More

    ಪಾಟೀಲ್ ಪೆಟ್ರೋಲಿಯಂಗೆ ನಂ.1 ಗರಿ

    ಬಸವಕಲ್ಯಾಣ: ಏಪ್ರಿಲ್-ಜುಲೈ 2022ರ ಅವಧಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಡೀಸೆಲ್ ಮಾರುವ ಮೂಲಕ ನಂ.1 ಸ್ಥಾನ ಪಡೆದ ಸಸ್ತಾಪುರ ಬಂಗ್ಲಾ ಹತ್ತಿರದ ಹಿಂದುಸ್ತಾನ ಪೆಟ್ರೋಲಿಯಂನ ಮೇ.ಪಾಟೀಲ್ ಪೆಟ್ರೋಲಿಯಮ್ಸ್ (ಬಂಕ್) ಮಾಲೀಕರಾದ ಪ್ರಭು ಪಾಟೀಲ್ ಮತ್ತು ಅವರ ಪುತ್ರರಾದ ಮಲ್ಲಿಕಾಜರ್ುನ ಪಾಟೀಲ್, ರವಿ ಪಾಟೀಲ್ ಅವರನ್ನು ಎಚ್ಪಿಸಿಎಲ್ನಿಂದ ಸನ್ಮಾನಿಸಲಾಯಿತು.

    ಬಂಕ್ನಲ್ಲಿ ಗುರುವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಪ್ರಭು ಪಾಟೀಲ್ ಅವರನ್ನು ಎಚ್ಪಿಸಿಎಲ್ ಹೈವೇ ರಿಟೇಲಿಂಗ್ ಪ್ರಧಾನ ವ್ಯವಸ್ಥಾಪಕ (ಜಿಎಂ) ಜಾಜರ್್ ಥಾಮಸ್ ಗೌರವಿಸಿ ಅಭಿನಂದಿಸಿದರು.

    ಶಾಸಕ ಶರಣು ಸಲಗರ ಮಾತನಾಡಿ, ಉತ್ತಮ ಸೇವೆ ಮೂಲಕ ಗ್ರಾಹಕರ ವಿಶ್ವಾಸ ಗಟ್ಟಿಗೊಳಿಸುವ ಜತೆಗೆ ದೇಶದಲ್ಲೇ ಹೆಚ್ಚು ಡೀಸೆಲ್ ಮಾರಿ ನಂ.1 ಸ್ಥಾನ ಪಡೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಚ್ಪಿಸಿಎಲ್ ಅಧಿಕಾರಿಗಳಾದ ಚಂದ್ರಮೌಳಿ, ಚೋಡಿಶೆಟ್ಟೆ ರಾಮಾನುಜಂ, ಪಿ.ಶ್ರೀಧರ್, ವಂಶಿಧರರೆಡ್ಡಿ, ಶಾಜೀದ್ ರೆಹಮಾನ್, ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ, ಪ್ರಮುಖರಾದ ವೈಜಿನಾಥ ಕಾಮಶೆಟ್ಟಿ, ಡಾ.ವಿ.ಎಸ್. ಮಠಪತಿ, ಸೋಮಶೇಖರ ವಸ್ತ್ರದ, ಕೇಶಪ್ಪ ಬಿರಾದಾರ, ಜಾಕೀರ್ ಮನಿಯಾರ್, ಬಸವರಾಜ ಚಿರಡೆ, ಅನೀಲ ಮೆಟಗೆ, ಕಾಶಪ್ಪ ಸಕ್ಕರಬಾವಿ, ದೇವೇಂದ್ರಪ್ಪ ಗುಣತೂರೆ, ಜಗನ್ನಾಥ ಖೂಬಾ, ಜಿತೇಂದ್ರಸಿಂಗ್ ಧಾಮಿ ಇತರರಿದ್ದರು. ಶಾಸಕರು ಸಹ ಪ್ರಭು ಪಾಟೀಲ್ ಅವರನ್ನು ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts