More

    ಪರಿಸರ ಪ್ರೇಮಿ ನಾಯಕ

    ರೋಣ: ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿಯಿಂದ ಪರಿಸರ ರಕ್ಷಕ. ಇವರೇ ಪಟ್ಟಣದ ಮಂಜುನಾಥ ನಾಯಕ.

    ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾಗಿರುವ ನಾಯಕ ಅವರಿಗೆ ಪರಿಸರ ಕಾಳಜಿ ಅಪಾರ. ಭಾನುವಾರ ಹಾಗೂ ರಜಾ ದಿನಗಳಲ್ಲಿ ರಾಜ್ಯದ ಹಲವೆಡೆ ಸುತ್ತಾಡಿ ಪರಿಸರ ಪ್ರಜ್ಞೆ ಮೂಡಿಸುವ ಕೆಲಸವನ್ನು ನಿರಂತರವಾಗಿ ಕೈಗೊಂಡಿದ್ದಾರೆ.

    ಬಾಲ್ಯದಿಂದಲೇ ಪರಿಸರದ ಜೊತೆಗೆ ನಿಕಟ ಸಂಬಂಧ ಹೊಂದಿದ ಮಂಜುನಾಥ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಶಾಲಾ- ಕಾಲೇಜುಗಳಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಬರೀ ಬೋಧನೆ ಮಾಡದೆ, ಶಾಲಾ- ಕಾಲೇಜು ಆವರಣದಲ್ಲಿ ಮಕ್ಕಳಿಂದ ಸಸಿಗಳನ್ನು ನೆಡಸುತ್ತಾರೆ.

    ಗಾಯಗೊಂಡ ಪಕ್ಷಿ, ಪ್ರಾಣಿ ಚಿಕಿತ್ಸೆ ನೀಡುತ್ತಾರೆ. ರೋಗ ಪೀಡಿತ ಮರಗಳಿಗೂ ಔಷಧೋಪಚಾರ ಮಾಡುತ್ತಾರೆ. ಇದಕ್ಕಾಗಿಯೇ, ತಮ್ಮ ಸಂಬಳದ ಶೇ.30 ರಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ, ಜನರು ಇವರನ್ನು ‘ಗಿಡಗಳ ಡಾಕ್ಟ್ರು’ ಅಂತಲೇ ಕರೆಯುತ್ತಾರೆ.

    ಬೇಸಿಗೆಯಲ್ಲಿ ಪಕ್ಷಿಗಳ ದಾಹ ನೀಗಿಸುವ ನಿಟ್ಟಿನಲ್ಲಿ 5000ಕ್ಕೂ ನೀರಿನ ತೊಟ್ಟಿಗಳನ್ನು ಗಿಡ ಮರಗಳಲ್ಲಿ ಇಟ್ಟಿದ್ದಾರೆ. ಸಾವಯವ ಕೃಷಿ, ಅರಣ್ಯ ಕೃಷಿ, ಮಳೆ ಕೊಯ್ಲು, ಜಲ ಮರುಪೂರಣದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ಮನಗಂಡು 2019-20 ನೇ ಸಾಲಿನ ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ರಾಜ್ಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ.

    ಪರಿಸರ ಮಾಲಿನ್ಯ ತಡೆಗಟ್ಟದಿದ್ದರೆ ಮನುಕುಲಕ್ಕೆ ಕಂಟಕವಾಗುತ್ತದೆ. ಮಾಲಿನ್ಯವನ್ನು ನಾನೊಬ್ಬನೇ ತಡೆಗಟ್ಟಲು ಸಾಧ್ಯವಿಲ್ಲ. ಎಲ್ಲರ ಸಹಕಾರವಿಲ್ಲದೆ ಏನನ್ನೂ ಸಾಧಿಸಲಾಗದು. ನನ್ನಿಂದ ಸಾಧ್ಯವಾದಷ್ಟು ಪರಿಸರ ಸೇವೆ ಮಾಡಲು ಸದಾ ಸಿದ್ಧ ಎನ್ನುತ್ತಾರೆ ಮಂಜುನಾಥ ನಾಯಕ.

    ಆಮ್ಲಜನಕ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮಿತಿ ಮೀರಿದ ವಾಹನಗಳು, ಅವುಗಳಿಂದ ಹೊರ ಸೂಸುವ ಹೊಗೆ ದಿನೇ ದಿನೆ ಹೆಚ್ಚುತ್ತಿದೆ. ಹುಟ್ಟುವ ಮಕ್ಕಳ ಮೇಲೆ ಹಾಗೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಗರ ಪ್ರದೇಶದ ಬಹುತೇಕರಿಗೆ ಇದರ ಅರಿವು ಇಲ್ಲ.
    | ಮಂಜುನಾಥ ನಾಯಕ, ಪರಿಸರ ಪ್ರೇಮಿ ಶಿಕ್ಷಕ

    ===

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts