More

    ಪರಿಹಾರ ನೀಡುವಲ್ಲಿ ತಾರತಮ್ಯ

    ಯಾದಗಿರಿ: ರಾಜ್ಯ ಸಕರ್ಾರ ಜಿಲ್ಲೆಗೆ ಬೆಳೆ ಹಾನಿ ಪರಿಹಾರ ಘೋಷಿಸದೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಎಸ್.ಬಿ. ಕಾಮರಡ್ಡಿ ಬೆಂಡೆಬೆಂಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂಕಷ್ಟದ ಸ್ಥಿತಿಯಲ್ಲೂ ಸಕರ್ಾರ ಸಂತ್ರಸ್ತರ ಕೈ ಹಿಡಿಯುವ ಬದಲು ಮತ್ತಷ್ಟು ಸಂಕಟಕ್ಕೆ ದೂಡುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ಸಕರ್ಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

    ಮಳೆಯಿಂದಾಗಿ ಮಳೆ, ಮನೆ, ರಸ್ತೆ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದು ನಾಚಿಕೆಗೇಡು ಸಂಗತಿ. ಕೆಲ ಜಿಲ್ಲೆಗಳಿಗೆ ಸಕರ್ಾರ ಪರಿಹಾರ ಘೋಷಿಸಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಹಾನಿ ಆಗಿದ್ದರೂ ನಯಾಪೈಸೆ ಪರಿಹಾರ ನೀಡಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಬಳಿದಂತೆ ನಡದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬೆಳೆಗಳು ಸಾಕಷ್ಟು ಹಾನಿಗೀಡಾಗಿದ್ದು, ರೈತರಿಗೆ ಮಾಡಿದ ಸಾಲ ತೀರಿಸಲು ಸಹ ಆಗದಂತಹ ಸ್ಥಿತಿ ಇದೆ. ಅವರ ಬೆನ್ನಿಗೆ ಸಕರ್ಾರ ನಿಲ್ಲದ್ದರಿಂದ ಜೀವನ ನಿರ್ವಹಣೆಗೆ ಪರದಾಡುವಂತಹ ಸ್ಥಿತಿ ಸೃಷ್ಟಿಯಾಗಿದೆ. ಸಿಎಂ ಬೊಮ್ಮಾಯಿ ಮಾತೆತ್ತಿದರೆ ನಮ್ಮದು ರೈತ ಮತ್ತು ಬಡವರ ಪರ ಸಕರ್ಾರ ಎನ್ನುತ್ತಾರೆ. ನೆರೆಯಿಂದ ಕಂಗೆಟ್ಟಿರುವ ಕುಟುಂಬಗಳು ಕಣ್ಣಿಗೆ ಬೀಳದಿರುವುದು ವಿಚಿತ್ರ. ಜಿಲ್ಲೆಯ ರೈತರಿಗೆ ತಕ್ಷಣ ನಷ್ಟ ಪರಿಹಾರ ಕೊಡಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾದೀತು ಎಂದು ಡಾ.ಕಾಮರಡ್ಡಿ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts