More

    ಪರಿಷತ್​ಗೆ ಸಾಧಕರನ್ನು ಸ್ವಾಗತಿಸುವುದು ಹರ್ಷದಾಯಕ

    ಯಲ್ಲಾಪುರ: ವಿಧಾನ ಪರಿಷತ್ ಎಂದರೆ ಚಿಂತಕರ ಛಾವಡಿ. ಚಿಂತಕರು, ಜ್ಞಾನಿಗಳು, ಸಾಧಕರು ಒಂದೆಡೆ ಸೇರಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕುರಿತು ರ್ಚಚಿಸುವ ತಾಣ. ಪರಿಷತ್ತಿಗೆ ಶಾಂತಾರಾಮ ಅವರಂತಹ ಸಾಧಕರನ್ನು ಸ್ವಾಗತಿಸಲು ವಿಧಾನ ಪರಿಷತ್​ನ ಸಭಾ ನಾಯಕನಾಗಿ ಹರ್ಷವಾಗುತ್ತಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಅವರು ಶನಿವಾರ ತಾಲೂಕಿನ ಹಿತ್ಲಳ್ಳಿಯಲ್ಲಿ ವಿಧಾನ ಪರಿಷತ್ ನೂತನ ಸದಸ್ಯ ಶಾಂತಾರಾಮ ಸಿದ್ದಿ ಅವರ ಮನೆಗೆ ಭೇಟಿ ನೀಡಿ, ಶಾಂತಾರಾಮ ದಂಪತಿಯನ್ನು ಗೌರವಿಸಿ ಮಾತನಾಡಿದರು.

    ಶಾಂತಾರಾಮ ಸಿದ್ದಿ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ, ವನವಾಸಿ ಕಲ್ಯಾಣವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವನವಾಸಿ, ಬುಡಕಟ್ಟು ಸಮುದಾಯದವರ ಧ್ವನಿಯಾಗಿ ಉತ್ತಮ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದರು.

    ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಜಿ.ಪಂ. ಸದಸ್ಯೆ ರೂಪಾ ಬೂರ್ಮನೆ, ತಾ.ಪಂ. ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯೆ ರಾಧಾ ಹೆಗಡೆ, ಪ.ಪಂ. ಸದಸ್ಯ ಸೋಮೇಶ್ವರ ನಾಯ್ಕ, ಬಿಜೆಪಿ ಪ್ರಮುಖರಾದ ಗಣಪತಿ ಮಾನಿಗದ್ದೆ, ರೇಖಾ ಹೆಗಡೆ, ಶ್ರೀನಿವಾಸ ಗಾಂವ್ಕಾರ, ಪ್ರಸಾದ ಹೆಗಡೆ, ವಿಠ್ಠಲ ಪಾಂಡ್ರಮೀಸೆ, ವನವಾಸಿ ಕಲ್ಯಾಣದ ದೋಂಡು ಪಾಟೀಲ, ಬಿಜೆಪಿ ಪ್ರಮುಖರು ಹಾಗೂ ಶಾಂತಾರಾಮ ಸಿದ್ದಿ ಅವರ ಕುಟುಂಬದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts