More

    ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೆ ಡಿಸಿ ಸೂಚನೆ

    ಬಾಗಲಕೋಟೆ: ಕೇಂದ್ರ ಸರ್ಕಾರವು ಸ್ಥಳೀಯ ಕುಶಲಕರ್ಮಿಗಳ ಗುಡಿ ಕೈಗಾರಿಗಳ ಅಭಿವೃದ್ಧಿ ಹಾಗೂ ಏಳಿಕೆಗಾಗಿ ಪಿಎಂ ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅಧಿಕಾರಿಗಳಿಗ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಈ ಯೋಜನೆಯಡಿ ಒಟ್ಟು 18 ವರ್ಗದ ಕುಶಲ ಕರ್ಮಿಗಳು ಬರುತ್ತಿದ್ದು, ಯೋಜನೆಯಿಂದ ಅರ್ಹ ಫಲಾನುಭವಿಗಳಿಗೆ ತರಬೇತಿ ಹಾಗೂ ಸೌಲಭ್ಯ ಒದಗಿಸಬೇಕು. ಅರ್ಹ ಕುಶಲಕರ್ಮಿಗಳು ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‍ಸಿ), ಗ್ರಾಮ ಒನ್ ಸೇವಾ ಕೇಂದ್ರ, ಬಾಗಲಕೋಟೆ ಒನ್ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯ ಸೌಲಭ್ಯಕ್ಕೆ ನೋಂದಣಿಗೆ ಕ್ರಮವಹಿಸಲು ತಿಳಿಸಿದರು.

    ಯೋಜನೆಯಡಿ ಸೌಲಭ್ಯಕ್ಕಾಗಿ ನೋಂದಾಯಿಸಿಕೊಂಡ ಕುಶಲ ಕರ್ಮಿಗಳಿಗೆ ಬೇಸಿಕ್ 5 ರಿಂದ 7 ದಿನಗಳು ಹಾಗೂ ಮುಂಚಿತವಾಗಿ 15 ದಿನಗಳು ತರಬೇತಿ ಹಾಗೂ ಅವಧಿಯಲ್ಲಿ ಪ್ರತಿದಿನ 500 ರೂ.ಗಳಂತೆ ಸ್ಟೈಪಂಡ್ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ, ಕುಶಲಕರ್ಮಿ ಐಡಿ ಕಾರ್ಡ, 15 ಸಾವಿರ ರೂ ಟೂಲ್ ಕಿಟ್ ಪೆÇ್ರೀತ್ಸಾಹಧನ ಹಾಗೂ ಅರ್ಹ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ರೂ. 1 ಲಕ್ಷ ಗಳ ಸಾಲ ಸೌಲಭ್ಯ, 2ನೇ ಹಂತದಲ್ಲಿ ರೂ. 2 ಲಕ್ಷ ಗಳ ಸಾಲ ಸೌಲಭ್ಯವನ್ನು ಶೇ. 5ರ ಬಡ್ಡಿ ದರದಲ್ಲಿ ಬ್ಯಾಂಕ್‍ಗಳ ಮೂಲಕ ಒದಗಿಸಿ, ಫಾನುಭವಿಗಳು ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ಡಿಜಿಟಲ್ ವಹಿವಾಡಿಗೆ ಉತ್ತೇಜಿಸಲಾಗುತ್ತಿದೆ ಎಂದರು.

    ಈ ಯೋಜನೆಯಡಿಯಲ್ಲಿ ಪ್ರಸ್ತುತ ಬಡಗಿತನ, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ಬೀಗ ತಯಾರಿಕೆ, ಶಿಲ್ಪಕಲೆ (ಮೂರ್ತಿಕಾರರು, ಕಲ್ಲು ಕೆತ್ತನೆ), ಕಲ್ಲು ಪುಡಿ ಮಾಡುವವರು, ಆಭರಣ ತಯಾರಿಕೆ (ಅಕ್ಕಸಾಲಿಗರು), ಕುಂಬಾರಿಕೆ, ಚಮ್ಮಾರರು (ಚರ್ಮಗಾರಿಕೆ), ಪಾದರಕ್ಷೆ ತಯಾರಿಕೆ, ಗಾರೆ ಕೆಲಸಗಾರಿಕೆ (ಗೌಂಡಿ), ಪೆÇರಕೆ, ಬ್ಯಾಸ್ಕೆಟ್ಸ್, ಮ್ಯಾಟ್ ತಯಾರಿಕೆ, ನಾರುನೇಕಾರರು, ಸಾಂಪ್ರದಾಯಿಕ ಬೊಂಬೆ ಹಾಗೂ ಆಟಿಕೆ ಸಾಮಾನು ತಯಾರಿಕೆ, ಕ್ಷೌರಿಕರು, ಮಾಲೆ ತಯಾರಕರು, ಅಗಸಿಗರು(ಧೋಬಿ), ಸಿಂಪಿಗರು (ದರ್ಜಿ) ಹಾಗೂ ಮೀನುಗಾರಿಕೆ ಬಲೆ ತಯಾರಕರು ಸೇರಿ ಒಟ್ಟು 18 ವರ್ಗದ ಕುಶಲ ಕರ್ಮಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.

    ಫಲಾನುಭವಿಗಳು 18 ವರ್ಷ ಮೇಲ್ಪಟ್ಟವರು ಯೋಜನೆಯಡಿ ತಿಳಿಸಿದ ಕುಶಲಕರ್ಮಿಗಳು ಯಾವುದಾದರೊಂದು ವೃತ್ತಿಯಲ್ಲಿ ಸ್ವಯಂ ಉದ್ಯೋಗಸ್ಥರಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿರಬಾರದು. ಹೆಚ್ಚಿನ ಮಾಹಿತಿಗಳಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಜಿಲ್ಲಾಡಳಿತ ಭವನ ರೂಂ ನಂ118, ನವನಗರ ಬಾಗಲಕೋಟೆ ಕಛೇರಿ ದೂಸಂ. 08354-295210 ಹಾಗೂ 7676634184ಗೆ ಸಂಪರ್ಕಿಸುವಂತೆ ತಿಳಿಸಿದರು.

    ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಬಾರಿಗಿಡದ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಗುರುಪಾದಯ್ಯ ಹಿರೇಮಠ, ಜಿಲ್ಲಾ ಅಗ್ರಣಿ ಬ್ಯಾಂಕ್‍ನ ವ್ಯವಸ್ಥಾಪಕ ಮದುಸೂಧನ ಸೇರಿದಂತೆ ಇತರರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts