More

    ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಎಸ್ ಪತ್ತೆ!


    ಯಾದಗಿರಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಇನ್ನೂ ಹಸಿಹಸಿಯಾಗಿದ್ದಾಗಲೇ ಮತ್ತೊಂದು ಅಕ್ರಮ ಬಯಲಾಗಿದೆ.
    ರಾಜ್ಯಾದ್ಯಂತ ಶನಿವಾರ ಮತ್ತು ಭಾನುವಾರ ಸರಕಾರಿ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ)ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ನಗರದ ಖಾಸಗಿ ಕಾಲೇಜಿನ ಕೇಂದ್ರಗಳಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಕನ್ನಡ ವಿಷಯಕ್ಕೆ ಅಭ್ಯರ್ಥಿಯೊಬ್ಬ ಬ್ಲುಟೂತ್ ಬಳಸಿ ಪರೀಕ್ಷೆ ಬರೆಯುತ್ತಿರುವುದು ಪತ್ತೆಯಾದ ತಕ್ಷಣ ಅಲರ್ಟ್ ಆದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


    ಇದಲ್ಲದೆ, ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಸುತ್ತಮುತ್ತ ಅನುಮಾಸ್ಪದವಾಗಿ ಓಡಾಡುತ್ತಿದ್ದ ಆರೇಳು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮದ ಪುಟ್ಟಪ್ಪ ಎಂಬ ಯುವಕನೊಬ್ಬನನ್ನು ವಶ ಪಡಿಸಿಕೊಳ್ಳಲಾಗಿದೆ. ಸಧ್ಯ ಆತನ್ನನು ಅಜ್ಞಾತ ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದಾರೆ. ನಗರದ ಠಾಣೆಯಲ್ಲಿ ಮೇಲಿಂದ ಮೇಲೆ ಒಂದಿಷ್ಟು ಯುವಕರನ್ನು ಪೊಲೀಸರು ತಮ್ಮ ಜೀಪ್ಗಳಲ್ಲಿ ಕರೆತಂದು ಒಳಗಡೆ ವಿಚಾರಣೆ ನಡೆಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಠಾಣೆಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಹಾಗೂ ಎಸ್ಪಿ ಜಿ.ಸಂಗೀತಾ ದೌಡಾಯಿಸಿ, ಕೆಲಹೊತ್ತು ಚರ್ಚೆ ನಡೆಸಿದರು.

    ನಂತರ ಸುದ್ದಿಗಾರರದೊಂದಿಗೆ ಮಾತನಾಡಿದ ಡಿಸಿ ಡಾ.ಸುಶೀಲಾ, ನಗರದ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಒಬ್ಬ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿರುವುದು ಖಚಿತವಾಗಿದೆ. ಸಧ್ಯ ಮೂರು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶನಿವಾರ ಸಂಜೆ ಅಥವಾ ಭಾನುವಾರ ಬೆಳಗ್ಗೆಯೊಳಗೆ ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಲಿದ್ದಾರೆ ಎಂದು ವಿವರಿಸಿದರು.
    ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 7884 ಅಭ್ಯರ್ಥಿಗಳು ಹಾಜರಾಗಿದ್ದಾರೆ. ಅಲ್ಲದೆ, ಭಾನುವಾರವೂ ಪರೀಕ್ಷೆಗಳು ನಡೆಯಲಿವೆ. ಬ್ಲುಟೂತ್ ಬಳಸಿ ಅಕ್ರಮವಾಗಿ 25ರಿಂದ 30 ಜನ ಪರೀಕ್ಷೆ ಬರೆದಿದ್ದಾರೆ ಎಂಬ ದಟ್ಟ ಅನುಮಾನಗಳು ಕಾಡುತ್ತಿವೆ.

    ಬಳಕೆಯಾಗದ ಮೆಟಲ್ ಡಿಟೆಕ್ಟರ್!: ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಸರಕಾರ ಎಚ್ಚೆತ್ತುಕೊಂಡಿದ್ದು, ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹದ್ದಿನ ಕಣ್ಣಿರಿಸಿದೆ. ಅಭ್ಯರ್ಥಿಗಳು ಕೇಂದ್ರದೊಳಗೆ ಪ್ರವೇಶಿಸಬೇಕಾದರೆ, ಇಎಂಟಿ ತಜ್ಞರಿಂದ ತಪಾಸಣೆ ನಡೆಸಲಾಗುತ್ತಿತ್ತು. ಅಲ್ಲದೆ, ಮೆಟಲ್ ಡಿಟೆಕ್ಟರ್ನಿಂದಲೂ ತಪಾಸಣೆ ನಡೆಸಿಯೇ ಒಳಗೆ ಬಿಡಲಾಗುತ್ತಿತ್ತು. ಆದರೆ ಶನಿವಾರ ಜರುಗಿದ ಪರೀಕ್ಷೆಯಲ್ಲಿ ಪೊಲೀಶರು ನಾಮ್ಕಾವಾಸ್ತೆ ಅಭ್ಯರ್ಥಿಗಳನ್ನು ಚೆಕ್ ಮಾಡಿ ಕೇಂದ್ರದೊಳಗೆ ಬಿಟ್ಟಿದ್ದಾರೆ. ಅಲ್ಲದೆ, ಬೆಳಗ್ಗೆ ಮೆಟಲ್ ಡಿಟೆಕ್ಟರ್ ಸಾಧನ ಬಳಸಿಲ್ಲ. ಪರೀಕ್ಷೆಯಲ್ಲಿ ಬ್ಲೂಟೂತ್ ಪತ್ತೆಯಾದ ತಕ್ಷಣ ಎಚ್ಚೆತ್ತ ಖಾಕಿಪಡೆ ಮೆಟಲ್ ಡಿಟೆಕ್ಟರ್ ಸಾಧನಗಳನ್ನು ಹಿಡಿದು ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಡನೆ ಫೋಟೊ ತಗೆಸಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಪರೀಕ್ಷೆಯಲ್ಲಿ ಎಡವಿತೇ ಜಿಲ್ಲಾಡಳಿತ?: ಜಿಲ್ಲಾಡಳಿತ ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ಸಿದ್ಧತೆ ಸಭೆ ನಡೆಸುತ್ತದೆ. ಅದರಲ್ಲೂ ಪಿಎಸ್ಐ ಅಕ್ರಮ ಬೆಳಕಿಗೆ ಬಂದ ನಂತರ ಅಧಿಕಾರಿಗಳನ್ನು ಸಾಕಷ್ಟು ಅಲಟರ್್ ಮಾಡುತ್ತಿದೆ. ಆದರೂ ಬ್ಲೂಟೂತ್ ಡಿವೈಸ್ ಕೇಂದ್ರದ ಒಳಗೆ ಅಭ್ಯರ್ಥಿ ಹೇಗೆ ತೆಗೆದುಕೊಂಡು ಹೋಗಿದ್ದ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಇನ್ನೂ ಇನ್ನೂ ನಗರ ಪೊಲೀಸ್ ಠಾಣೆ ಮುಂದೆ ಮಾಧ್ಯದವರು ಇರುವುದನ್ನು ಕಂಡ ಪೊಲೀಸರು ವಶಕ್ಕೆ ಪಡೆದು ಕರೆ ತಂದಿದ್ದ ಕೆಲವರನ್ನು ವಾಪಸ್ ಕರೆದುಕೊಂಡು ಹೋದ ಪ್ರಸಂಗ ಸಹ ನಡೆಯಿತು. ಮೂಲಗಳ ಪ್ರಕಾರ ಪರೀಕ್ಷಾ ಕೇಂದ್ರ ಸುತ್ತಮುತ್ತ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆಲವರು ಅನುಮಾನಸ್ಪದವಾಗಿ ಓಡಾಡಿದ್ದರು ಎನ್ನಲಾಗಿದೆ.

    ———

    ಪರೀಕ್ಷೆ ನಡೆಯುತ್ತಿದ್ದ ವೇಳೆ ಒಬ್ಬ ಅಭ್ಯರ್ಥಿ ಬಳಿ ಬ್ಲೂಟೂತ್ ಡಿವೈಸ್ ಪತ್ತೆಯಾಗಿರುವದು ಖಚಿತವಾಗಿದೆ. ಆತ ಕಲಬುರಗಿ ಜಿಲ್ಲೆಯ ಅಫಜಲ್ಪುರ ನಿವಾಸಿ ಎಂದು ತಿಳಿದು ಬಂದಿದೆ. ಪೊಲೀಸರು ಇನ್ನೂ ವಿಚಾರಣೆ ನಡೆಸುತ್ತಿದ್ದು, ಇಂದು ಸಂಜೆ ವೇಳೆಗೆ ಸಮಗ್ರ ಮಾಹಿತಿ ನೀಡಲಾಗುವುದು.
    | ಡಾ.ಸುಶೀಲಾ ಬಿ., ಜಿಲ್ಲಾಧಿಕಾರಿ

    ಐದಾರು ಜನರನ್ನು ಸಧ್ಯ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಅಕ್ರಮದ ಹಿಂದಿನ ಸೂತ್ರಧಾರ ಯಾರು ಎಂಬ ಬಗ್ಗೆ ಪತ್ತೆ ಹಚ್ಚಲಾಗುವುದು.
    | ಜಿ.ಸಂಗೀತಾ ಎಸ್ಪಿ ಯಾದಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts