More

    ಪತ್ರಿಕೋದ್ಯಮದ ಮೂಲ ಆಶಯ ಬದಲಾಗದಿರಲಿ


    ಯಾದಗಿರಿ: ಸಮಾಜದಲ್ಲಿನ ಅವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿ, ಆಡಳಿತಕ್ಕೆ ಚುರುಕು ಮುಟ್ಟಿಸುವಲ್ಲಿ ಪತ್ರಕರ್ತರ ಪಾತ್ರ ಬಹು ದೊಡ್ಡದಾಗಿದೆ ಎಂದು ಹಿರಿಯ ಪತ್ರಕರ್ತ ಸುಭಾಷ್ ಹೂಗಾರ ಅಭಿಪ್ರಾಯಪಟ್ಟರು.
    ನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಮರೆಯಾಗುತ್ತಿರುವ ತನಿಖಾ ಪತ್ರಿಕೋದ್ಯಮ ಕುರಿತ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜಗತ್ತು ಬದಲಾದತೆಂಲ್ಲ ಪತ್ರಿಕೋದ್ಯಮವೂ ಬದಲಾಗುತ್ತಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಬೆಳವಣಿಗೆಯಾದರೂ ಕ್ಷಣಾರ್ಧದಲ್ಲಿ ನಮಗೆ ಮಾಹಿತಿ ದೊರೆಯುತ್ತದೆ ಎಂದರು.
    ಪತ್ರಿಕೋದ್ಯಮದ ಮೂಲ ಉದ್ದೇಶ, ಆಶಯ ಬದಲಾವಣೆ ಆಗಬಾರದು. ಕಾಯಾರ್ಂಗ, ಶಾಸಕಾಂಗ ಹಾಗೂ ನ್ಯಾಯಾಂಗದಷ್ಟೇ ಜವಬ್ದಾರಿ ಪತ್ರಿಕಾರಂಗಕ್ಕೆ ಇದೆ. ಇಲ್ಲದಿದ್ದರೂ ಈ ಮೂರು ರಂಗದ ತಪ್ಪುಗಳಾದಾಗ ಅಥವಾ ಜನರ ಬೇಡಿಕೆಗೆ ಬೆಲೆ ಸಿಗದಿದ್ದಾಗ ಪತ್ರಿಕಾರಂಗ ಅವರಿಗೆ ನೆರವಾಗುವ ಮೂಲಕ ಸಮಾಜದ ತಾಯಿಯ ಪಾತ್ರ ಸ್ಥಾನವಹಿಸಬೇಕು ಎಂದು ಸಲಹೆ ನೀಡಿದರು.
    ಪತ್ರಕರ್ತರಿಗೆ ಗುರುತರವಾದ ಜವಾಬ್ದಾರಿಗಳಿವೆ. ನ್ಯಾಯಾಶರಂತೆ ಅವರು ತಮ್ಮ ಕೆಲಸ ನಿಭಾಯಿಸಿದಾಗ ಮಾತ್ರ ಜನರ ನೋವಿಗೆ ಸಂಕಷ್ಟಕಕ್ಕೆ ಸ್ಪಂದಿಸಲು ಸಹಕಾರಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯ ಸರಿ ಇಲ್ಲದಿದ್ದರೆ ಅದಕ್ಕೆ ಶಾಸಕರನ್ನು ಹೊಣೆಗಾರರನ್ನಾಗಿಸದೆ ಆ ಗ್ರಾಮದ ಪತ್ರಕರ್ತರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಅವರು ಸರಿಯಾಗಿ ಕೆಲಸ ಮಾಡಿದರೆ ಗ್ರಾಮೀಣ ಭಾಗದ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೆಂಕಟರಡ್ಡಿ ಮುದ್ನಾಳ್, ಪತ್ರಕರ್ತರು ಮಾಡಿದ ವರದಿಗಳನ್ನು ರಾಜಕಾರಣಿಗಳಾದ ನಾವುಗಳು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಹಗಲು-ರಾತ್ರಿ ಎನ್ನದೇ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಎಂದಿಗೂ ಸಹ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಖ್ಯಾತ ವೈದ್ಯ ಡಾ. ಶರಣಬಸವಪ್ಪ ಕಾಮರೆಡ್ಡಿ ಬೆಂಡೆಬೆಂಬಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯಕ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯೂಡಾ ಅಧ್ಯಕ್ಷ ರುದ್ರಗೌಡ ಪಾಟೀಲ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts