More

    ಟೆರೇಷಿಯನ್ ಕಾಲೇಜು ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

    ಹುಣಸೂರು: ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಅಂತರ ವಲಯ ಮಹಿಳಾ ಕ್ರೀಡಾಕೂಟದಲ್ಲಿ ಮೈಸೂರಿನ ಟೆರೇಷಿಯನ್ ಕಾಲೇಜು ಮಹಿಳಾ ತಂಡ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.

    ಕ್ರೀಡಾಕೂಟದಲ್ಲಿ 13 ವಿವಿಧ ಕ್ರೀಡೆಗಳ ಪೈಕಿ ನಾಲ್ಕರಲ್ಲಿ ಪ್ರಥಮ, ಒಂದು ದ್ವಿತೀಯ ಮತ್ತು ಒಂದು ತೃತೀಯ ಸ್ಥಾನದೊಂದಿಗೆ ಒಟ್ಟು 24 ಅಂಕಗಳೊಂದಿಗೆ ಮೈಸೂರಿನ ಟೆರೇಷಿಯನ್ ಕಾಲೇಜು ವನಿತೆಯರು ಸಮಗ್ರ ತಂಡ ಪ್ರಶಸ್ತಿಗೆ ಭಾಜನರಾದರು. ಬಾಸ್ಕೆಟ್ ಬಾಲ್, ಹ್ಯಾಂಡ್ ಬಾಲ್, ಹಾಕಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ವಿನ್ನರ್, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ರನ್ನರ್‌ಅಪ್ ಮತ್ತು ಕಬಡ್ಡಿಯಲ್ಲಿ ತೃತೀಯ ಸ್ಥಾನ ಗಳಿಸಿದರು.

    ಜು.15ರಿಂದ 17ರವರೆಗೆ ಆಯೋಜನೆಗೊಂಡಿದ್ದ ಕ್ರೀಡಾಕೂಟದಲ್ಲಿ ಮೈಸೂರಿನ ಎಸ್‌ಬಿಆರ್‌ಆರ್ ಎಂಎಫ್ ಜಿಸಿ ಕಾಲೇಜು ತಂಡ 17 ಅಂಕಗಳೊಂದಿಗೆ (ದ್ವಿತೀಯ) ಹಾಗೂ ಮೈಸೂರಿನ ಪಿಜಿಎಸ್ ಸಿ ಎಂಜಿ ಕಾಲೇಜು 13 ಅಂಕಗಳೊಂದಿಗೆ (ತೃತೀಯ) ಸಮಗ್ರ ತಂಡವಾಗಿ ಹೊರಹೊಮ್ಮಿತು.

    ಅಂತಿಮ ದಿನವಾದ ಸೋಮವಾರ ನಡೆದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೆ.ಆರ್.ಪೇಟೆಯ ಜಿಎಫ್‌ಜಿಸಿ ಕಾಲೇಜು(ಪ್ರಥಮ), ಟೆರೇಷಿಯನ್ ಕಾಲೇಜು (ದ್ವಿತೀಯ)ಹಾಗೂ ಕೆ.ಆರ್.ನಗರದ ಜಿಎಫ್‌ಜಿಸಿ ಕಾಲೇಜು (ತೃತೀಯ) ಸ್ಥಾನ ಗಳಿಸಿತು.
    ಹಾಕಿ ಪಂದ್ಯದಲ್ಲಿ ಟೆರೇಷಿಯನ್ ಕಾಲೇಜು(ಪ್ರಥಮ), ಮೈಸೂರಿನ ಎಸ್‌ಬಿಆರ್‌ಆರ್ ಕಾಲೇಜು(ದ್ವಿತೀಯ) ಹಾಗೂ ನಾಗಮಂಗಲದ ಬಿಜಿಎಸ್ ಬಿಪಿಇಡಿ ಕಾಲೇಜು (ತೃತೀಯ) ಸ್ಥಾನ ಗಳಿಸಿತು.ಕಬಡ್ಡಿಯಲ್ಲಿ ಮೈಸೂರಿನ ವಿದ್ಯಾನಿಕೇತನ್ ಕಾಲೇಜು(ಪ್ರಥಮ), ಭಾರತೀನಗರದ ಭಾರತಿ ಕಾಲೇಜು(ದ್ವಿತೀಯ) ಹಾಗೂ ಟೆರೇಷಿಯನ್ ಕಾಲೇಜು (ತೃತೀಯ)ಸ್ಥಾನ ಗಳಿಸಿತು.ಸಾಫ್ಟ್ ಬಾಲ್ ಪಂದ್ಯಾವಳಿಯಲ್ಲಿ ಮೈಸೂರಿನ ಎಸ್‌ಬಿಆರ್‌ಆರ್ ಎಂಎಫ್‌ಜಿಸಿ ಕಾಲೇಜು (ಪ್ರಥಮ), ಕೊಳ್ಳೇಗಾಲದ ಜೆಎಸ್‌ಎಸ್ ಮಹಿಳಾ ಕಾಲೇಜು(ದ್ವಿತೀಯ) ಹಾಗೂ ಮೈಸೂರು ಜೆಎಸ್‌ಎಸ್ ಮಹಿಳಾ ಕಾಲೇಜು (ತೃತೀಯ) ಸ್ಥಾನ ಗಳಿಸಿತು.

    ಟೆನಿಕಾಯ್ಟ ಪಂದ್ಯದಲ್ಲಿ ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜು(ಪ್ರಥಮ), ವಿಜಯನಗರ ಜಿಎಫ್‌ಜಿಸಿ ಕಾಲೇಜು(ದ್ವಿತೀಯ) ಹಾಗೂ ಹಾಸನದ ಜಿಎಫ್ ಜಿಸಿ ಕಾಲೇಜು (ತೃತೀಯ) ಸ್ಥಾನ ಗಳಿಸಿತು.ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೈಸೂರು ಜೆಎಸ್‌ಎಸ್ ಮಹಿಳಾ ಕಾಲೇಜು(ಪ್ರಥಮ), ಹಾಸನದ ಜಿಎಫ್‌ಜಿಸಿ ಕಾಲೇಜು(ದ್ವಿತೀಯ) ಹಾಗೂ ಮಂಡ್ಯದ ಪಿಇಎಸ್ ಕಾಲೇಜು(ತೃತೀಯ) ಸ್ಥಾನ ಗಳಿಸಿತು.ವಾಲಿಬಾಲ್ ಪಂದ್ಯದಲ್ಲಿ ಟೆರೇಷಿಯನ್ ಕಾಲೇಜು (ಪ್ರಥಮ), ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು (ದ್ವಿತೀಯ) ಹಾಗೂ ಹಾಸನದ ಜಿಎಫ್‌ಜಿಸಿ ಕಾಲೇಜು (ತೃತೀಯ) ಸ್ಥಾನ ಗಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts