More

    ಪಿಕೆಪಿಎಸ್‌ನಿಂದ ರೈತರ ಆರ್ಥಿಕಾಭಿವೃದ್ಧಿ

    ಗೋಕಾಕ: ಬಿಡಿಸಿಸಿ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತು ಮಂಜೂರು ಮಾಡಿಸಲಾಗುತ್ತಿದ್ದು, ರೈತರ ಆರ್ಥಿಕಾಭಿವೃದ್ಧಿಗೆ ಹಲವು ಸೌಲಭ್ಯ ನೀಡಲಾಗುತ್ತಿದೆ. ರೈತರ ಅಭಿವೃದ್ಧಿಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳು ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

    ತಾಲೂಕಿನ ಕಳ್ಳಿಗುದ್ದಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ಮಹಡಿ ಕಟ್ಟಡವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ರೈತರಿಗಾಗಿಯೇ ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದಾರೆ. ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಕತ್ತಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಬಿಡಿಸಿಸಿ ಬ್ಯಾಂಕ್ ನಮ್ಮ ಆಡಳಿತಕ್ಕೆ ಬಂದ ನಂತರ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಎಲ್ಲ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತು ನೀಡಲಾಗುತ್ತಿದೆ. ಕಳ್ಳಿಗುದ್ದಿ ಸಹಕಾರ ಸಂಘಕ್ಕೆ ಈ ಮೊದಲು 80 ಲಕ್ಷ ರೂ. ಪತ್ತು ಬರುತ್ತಿತ್ತು. ನಾವೀಗ ಸಂಘಕ್ಕೆ 4.25 ಕೋಟಿ ರೂ. ಪತ್ತು ಮಂಜೂರು ಮಾಡಿದ್ದೇವೆ. ಇದರಲ್ಲಿ 426 ಸಾಲಗಾರ ಸದಸ್ಯರಿಗೆ 3.43 ಕೋಟಿ ರೂ. ಪತ್ತು ಹಂಚಲಾಗಿದೆ ಎಂದು ಮಾಹಿತಿ ನೀಡಿದರು.

    ತೊಂಡಿಕಟ್ಟಿಯ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ರಾಮಣ್ಣ ಮಹಾರಡ್ಡಿ ಅಧ್ಯಕ್ಷತೆ ವಹಿಸಿದ್ದರು.

    ರಡ್ಡೇರಹಟ್ಟಿಯ ಬಸವರಾಜ ಹಿರೇಮಠ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಪ್ರದೇಶ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ, ಕಳ್ಳಿಗುದ್ದಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಗೌಡರ, ರವಿ ಪರುಶೆಟ್ಟಿ, ಅಡಿವೆಪ್ಪ ಅಳಗೋಡಿ, ಲಕ್ಷ್ಮಣ ಸಂಕ್ರಿ, ಲಕ್ಷ್ಮಣ ಚನ್ನಾಳ, ಪಿಕೆಪಿಎಸ್ ಉಪಾಧ್ಯಕ್ಷ ಹನುಮಂತ ಮಾವಿನಗಿಡದ, ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಮಹಾಂತೇಶ ಕುರಬೇಟ, ಬ್ಯಾಂಕ್ ನಿರೀಕ್ಷಕ ಬಿ.ಆರ್.ರೆಬ್ಬನವರ, ನಿರ್ದೇಶಕರಾದ ಭೀಮಪ್ಪ ಅಳಗೋಡಿ, ಅಶೋಕ ಚನ್ನಾಳ, ಹನುಮಂತ ಗೌಡರ, ಕಾರ್ಯದರ್ಶಿ ರಮೇಶ ದಳವಾಯಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts