More

    ಪಾಕಿಸ್ತಾನದ ರಾಯಭಾರಿಗಳೇ ಬಿಜೆಪಿಗರು !

    ಬಾಗಲಕೋಟೆ: ಬಿಜೆಪಿಯವರಿಗೆ ಪಾಕಿಸ್ತಾನ ಮನೆ ದೇವರು, ಪಾಕಿಸ್ತಾನದ ರಾಯಭಾರಿಗಳು ಅವರೇ, ಪಾಕಿಸ್ತಾನದ ಹೆಸರು ಹೇಳಿಕೊಂಡೇ ಇವರು ಬದುಕುತ್ತಿದ್ದಾರೆ. ಪಾಕಿಸ್ತಾನದ ಹೆಸರು ಹೇಳಿ ಹೇಳಿ ಅವರು ನಮ್ಮ ದೇಶದ ಹೆಸರು ಮರೆತಿದ್ದಾರೆ. ಪಾಕ್ ಹೆಸರು ಹೇಳದೇ ಒಂದು ದಿನವೂ ಅವರಿಗೆ ಇರಲು ಆಗಲ್ಲ. ಪಾಕಿಸ್ತಾನ ಹೆಸರು ಹೇಳದೇ ಇದ್ದರೆ ಅವರಿಗೆ ನಿದ್ದೆಯೂ ಬರುವುದಿಲ್ಲ.

    ಹೀಗೆಂದು ಬಿಜೆಪಿಗರ ವಿರುದ್ದ ತೀವ್ರ ಕೆಂಡಾಮಂಡಲರಾಗಿದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ. ರಾಜ್ಯಸಭೆ ಚುನಾವಣೆ -Àಲಿತಾಂಶದ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಗೂ ರಾಮೇಶ್ವರಂ ಕೆ-ೆ ಬಾಂಬ್ ಸೋಟದಲ್ಲಿ ಸರ್ಕಾರದ ವಿರುದ್ದ ಮುಗಿಬಿದ್ದಿರುವ ಬಿಜೆಪಿ ಮುಖಂಡರಿಗೆ ಚಾಟಿ ಬೀಸಿದ ಅವರು, ಪಾಕಿಸ್ತಾನದ ಹೆಸರು ಅವರಷ್ಟು ಯಾರೂ ಸಹ ಹೇಳಲ್ಲ. ಕಾಂಗ್ರೆಸ್ ಪಕ್ಷದವರು ಪಾಕಿಸ್ತಾನದ ಹೆಸರು ಹೇಳುತ್ತಾರಾ? ಇವರೇಕೆ ಅಷ್ಟು ಸಲ ಆ ದೇಶವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

    ಬಾಂಬ್ ಸೋಟ ಯಾರು ಮಾಡಿದ್ದಾರೆ? ಏನು ಮಾಡಿದ್ದಾರೆ ಎಂದು ವರದಿ ಬರಬೇಕು. ಆದರೆ, ಇವರು(ಬಿಜೆಪಿ) ಇದೆಲ್ಲವನ್ನು ಕಾಂಗ್ರೆಸ್ ನವರೇ ಮಾಡಿಬಿಟ್ಟಿದ್ದಾರೆ. ಉಗ್ರರು ಮಾಡಿಬಿಟ್ಟರು ಎಂದು ಎಲ್ಲವೂ ತಮಗೆ ಗೊತ್ತಿರುವಂತೆ ಹೇಳುತ್ತಾರೆ. ಅಲ್ಲಿ ಯಾರು ಬಂದಿದ್ದರು, ಏನು ಮಾಡಿದರು ಎಂದು ಇವರೇನಾದರೂ ನೋಡಿದ್ದಾರೆ. ತಾವೇ ಪೊಲೀಸ್, ವಕೀಲ್, ಜಡ್ಜ್ ಎನ್ನುವಂತೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು? ಕೆಪಿಸಿಸಿ ಅಧ್ಯಕ್ಷರ ವಿರುದ್ದ ಟೀಕೆ ಮಾಡುತ್ತಾರೆ. ಹಿಂದೆ ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದು ಯಾರು? ಮಂಗಳೂರಲ್ಲಿ ಅಲ್ಪಸಂಖ್ಯಾತ ಸಮಾಜದ ಯುವಕ ಕೊಲೆ ಮಾಡಿದ್ದಾನೆ ಎಂದು ಅಬ್ಬರಿಸಿ ಆಯಾ ಚುನಾವಣೆಗಳಲ್ಲಿ ಲಾಭ ಪಡೆದುಕೊಂಡ ಬಿಜೆಪಿ, ಅಲ್ಲಿನ ವಾಸ್ತವದ ಬಗ್ಗೆ ಮಾತನಾಡಿತಾ? ಚುನಾವಣೆ ಬಂದಾಗಲೇ ಇಂತ ಘಟನೆಗಳು ನಡೆಯುವುದು, ಅದರಿಂದ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳುವ ಬಗ್ಗೆ ನನಗೆ ಅನುಮಾನ ಇದೆ ಎಂದರು.

    ಬಿಜೆಪಿಯವರು ಬಾಯಿ ಬಿಟ್ಟರೆ ಪಾಕಿಸ್ತಾನ್, ತಾಲಿಬಾನ್, ಉಗ್ರರು ಎನ್ನುತ್ತಾರೆ. ಅವರಿಗೆ ದೇಶ, ಧರ್ಮ ಯಾವುದೂ ಬೇಕಾಗಿಲ್ಲ. ಅಽಕಾರ ಬೇಕು ಅಷ್ಟೆ. ಅಽಕಾರ ಹಿಡಿಯಲು ಯಾವ ಅಡ್ಡದಾರಿ ಬೇಕಾದರೂ ಹಿಡಿಯುತ್ತಾರೆ. ಕಾಂಗ್ರೆಸ್ ಪಕ್ಷ ಇಂತ ಸಂದರ್ಭಗಳಲ್ಲಿ ರಾಜಕಾರಣ ಮಾಡಲು ಹೋಗಲ್ಲ. ಈ ಹಿಂದೆ ಪಾರ್ಲಿಮೆಂಟ್ ಮೇಲೆ ಉಗ್ರರ ದಾಳಿ, ಕಾರ್ಗಿಲ್ ಯುದ್ದ ನಡೆದಿದ್ದು ಯಾರ ಕಾಲದಲ್ಲಿ? ಕಾಂಗ್ರೆಸ್ ಏನಾದರೂ ಅದರಲ್ಲಿ ರಾಜಕೀಯ ಉಪಯೋಗ ಪಡೆದುಕೊಳ್ಳುವಂತೆ ನಡೆದುಕೊಂಡಿತಾ? ಪಾರ್ಲಿಮೆಂಟ್ ಮೇಲಿನ ದಾಳಿ ನಮ್ಮ ದೇಶಕ್ಕೆ ಆದ ಅಪಮಾನ ಎಂದು ನಾವು ನೋವು ಅನುಭವಿಸಿದೇವು. ಈಗ ಬಿಜೆಪಿ ಏನು ಮಾಡುತ್ತಿದೆ? ಅಽಕಾರಕ್ಕಾಗಿ ನಿತ್ಯ ಎದ್ದಕೂಡಲೇ ಪಾಕಿಸ್ತಾನ್, ಪಾಕಿಸ್ತಾನ್ ಎಂದು ಹೇಳುತ್ತದೆ. ಅವರಷ್ಟು ಸಲ ಪಾಕಿಸ್ತಾನದ ಹೆಸರು ಮತ್ತ್ಯಾರು ಹೇಳಲ್ಲ. ಅವರ ಈ ಎಲ್ಲ ನಾಟಕಗಳು ಜನರಿಗೆ ಗೊತ್ತಾಗಿದೆ. ಈ ಸಲ ಅವರ ಆಟೋಟೋಪ ನಡೆಯಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts