More

    ಪಡಿತರ ಚೀಟಿದಾರರಿಗೆ ಧಾನ್ಯ ಬಿಡುಗಡೆ

    ಧಾರವಾಡ: ಲಾಕ್​ಡೌನ್ ಹಿನ್ನೆಲೆಯಲ್ಲಿ ಜನರಿಗೆ ಆಹಾರ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮೇ 2020ನೇ ಮಾಹೆಯಲ್ಲಿ ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ ವಿತರಿಸಲು ಆಹಾರ ಧಾನ್ಯ ಬಿಡುಗಡೆ ಮಾಡಿದೆ.

    ಪಡಿತರ ಚೀಟಿದಾರರು ಒಟಿಪಿ ಅಥವಾ ಬಯೋಮೆಟ್ರಿಕ್ ಮೂಲಕ ಪಡಿತರ ಪಡೆಯಬಹುದು. ಜಿಲ್ಲೆಗೆ ಹೆಚ್ಚುವರಿ 12857 ಮೆ.ಟನ್ ಅಕ್ಕಿ ಹಾಗೂ 380. 6 ಮೆ.ಟನ್ ತೊಗರಿ ಬೇಳೆ ಹಂಚಿಕೆಯಾಗಿದೆ. ಈ ಆಹಾರ ಧಾನ್ಯವನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡಿ ಜಿಲ್ಲೆಯ 8 ಸಗಟು ಮಳಿಗೆಗಳ ಮೂಲಕ 508 ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗಿದೆ.

    ಜಿಲ್ಲೆಯ ಒಟ್ಟು 508 ನ್ಯಾಯಬೆಲೆ ಅಂಗಡಿಗಳಲ್ಲಿ ಏಕ ಕಾಲಕ್ಕೆ ಮೇ 3ರಂದು ಬೆಳಗ್ಗೆ 7 ಗಂಟೆಯಿಂದ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಪಡಿತರ ಚೀಟಿದಾರರು ಸರ್ಕಾರವು ನಿಗದಿಪಡಿಸಿದ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯವನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಉಚಿತವಾಗಿ ಪಡೆಯುವಂತೆ ಕೋರಲಾಗಿದೆ .

    ಅಂತ್ಯೋದಯ ಪಡಿತರ ಚೀಟಿ (ಎಎವೈ) ಹೊಂದಿದ ಕುಟುಂಬದ ಒಬ್ಬ ಸದಸ್ಯರಿಗೆ 10 ಕೆಜಿಯಂತೆ ಅಕ್ಕಿ ಹಾಗೂ 1 ಕೆಜಿ ತೊಗರಿ ಬೇಳೆಯನ್ನು ಉಚಿತವಾಗಿ ವಿತರಿಸಲಾಗುವುದು. ಬಿಪಿಎಲ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಹಾಗೂ ಪ್ರತಿ ಚೀಟಿಗೆ 1 ಕೆಜಿ ತೊಗರಿ ಬೇಳೆ ವಿತರಿಸಲಾಗುವುದು . ಏಕ ಸದಸ್ಯ ಎಪಿಎಲ್ ಪಡಿತರ ಚೀಟಿಗೆ 5 ಕೆಜಿಯಂತೆ ಹಾಗೂ ಎರಡು ಅಥವಾ ಎರಡಕ್ಕಿಂತ ಹೆಚ್ಚಿಗೆ ಸದಸ್ಯರಿರುವ ಚೀಟಿಗೆ 10 ಕೆಜಿಯಂತೆ ಅಕ್ಕಿ (ಒಪ್ಪಿಗೆ ಸೂಚಿಸದೆ ಇರುವ ಎಪಿಎಲ್ ಪಡಿತರ ಚೀಟಿಗೆ ಮಾತ್ರ ) ಪ್ರತಿ ಕೆಜಿಗೆ 15 ರೂ . ದಂತೆ ವಿತರಿಸಲಾಗುವುದು. ಅಲ್ಲದೆ ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಿದ ಬಿಪಿಎಲ್ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಹಾಗೂ ಎಪಿಎಲ್ ಪ್ರತಿ ಅರ್ಜಿಗೆ ಕೆಜಿಗೆ 15 ರೂ.ದಂತೆ 10 ಕೆಜಿ ವಿತರಿಸಲಾಗುವುದು.

    ಅಕ್ರಮ ಕಂಡು ಬಂದರೆ ದೂರು ನೀಡಿ: ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರಧಾನ್ಯ ವಿತರಿಸುವಾಗ ಅಕ್ರಮ ಎಸಗಿದ ಸಂದರ್ಭದಲ್ಲಿ ತಕ್ಷಣ ದೂರು ಸಲ್ಲಿಸಿದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುದು. ಧಾರವಾಡ ತಾಲೂಕು (ದೂ. 0836 – 2233822), ಆಹಾರ ಶಿರಸ್ತೇದಾರ್ (ಮೊ. 9845059245, 9449357188), ಆಹಾರ ನಿರೀಕ್ಷಕ (ಮೊ. 9448221892), ಹುಬ್ಬಳ್ಳಿ ತಾಲೂಕು (0836- 2358388), ಆಹಾರ ಆಹಾರ ಶಿರಸ್ತೇದಾರ್ (9035074105), ಆಹಾರ ನಿರೀಕ್ಷಕರ (8904840724, 8310490713) ಅವರಿಗೆ ದೂರು ಸಲ್ಲಿಸಬಹುದು.

    ಕಲಘಟಗಿ ತಾಲೂಕು (08370-284535), ಆಹಾರ ಆಹಾರ ಶಿರಸ್ತೇದಾರ್ (7899972947), ಆಹಾರ ನಿರೀಕ್ಷಕರ (8792340158), ಕುಂದಗೋಳ ತಾಲೂಕು (08304-290239), ಆಹಾರ ನಿರೀಕ್ಷಕ (9480145628), ನವಲಗುಂದ ತಾಲೂಕು (08380-229240), ಆಹಾರ ನಿರೀಕ್ಷಕರ (9620734505, 9902142458), ಹುಬ್ಬಳ್ಳಿ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕ (9481008296), ಆಹಾರ ನಿರೀಕ್ಷಕ (9035074105, 9886320360), ಧಾರವಾಡ ಪಡಿತರ ಪ್ರದೇಶ (0836-2446624), ಆಹಾರ ನಿರೀಕ್ಷಕ (8088737170, 9108752005) ಹಾಗೂ ಜಿಲ್ಲಾಧಿಕಾರಿ ಕಚೇರಿಯ ಆಹಾರ ಶಾಖೆಯ (0836 2444594) ಸಂಖ್ಯೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts