More

    ಪಾಕ್ ಪರ ಘೋಷಣೆ ಬರೆದ ವಿದ್ರೋಹಿಗಳು

    ಕಲಬುರಗಿ: ಕಲಬುರಗಿಯಲ್ಲಿಯೂ ಪಾಕಿಸ್ತಾನವನ್ನು ಬೆಂಬಲಿಸುವ ಕ್ರಿಮಿಗಳು ತಲೆ ಎತ್ತಿದ್ದು ಗೋಡೆ ಬರಹದ ಮೂಲಕ ಭಾನುವಾರ ವಿದ್ರೋಹಿಗಳ ಕೃತ್ಯ ಬೆಳಕಿಗೆ ಬಂದಿದೆ.
    ನಗರದ ಸಾತ್ ಗುಮ್ಮಜ್ ಹತ್ತಿರ ಇರುವ ಖಾಸಗಿ ಕಟ್ಟಡದ ಮೇಲೆ ಪಾಕಿಸ್ತಾನ್ ಜಿಂದಾಬಾದ್, ಪ್ರಧಾನಿ ನರೇಂದ್ರ ಮೋದಿ ಮುರ್ದಾಬಾದ್ ಎನ್ನುವುದು ಸೇರಿ ಅಶ್ಲೀಲ ಘೋಷಣೆಗಳನ್ನು ದುಷ್ಕರ್ಮಿಗಳು ಬರೆದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರ್ಯಾಲಿಯಲ್ಲಿ ಅಮೂಲ್ಯ ಲಿಯೋನಾ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಕೆಲ ದಿನಗಳಲ್ಲಿಯೇ ಸನ್ಸಿಟಿಯಲ್ಲಿ ಅದೇ ತರಹದ ಘಟನೆ ನಡೆರುವುದು ಇದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
    ಸಂತ್ರಾಸವಾಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಸಾಥ್ ಗುಮ್ಮಜ್ ಬಳಿಯಲ್ಲಿರುವ ಕಿಶನ್ರಾವ ಹಾಗರಗುಂಡಗಿ ಎಂಬುವರ
    ಮನೆಯ ಗೋಡೆಯ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆದ ದುಷ್ಕರ್ಮಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಮನಬಂದಂತೆ ಅವಹೇಳನ ಮಾಡುವ ರೀತಿಯಲ್ಲಿ ಅಶ್ಲೀಲ ಬರಹಗಳನ್ನು ಶನಿವಾರ ರಾತ್ರಿ ಬರೆದಿದ್ದಾರೆ ಎನ್ನಲಾಗಿದೆ.
    ತಮ್ಮ ಕಟ್ಟಡದ ಗೋಡೆಯ ಮೇಲೆ ದೇಶದ್ರೋಹಿ ಬರಹವನ್ನು ಬರೆದಿದ್ದನ್ನು ವಿರೋಧಿಸಿದ ಕಟ್ಟಡದಲ್ಲಿರುವ ಮನೋಜ್ ಚೌದರಿಯವರು ಆನಂದ ಚವ್ಹಾಣ, ಸಿದ್ದರಾಜ ಬಿರಾದಾರ, ಪ್ರದೀಪ ಪ್ರಶಾಂತ ಗುಡ್ಡಾ ಮಹೇಶ ಪಾಟೀಲ್ ಅವರ ಜತೆ ಚೌಕ್ ಠಾಣೆಗೆ ಆಗಮಿಸಿ ದೇಶದ್ರೋಹದ ದೂರು ಸಲ್ಲಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದರು.
    ದೂರ ದಾಖಲಿಸಿಕೊಂಡ ಚೌಕ್ ಪೊಲೀಸ್ರು ಸ್ಥಳಕ್ಕೆ ದೌಡಾಯಿಸಿ ವಿದ್ರೋಹಿ ಬರಹವನ್ನು ಅಳಿಸಿ ಹಾಕಿದರು. ಬರಹದ ಪೋಟೋಗಳನ್ನು ಹಾಗೂ ವಿಡಿಯೋಗಳನ್ನು ಸಾಕ್ಷಿಗಾಗಿ ಸಂಗ್ರಹಿಸಿಕೊಂಡರು.
    ವಿಷಯ ಗಮನಕ್ಕೆ ಬರುತ್ತಲೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಹಿಂದೂಪರ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು ಸಾಥ್ ಗುಮ್ಮಜ್ ಪ್ರದೇಶದಲ್ಲಿ ಪಾಕ್ ಪರ ಬರಹ ಬರೆದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದರು.
    ಪ್ರತಿಭಟನೆಯಲ್ಲಿ ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಮತ್ತು ಗ್ರಾಮೀಣ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ, ಶ್ರೀ ರಾಮ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಶ್ವೇತಾ ಓಂಪ್ರಕಾಶ, ಉಮೇಶ ಪಾಟೀಲ್, ಮಹೇಶ ಕೆ. ಪಾಟೀಲ್, ಸಿದ್ದರಾಜ ಬಿರಾದಾರ್, ಮಂಜುನಾಥ ಅಂಕಲಗಿ, ಶರಣಬಸಪ್ಪ, ಸಿದ್ದು ಹಿರೇಮಠ, ಶಿವಂ ನಾಶಿ, ರಾಜೇಶ ಹಾಗರಗಿ, ಸೇರಿ ಪ್ರಮುಖರು ಪಾಲ್ಗೊಂಡು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರಲ್ಲದೇ ಕೆಲ ಸಮಯ ಅಲ್ಲಿಯೇ ಪ್ರತಿಭಟನೆ ನಡೆಸಿದರು.
    ಒಂದು ಹಂತದಲ್ಲಿ ಠಾಣೆಗೆ ನುಗ್ಗಿದ ಕೆಲವರು ಪೊಲೀಸ್ ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದರು. ಇಂಥ ಕೃತ್ಯಗಳು ಅದ್ಹೇಗೆ ನಡೆಯುತ್ತಿವೆ ಎಂದು ಪ್ರಶ್ನಿಸಿ ಕೂಡಲೇ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಬೇಕೆಂದು ಒತ್ತಡ ಹೇರಿದರು.
    ನಂತರ ಚೌಕ್ ಠಾಣೆಯಿಂದ ಮೆರವಣಿಗೆ ಮೂಲಕ ಸಾತ್ ಗುಮ್​ಜ್ ಹತ್ತಿರ ಬಂದು ಅಲ್ಲಿ ರಸ್ತೆ ತಡೆಗೆ ಇಳಿದರಲ್ಲದೇ ಭಾರತ ಮಾತಾಕಿ ಜೈ, ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗಿದರು.
    ಸಾತ ಗುಂಬಜ್ ಹತ್ತಿರ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಸೂಚಿಸಿದರು. ಪ್ರಮುಖರೆಲ್ಲ ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ್ ಅವರನ್ನು ಭೇಟಿ ಮಾಡಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ಮತ್ತು ಪಕ್ಷದ ಯುವ ನಾಯಕ ಚಂದು ಪಾಟೀಲ್ ನೇತೃತ್ವದಲ್ಲಿ ಕಲಬುರಗಿ ಬಂದ್ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಆರೋಪಿಗಳ ಪತ್ತೆಗೆ ಈಗಾಗಲೇ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಯಾವುದಕ್ಕೂ ಉದ್ವೇಗಕ್ಕೆ ಒಳಗಾಗಬೇಡಿ ಎಂದು ಆಯುಕ್ತರು ಭರವಸೆ ನೀಡಿದರು.
    ದುಷ್ಕರ್ಮಿ ಗಳ ಪತ್ತೆಗೆ ವಿಶೇಷ ತಂಡ
    ಕಲಬುರಗಿ ನಗರದ ಸಾಥ್ ಗುಮ್ಮಜ್ ಬಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಬರೆದ ದುಷ್ಕರ್ಮಿ ಗಳನ್ನು ಪತ್ತೆ ಮಾಡಲು ಡಿಸಿಪಿ ಕಿಶೋರಬಾಬು ಅವರ ನೇತೃತ್ವದಲ್ಲಿ ಎಸಿಪಿ ಗಿರೀಶ ಸೇರಿ ಐವರು ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಬರಹ ನಮಗೂ ಶಾಕ್ ತಂದಿದೆ. ಈ ರೀತಿಯ ರೀತಿಯ ಬರಹಗಳನ್ನು ಬರೆದವರನ್ನು ಪತ್ತೆ ಮಾಡಲು ಸಿಸಿಟಿವಿ ಕ್ಯಾಮರಾಗಳನ್ನು ಸಹ ಪರಿಶೀಲಿಸಲಾಗುವುದು.
    -ಎಂ. ಎನ್. ನಾಗರಾಜ್ ಮಹಾನಗರ ಪೊಲೀಸ್ ಆಯುಕ್ತ, ಕಲಬುರಗಿ

    ನಗರದ ಖಾಸಗಿ ಕಟ್ಟಡವೊಂದರ ಮೇಲೆ ಪಾಕಿಸ್ತಾನ ಜಿಂದಾಬಾದ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಬರೆದಿರುವ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಬೇಕು. ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಮತ್ತು ಎಲ್ಲ ಜಾತಿ-ಜನಾಂಗ ಮತ್ತು ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕಲಬುರಗಿ ನಗರದಲ್ಲಿ ಇಂಥ ಘೋಷಣೆಗಳ ಬರಹ ಕಂಡು ಬಂದಿದ್ದನ್ನು ನೋಡಿದರೆ ಕೆಲ ದುಷ್ಕರ್ಮಿಗಳು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಇಂಥ ಕೃತ್ಯಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಮೂಲಕ ನಗರದ ಶಾಂತತೆ ಇನ್ನಷ್ಟು ಗಟ್ಟಿಗೊಳಿಸಬೇಕು
    -ಬಿ.ಜಿ. ಪಾಟೀಲ್
    ವಿಧಾನ ಪರಿಷತ್ ಸದಸ್ಯ, ಕಲಬುರಗಿ

    ಕಲಬುರಗಿಯಲ್ಲಿ ಇಂಥ ಬರಹಗಳು ಕಂಡಿದ್ದು, ನಿಜಕ್ಕೂ ಆತಂಕ ತರುವಂಥದ್ದು, ಪೊಲೀಸ್ರು ಇದನ್ನು ಸರಳವಾಗಿ ಬಿಡಬಾರದು. ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಕೊಳ್ಳಬೇಕು. ಆ ಮೂಲಕ ಇಂಥಹದಕ್ಕೆ ಇತಿಶ್ರೀ ಹಾಡಬೇಕು. ಆರೋಪಿಗಳ ಬಂಧನದಲ್ಲಿ ವಿಳಂಬವಾದರೆ ಕಲಬುರಗಿ ನಗರ ಬಂದ್ ಕರೆಕೊಡಲಾಗುವುದು
    ಸಿದ್ದಾಜಿ ಪಾಟೀಲ್ ಮಹಾನಗರ ಬಿಜೆಪಿ ಅಧ್ಯಕ್ಷ, ಕಲಬುರಗಿ

    ದೇಶದ್ರೋಹಿ ಬರಹವನ್ನು ಗೋಡೆಯ ಮೇಲೆ ಬರೆದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಕೊಳ್ಳಬೇಕು. ಇಲ್ಲವಾದಲ್ಲಿ ಕಲಬುರಗಿ ಬಂದ್ ನಡೆಸಬೇಕಾಗುತ್ತದೆ ಎಂದು ಕಟ್ಟಡದಲ್ಲಿರುವ ಮತ್ತು ಪೊಲೀಸ್ರಿಗೆ ದೂರು ನೀಡಿರುವ ಮನೋಜ ಚೌಧರಿ ಮತ್ತು ಸಿದ್ದರಾಜ ಬಿರಾದಾರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts