More

    ಪಾಠ ಪೂರ್ಣಗೊಳ್ಳದೆ ಪರೀಕ್ಷೆ ಬೇಡ

    ಶೃಂಗೇರಿ: ಕುವೆಂಪು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಿಸಬೇಕು. ಜೂನ್​ನಲ್ಲಿ ತರಗತಿಗಳು ಪ್ರಾರಂಭವಾಗಿದ್ದರಿಂದ ಪಾಠಗಳು ಸಂಪೂರ್ಣವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಒತ್ತಡದಲ್ಲಿ ಪರೀಕ್ಷೆ ಎದುರಿಸುವಂತಾಗಿದೆ ಎಂದು ಎಬಿವಿಪಿ ಮುಖಂಡ ನಾಗಪ್ರಸಾದ್ ಹೇಳಿದರು. ಕುವೆಂಪು ವಿವಿ ನೂತನ ಶೈಕ್ಷಣಿಕ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಸೋಮವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಜೆಸಿಬಿಎಂ ಕಾಲೇಜು ಸಮೀಪ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪದವಿಯ 4 ಹಾಗೂ 6ನೇ ಸೆಮಿಸ್ಟರ್​ಗೆ ಅ.30 ಕೊನೇ ದಿನವಾಗಿ ಹಾಗೂ ಸೆ.7ರಿಂದ ಪರೀಕ್ಷೆ ನಿಗದಿ ಮಾಡಿ ನೂತನಾ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದರು.

    2ನೇ ಸೆಮಿಸ್ಟರ್​ನ ವಿದ್ಯಾರ್ಥಿಗಳೂ ಇದೇ ಆತಂಕ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಬೇಕು ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳದ ಕುರಿತು ಮರು ಪರಿಶೀಲಿಸಬೇಕು ಎಂದು ಎಬಿವಿಪಿ ಪದಾಧಿಕಾರಿ ನಿತೀಶ್ ಒತ್ತಾಯಿಸಿದರು. ವಿದ್ಯಾರ್ಥಿಗಳು ತಹಸೀಲ್ದಾರ್ ಗೌರಮ್ಮ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts