More

    ಪಠ್ಯಪುಸ್ತಕಕ್ಕೆ ಸಿಮೀತಗೊಳಿಸಬೇಡಿ

    ಬಾಗಲಕೋಟೆ : ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗಿರದೆ ತಮ್ಮಲ್ಲಿ ಅಡಗಿರುವ ಜ್ಞಾನ, ಕೌಶಲ ಸಾಂಸ್ಕೃತಿಕ, ಕ್ರೀಡೆ ಚುಟುವಟಿಕೆಗಳ ಮೂಲಕ ಹೊರಗೆ ಹಾಕಬೇಕು. ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ಅವಕಾಶ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು
    ತಾಲೂಕಿನ ಕದಾಂಪೂರ ಪು.ಕೇಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ೨೦೨೨-೨೩ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಗಲಕೋಟೆ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಶಿಕ್ಷಣವು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗಿರದೆ ವಿದ್ಯಾರ್ಥಿಗಳಲ್ಲಿ ಇರುವ ವಿಶೇಷ ಪ್ರತಿಭೆಯನ್ನು ಗುರುತಿಸುವ ಕಾರ್ಯವಾಗಬೇಕು. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಭಾಗವಹಿಸಿಬೇಕು ಎಂದರು.
    ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಪ್ರತಿಭೆ ನಿಂತ ನೀರಲ್ಲ. ಪ್ರತಿ ಕ್ಷಣ ಹೊಸದು. ಮಕ್ಕಳಲ್ಲಿರುವ ಪ್ರತಭೆಯನ್ನು ಹೊರ ತೆಗೆಯುವ ಕಾರ್ಯವಾಗಬೇಕು. ಮಕ್ಕಳಿಗೆ ಮುಕ್ತ ಅವಕಾಶ ನೀಡಬೇಕು.ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಹೊರಹೊಮ್ಮಲಿ ಎಂದು ಹೇಳಿದರು.
    ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಶಿಗಿಕೇರಿ ಗ್ರಾ.ಪಂ ಅಧ್ಯಕ್ಷ ಬಸವರಾಜ ನಾಯಕ, ಭೀಮವ್ವ ದೊಡಮನಿ, ಮಂಜುನಾಥ ಕಾಜೂರ, ಪರಸಪ್ಪ ಹೊನ್ಯಾಳ, ಹನಮವ್ವ ದ್ಯಾವನ್ನವರ, ಲಕ್ಷ್ಮಣ ಕಟ್ಟಿಮನಿ, ಎಚ್.ಕೆ.ಗೂಡರ, ಕೆ.ಎಸ್.ದೇಸಾಯಿ, ವೈ.ಡಿ.ಕಿರಸುರ, ಎಂ.ಎಸ್.ಕೋಟಿ ಉಪಸ್ಥಿತರಿದ್ದರು. ಸಾವಿತ್ರಿ ಕೊಂಡಗೊಳಿ ಸ್ವಾಗತಿಸಿದರು. ಪಿ.ಬಿ.ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ.ಐ. ಹಾವರಗಿ ನಿರೂಪಿಸಿದರು. ಪಿ.ಬಿ.ಬಸರಕೋಡ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts