ್ಲಿ ಎಡವಿದ್ದು ಜಮಂಡಳಿಯೋ ಅಥವಾ ರಾಷ್ಟ್ರೀಯ ಹೆದ್ದಾರಿಯೋ ಎಂಬ ಅಂಶ ಬೆಳಕಿಗೆ ಬರಬೇಕಿದೆ. ಸರ್ಕಾರದ ಹಣ ಈ ರೀತಿ ಪೋಲಾಗುತ್ತಿರುವುದರ ಹಿಂದೆ ಯಾರ ನಿರ್ಲಕ್ಷ್ಯದೆ. ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

    ಪೈಪ್ ಒಡೆದರೆ ಮತ್ತೆ ಅಗೆತ!: ಸಿಆರ್​ಎಫ್ ಅನುದಾನದಡಿ ನಿರ್ವಿುಸಿರುವ ಸಿಸಿ ರಸ್ತೆ ಅಡಿಯಲ್ಲೇ ಕುಡಿಯುವ ನೀರಿನ ಪೈಪ್​ಲೈನ್ ಅಳವಡಿಸಲಾಗಿದೆ. ಹೀಗಾಗಿ, ಪೈಪ್​ಲೈನ್ ಒಡೆದರೆ, ವಾಲ್ವ್ ದುರಸ್ತಿಗೆ ಬಂದರೆ ಮತ್ತೆ ಅನಿವಾರ್ಯವಾಗಿ ಹೊಸ ರಸ್ತೆ ಅಗೆಯಲೇಬೇಕಾಗುತ್ತದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು. ಹಾಗಾದರೆ, ಸರ್ಕಾರದ ಹಣ ನೀರಿನಂತೆ ಪೋಲು ಮಾಡಲು ಇವರೇ ಸಜ್ಜಾಗಿದ್ದಾರೆ ಎಂಬಂತಾಯಿತು. ಈ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

    ಅನುಮತಿ ಪಡೆಯಲಾಗಿದೆ: ರಸ್ತೆ ಅಡಿಯಲ್ಲಿ ಕುಡಿಯುವ ನೀರಿನ ಪೈಪ್​ಲೈನ್ ಇದೆ. ರಸ್ತೆ ನಿರ್ವಿುಸುವ ಮುನ್ನ ಆ ಲೈನ್ ಸ್ಥಳಾಂತರಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಹೇಳಿತ್ತು. ಆದರೆ, ಸ್ಥಳಾಂತರಿಸದೇ ರಸ್ತೆ ನಿರ್ವಿುಸಿತ್ತು. ಈಗ ಪೈಪ್​ಲೈನ್ ವಾಲ್ವ್ ಹಾಳಾಗಿದೆ. ಹಾಗಾಗಿ, ಅನಿವಾರ್ಯವಾಗಿ ರಸ್ತೆ ಅಗೆಯಬೇಕಾಗಿದೆ. ಎನ್​ಎಚ್​ಎಐ ಅನುಮತಿ ಪಡೆದು ರಸ್ತೆ ಅಗೆಯಲಾಗುತ್ತಿದೆ. ಕಾಮಗಾರಿ ಮುಗಿದ ಕೂಡಲೇ ಮತ್ತೆ ಸಿಮೆಂಟ್ ರಸ್ತೆ ದುರಸ್ತಿಗೊಳಿಸಲಾಗುವುದು ಎಂದು ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಎಚ್.ಎಸ್. ರಾಜಗೋಪಾಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts