More

    ಪಟ್ಟು ಸಡಿಲಿಸದ ಗಿರಿಜನ

    ಪಿರಿಯಾಪಟ್ಟಣ: ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ತಾಲೂಕಿನ ಗಿರಿಜನ ಹಾಡಿಗಳ ಗಿರಿಜನರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭಾ ಅರಸ್ ಶುಕ್ರವಾರ ಭೇಟಿ ನೀಡಿ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಲು ಯತ್ನಿಸಿ ವಿಫಲರಾದರು.


    ತಾಲೂಕಿನ ಅಬ್ಬಳತಿ ಎ ಮತ್ತು ಬಿ ಹಾಡಿ, ಬೋರನಕಟ್ಟೆ, ಉತ್ತೇನಹಳ್ಳಿ, ಮಾಲಂಗಿ ಗೋಮಾಳ ಹೊಸೂರು ಕೆರೆಮಾಳ, ಚೌಕೂರು ಹಾಡಿಯ 200 ಕ್ಕೂ ಹೆಚ್ಚು ನಿವಾಸಿಗಳು ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ ಪುನರ್ವಸತಿ ಕಲ್ಪಿಸಬೇಕೇಂದು ಧರಣಿ ನಿರತರು ಹಕ್ಕೊತ್ತಾಯ ಮಾಡುತ್ತಿದ್ದಾರೆ.


    ಪ್ರಭಾ ಅರಸು ಅವರು ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ನೀವು ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಆದರೆ ಮನವಿಗೆ ಸ್ಪಂದಿಸದ ಗಿರಿಜನರು ಡಾ.ಮುಜಾಫರ್ ಅಸಾದಿ ಅವರ ವರದಿಯನ್ನು ಯಥಾವತ್ ಜಾರಿ ಮಾಡಬೇಕು, ಸರ್ಕಾರಕ್ಕೆ ವರದಿ ಸಲ್ಲಿಸುವವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.

    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಗಿರಿಜನ ಹಾಡಿಯ ಮುಖಂಡರಾದ ಶೈಲೇಂದ್ರ, ಜಾನಕಮ್ಮ, ಸರೋಜಾ, ಪುಟ್ಟಿ, ಕೀರ್ತು, ಪುಟ್ಟ ಬಸವಯ್ಯ, ರೇಣುಕ, ಜಯಮ್ಮ, ಜಾನು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts