More

    ಪಜಾ ಪಟ್ಟಿಯಿಂದ ಕೈ ಬಿಡಬೇಡಿ



    ಶಿರಹಟ್ಟಿ: ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಆಗ್ರಹಿಸಿ ತಾಲೂಕಿನ ಜಲ್ಲಿಗೇರಿ ತಾಂಡಾದ ಲಂಬಾಣಿ ಸಮುದಾಯದವರು ಶುಕ್ರವಾರ ಪತ್ರ ಚಳವಳಿ ನಡೆಸಿದರು.

    ಚಳವಳಿಯ ನೇತೃತ್ವ ವಹಿಸಿದ್ದ ಈರಣ್ಣ ಚವ್ಹಾಣ ಮಾತನಾಡಿ, ಲಂಬಾಣಿ, ಭೋವಿ. ಕೊರಮ, ಕೊರಚ ಜನಾಂಗವನ್ನು ಎಸ್​ಸಿ ಮೀಸಲಾತಿಯಿಂದ ಕೈಬಿಡುವ ಬಗ್ಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಎಸ್​ಸಿ ಮೀಸಲಾತಿ ಆಯೋಗಕ್ಕೆ ತಿಳಿಸಿದೆ. ಮೀಸಲಾತಿಯಿಂದ ಈ ಜನಾಂಗವನ್ನು ಕೈಬಿಡದಂತೆ ಆದೇಶ ನೀಡಿದೆ ಎಂದು ತಪ್ಪು ಮಾಹಿತಿ ಹರಿಬಿಟ್ಟು ಸಮಾಜದಲ್ಲಿ ಸಂಘರ್ಷ ವಾತಾವರಣಕ್ಕೆ ಅವಕಾಶ ಮಾಡಿ ಕೊಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ‘ಇಂದಿಗೂ ನಮ್ಮ ಸಮುದಾಯದ ಜನರಿಗೆ ಸ್ವಂತ ಮನೆ, ಜಮೀನುಗಳಿಲ್ಲ. ಹೊಟ್ಟೆ ಪಾಡಿಗಾಗಿ ಗುಳೆ ಹೋಗಿ ಜೀವನ ಸಾಗಿಸುವ ಸಂಕಷ್ಟ ತಪ್ಪಿಲ್ಲ. ಅಲ್ಲದೆ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದೇವೆ. ಇದರಿಂದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಕೂಲಂಕಷವಾಗಿ ರ್ಚಚಿಸಿ ಈ ಎಲ್ಲ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮುಂದುವರಿಸಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿದರು.

    ಚಂದ್ರಶೇಖರ ಲಮಾಣಿ, ಮಂಜು ಲಮಾಣಿ, ಕೃಷ್ಣ ಲಮಾಣಿ, ಶೇಕಪ್ಪ ನಾಯಕ, ಮಂಜು ಕಾರಭಾರಿ, ಸುನೀಲ ದೇಸಾಯಿ, ಕುಮಾರ ಲಮಾಣಿ, ಸತ್ಯಪ್ಪ ಲಮಾಣಿ, ದೇವಪ್ಪ ಲಮಾಣಿ, ಮರಿಯವ್ವ ಲಮಾಣಿ, ಬಾಮಣವ್ವ ಲಮಾಣಿ, ಶಾಂತವ್ವ ಲಮಾಣಿ ಇತರರು ಇದ್ದರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts