More

    ಪಿಡಿಒ ಪರ ವಕಾಲತ್ತು ವಹಿಸಲು ಜೆಡಿಎಸ್ ಮುಖಂಡರು ಯಾರು? : ನುಗ್ಗೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗೌಡಾಕಿ ಮಂಜು ಪ್ರಶ್ನೆ


    ಹಾಸನ : ನನ್ನ ಅವಧಿಯಲ್ಲಿ ಸಾರ್ವಜನಿಕರ ಹಣವನ್ನು ಅನ್ಯವಶ್ಯಕವಾಗಿ ಖರ್ಚು ಮಾಡಿದ್ದರೆ ಹಾಗೂ ಅದನ್ನು ಸಾಬೀತುಪಡಿಸಿದರೆ ಆ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಸಿದ್ಧ ಎಂದು ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗೌಡಾಕಿ ಮಂಜು ಹೇಳಿದರು.


    ಸದ್ಯ ಇರುವ ಜೆಡಿಎಸ್ ಬೆಂಬಲಿತ ಅಧ್ಯಕ್ಷರ ಅವಧಿಯಲ್ಲಿ ಪಿಡಿಒ ಬೆನಾಮಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂ. ಲೂಟಿ ಮಾಡಿರುವ ಮಾಹಿತಿಯನ್ನು ದಾಖಲೆ ಸಮೇತ ಹೊರತಂದಿರುವುದಕ್ಕೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


    ಅಕ್ರಮ ಎಸಗಿರುವ ಪಿಡಿಒ ಪರ ವಕಾಲತ್ತು ವಹಿಸಲು ಜೆಡಿಎಸ್ ಮುಖಂಡರು ಯಾರು? ಗ್ರಾಪಂ ಸದಸ್ಯರೇ, ಇಲ್ಲವೇ ಅಧ್ಯಕ್ಷರೇ ಎಂಬುದೇ ತಿಳಿಯುತ್ತಿಲ್ಲ. ಗ್ರಾಪಂ ಅಧ್ಯಕ್ಷೆ ಮಂಜುಳಾ ಅವರಿಗೆ ಏನೂ ಗೊತ್ತಿಲ್ಲ ಎಂದರು.


    ಕಸಾಪ ಹೋಬಳಿ ಅಧ್ಯಕ್ಷ ದೊರೆಸ್ವಾಮಿ ಹಾಗೂ ಕ್ಲಾಸ್ 1 ಗುತ್ತಿಗೆದಾರ ತೋಟಿ ನಾಗರಾಜ್ ಅವರಿಗೆ ಪಂಚಾಯಿತಿ ವಿಚಾರ ಮಾತನಾಡುವ ನೈತಿಕತೆಯಿಲ್ಲ. ಈ ಇಬ್ಬರು ಪಿಡಿಒ ಜತೆ ಕೈಜೋಡಿಸಿ ಆಕ್ರಮಗಳಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.


    ಅಕ್ರಮ ಹಾಗೂ ಅವ್ಯವಹಾರ ಎಸಗಿರುವ ಪಿಡಿಒ ವಿರುದ್ಧ ಸೂಕ್ತ ತನಿಖೆ, ಶಿಕ್ಷೆ ಆಗಬೇಕು. ಈ ಸಂಬಂಧ ತಾಪಂ ಇಒ ಹಾಗೂ ಜಿಪಂ ಸಿಇಒ ಅವರಿಗೆ ಪತ್ರ ಬರೆಯಲಾಗಿದೆ. ಅವಶ್ಯಕತೆ ಇಲ್ಲದವರು ಬಹಿರಂಗ ಚರ್ಚೆಗೆ ಕರೆದರೆ ಅರ್ಥವಿಲ್ಲ. ಅಧ್ಯಕ್ಷರು ದಿನಾಂಕ ನಿಗದಿಗೊಳಿಸಿ ಕರೆಯಲಿ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದರು.
    ಗ್ರಾಮ ಪಂಚಾಯಿತಿ ಸದಸ್ಯರಾದ ಕಾಂತರಾಜು, ರಮ್ಯಾ, ಕಿರಣ್‌ಕುಮಾರ್, ಮಾಜಿ ಸದಸ್ಯ ಜಮ್ರುತ್ ಪಾಷ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts