More

    ಪಿಂಚಣಿ ಹಣ ಅನಧಿಕೃತ ಬಳಕೆ: ಆರೋಪ

    ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಅಂದಾಜು 100 ಕೋಟಿ ರೂ. ಪಿಂಚಣಿ ಹಣವನ್ನು ಅನಧಿಕೃತವಾಗಿ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿ,ವಿ. ನಿವೃತ್ತ ಉದ್ಯೋಗಿಗಳ ಒಕ್ಕೂಟ ಆಗ್ರಹಿಸಿದೆ.

    ಒಕ್ಕೂಟದ ಆಶ್ರಯದಲ್ಲಿ ನಿವೃತ್ತ ಅಧ್ಯಾಪಕರು, ನೌಕರರು ಕ್ರಾಫರ್ಡ್ ಭವನದ ಹುಲ್ಲು ಹಾಸಿನ ಮೇಲೆ ಸಭೆ ನಡೆಸಿ ಚರ್ಚಿಸಿದರು.
    ಪಿಂಚಣಿ ಸೌಲಭ್ಯ ನೀಡುವ ದೃಷ್ಟಿಯಿಂದ ಠೇವಣಿ ಇಡಲಾಗಿದ್ದ ನಿವೃತ್ತ ಉದ್ಯೋಗಿಗಳ ಆಪತ್ತು ನಿಧಿ (ನಿವೃತ್ತಿ ವೇತನ)ಯಿಂದ ಸುಮಾರು 100 ಕೋಟಿ ರೂ. ವಾಪಸ್ ಪಡೆದು, ಅದನ್ನು ಕಾಮಗಾರಿಗಳಿಗೆ ಬಳಸಲಾಗಿದೆ. ಈ ರೀತಿ ಹಣ ದುರ್ಬಳಕೆ ಮಾಡಿಕೊಂಡು ಪಿಂಚಣಿದಾರರನ್ನು ಅತಂತ್ರ ಸ್ಥಿತಿಗೆ ದೂಡುವ ಆತಂಕ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಈ ನಿಧಿಯಲ್ಲಿರುವ ಹಣವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಅಥವಾ ಅನ್ಯ ಕಾರ್ಯಗಳಿಗೆ ಬಳಸಲು ಅವಕಾಶವಿಲ್ಲ. ಒಂದು ಪಕ್ಷ ಹಾಗೆ ಮಾಡಿದರೆ ಐಪಿಸಿ ಸೆಕ್ಷನ್ 406 ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಸಂಬಂಧ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಕೆ.ಮಹದೇವ್ ನೇತೃತ್ವದಲ್ಲಿ ಹೋರಾಟ ರೂಪಿಸಲು ಸಭೆ ತೀರ್ಮಾನಿಸಲಾಯಿತು.
    ಸಂಘದ ಮುಖಂಡರಾದ ಎ.ವಿ.ವಿಷಕಂಠ, ಬಿ.ಬೀರೇಗೌಡ, ಕೃಷ್ಣಮಲ್ಲೇಗೌಡ, ಪ್ರೊ.ಬಿ.ಶಿವರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts