More

    ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ

    ಬೀದರ್: ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯಿಂದ ಬೇಸಿಗೆ ಹಿನ್ನೆಲೆಯಲ್ಲಿ ಇಲ್ಲಿನ ಬಸವನಗರದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
    ಪಶು ವಿವಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಮಾತನಾಡಿ, ಅಂತರ್ಜಾಲ ಹಾಗೂ ಮೊಬೈಲ್ಗಳ ಹಾವಳಿಯಿಂದಾಗಿ ಪಕ್ಷಿಗಳು ಅವನತಿ ಅಂಚಿನಲ್ಲಿವೆ. ಪಕ್ಷಿಗಳನ್ನು ಉಳಿಸಿಕೊಳ್ಳುವುದು ಅವಶ್ಯಕವಾಗಿದ್ದು, ಬೇಸಿಗೆಯಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆಗಳಿಂದ ಮುಕ್ತಿ ನೀಡಲು ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
    ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕಣರ್ಿ ಮಾತನಾಡಿ, ಪ್ರಸ್ತುತ ಕರೊನಾ ವೈರಸ್ ಜನರ ಜೀವಕ್ಕೆ ಕುತ್ತು ತಂದಿದೆ. ಜಗತ್ತಿನಾದ್ಯಂತ ಇದು ತಲ್ಲಣ ಸೃಷ್ಟಿಸಿದೆ. ಪರಿಸರ ಶುಚಿ ಜತೆಗೆ ಸಮತೋಲನವಾಗಿ ಇಟ್ಟುಕೊಳ್ಳದಿದ್ದಲ್ಲಿ ಈ ರೀತಿ ಮಹಾಮಾರಿ ಬರಲಿವೆ. ಉತ್ತಮ ಸಮಾಜಕ್ಕಾಗಿ ಪ್ರಾಣಿ, ಪಕ್ಷಿ ಸಂಕುಲ ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
    ಅಕ್ಷಾ ವೆಲ್ಪೇರ್ ಸೊಸೈಟಿ ಅಧ್ಯಕ್ಷೆ ಸುನೀತಾ ಆನಂದ ಮಾತನಾಡಿದರು. ನಾಗಮಣಿ, ಕಾಶಮ್ಮಾ, ಮಲ್ಲಿಕಾರ್ಜುನ, ಅಭಿಷೇಕ, ಸಾಗರ ಕಾಜಿ, ನಾಗರಾಜ, ಓಂಕಾರ ಪಾಟೀಲ್, ಸಂಜು, ಸಂತೋಷ, ಮಹೇಶ, ಸಾನ್ವಿ, ಶ್ರೇಯಾ, ಸಾವ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts