More

    ಪಠ್ಯದ ಜತೆ ಕಲಿಸಿ ಸಂಸ್ಕಾರ

    ಚಿತ್ರದುರ್ಗ: ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಜೈನ ಸಮುದಾಯ ನಗರದಲ್ಲಿ 50 ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿರುವ ಶ್ರೀ ಪಾರ್ಶ್ವನಾಥ ವಿದ್ಯಾಸಂಸ್ಥೆ ಕ್ರಮ ಶ್ಲಾಘನೀಯ ಕಾರ‌್ಯವಾಗಿದೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
    ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜತೆ ದೇಶದ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕಿದೆ. ಈ ಕೆಲಸ ಪಾರ್ಶ್ವನಾಥ ವಿದ್ಯಾಸಂಸ್ಥೆ ಸಂಸ್ಥೆ ಯಿಂದ ಆಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಡಿಡಿಪಿಐ ಕೆ.ರವಿಶಂಕರರೆಡ್ಡಿ ಮಾತನಾಡಿ, ಸಂವಿಧಾನಶಿಲ್ಪಿ ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದಾಗಿ ಪ್ರತಿಯೊಬ್ಬರಿಂದು ಸಮಾನತೆಯಿಂದ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು.
    ವಿಗ್ಯಾನಪ್ರಭಾ ಸುರೀಶ್ವರ್‌ಜೀ, ಸಾಧವೀಶ್ರೀ ಅರಿಷ್ಟರ ರತ್ನಶ್ರೀಜೀ ಸಾನ್ನಿಧ್ಯ, ಸಂಸ್ಥೆ ಅಧ್ಯಕ್ಷ ಬಾಬುಲಾಲ್‌ಜೀ ಪಟಿಯಾತ್ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಉತ್ತಮ್‌ಚಂದ್ ಸುರಾನ, ಸುರೇಶ್‌ಕುಮಾರ್, ಸುರೇಶ್‌ಮುತ್ತ, ರಾಜೇಂದ್ರ ದಲೇಶ, ನಿರ್ದೇಶಕರಾದ ಮುಕೇಶ್ ಸೋನ್ ವಾಡಿಯ, ಬಿ.ಸುರೇಶ್ ಪಟಿಯಾತ್, ವಿಪುಲ್ ಜೈನ್, ಜವೇರಿಲಾಲ್, ಮಹಾವೀರ್ ದಲೇಶ, ಆಶಿಕ್‌ಕುಮಾರ್, ಬಿಇಒ ಎಸ್.ನಾಗಭೂಷಣ್, ರಂಜಿತ್ ಪಟಿಯಾತ್, ಬಿಜೆಪಿ ಮುಖಂಡ ಹನುಮಂತೆಗೌಡ, ಜುಟ್‌ಮಲ್‌ಜೀ ಇತರರು ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ‌್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts