More

    ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ

    ಚಿತ್ರದುರ್ಗ: ಕೆಲಸದ ಒತ್ತಡ ಹಾಗೂ ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಚಳ್ಳಕೆರೆ ತಹಸೀಲ್ದಾರ್ ಕಚೇರಿ ಪ್ರಥಮ ದರ್ಜೆ ಸಹಾಯಕ ಸಿ.ಎಂ.ಗುರುಲಿಂಗಪ್ಪ ಅವರ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ರಾಜ್ಯಸರ್ಕಾರಿ ನೌಕರರ ಸಂಘ, ರಾಜ್ಯಕಂದಾಯ ಇಲಾಖೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಒನಕೆ ಓಬವ್ವ ವೃತ್ತದ ಬಳಿ ಕಂದಾಯ ಇಲಾಖೆ ನೌಕರರು ಮಂಗಳವಾರ ಪ್ರತಿಭಟನೆ ನ ಡೆಸಿದರು.
    ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೆ ಕಳೆದ 30 ವರ್ಷಗಳಿಂದ ಕರ್ತವ್ಯದಲ್ಲಿದ್ದ ಗುರುಲಿಂಗಪ್ಪ ಅವರು, ಕೆಲಸದ ಒತ್ತಡ, ಅವಮಾನ ದಿಂದ ಸಾವಿಗೆ ಶರಣಾಗುತ್ತಿರುವುದಾಗಿ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅವರ ನೊಂದ ಕುಟುಂಬಕ್ಕೆ ಸರ್ಕಾರದಿಂದ ನೀಡಬಹುದಾದ ಎ ಲ್ಲ ಸೌಲಭ್ಯಗಳನ್ನು ಒದಗಿಸಬೇಕು.
    ಅನುಕಂಪದ ನೌಕರಿ ತುರ್ತಾಗಿ ನೀಡಬೇಕು. ಮೇಲಧಿಕಾರಿಗಳ ಕಿರುಕುಳ ನಿಲ್ಲಬೇಕು. ಸಕಾಲ ರ‌್ಯಾಂಕಿಂಗ್ ಪದ್ಧತಿ ಕಿತ್ತೊಗೆದು ನಿಗದಿ ತ ವೇಳೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಇದರಿಂದ ಖಾತೆ ಬದಲಾವಣೆಗಳಲ್ಲಿ ತಪ್ಪುಗಳಾಗುವುದನ್ನು ತಪ್ಪಿಸ ಬಹುದು.
    ಅನ್ಯಇಲಾಖೆಗಳ ಕೆಲಸಗಳ ನಿರ್ವಹಣೆ ಬೇಡ. ಕೆಲಸದ ಅವಧಿ ಹೊರತುಪಡಿಸಿ ಇತರೆ ಸಮಯದಲ್ಲಿ ಕೆಲಸದ ಒತ್ತಡ ಹಾಕಬಾರದು. ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಹೇಳಬಾರದು. ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಸೌಲಭ್ಯ ನೀಡದೆ ಆನ್‌ಲೈನ್‌ನಲ್ಲೇ ಕೆ ಲಸ ನಿರ್ವಹಿಸುವಂತೆ ಒತ್ತಡ ಹಾಕುತ್ತಿರುವುದರಿಂದ ನೌಕರರು, ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ಆತ್ಮಹತ್ಯೆಯಂಥ ಕೃತ್ಯಕ್ಕೆ ಮನಸು ಮಾ ಡುವಂತಾಗಿದೆ. ಆನ್‌ಲೈನ್ ಕೆಲಸಕ್ಕೆ ಸೂಕ್ತ ಸವಲತ್ತು ಒದಗಿಸುವುದರೊಂದಿಗೆ,ಸೂಕ್ತ ತರಬೇತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
    ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಸಿದ್ದೇಶ್, ರಾಜ್ಯಗ್ರಾಮ ಆಡಳಿತಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ವಿ.ಪಾಂಡುರಂಗಪ್ಪ, ಜಿಲ್ಲಾಧ್ಯಕ್ಷ ಮಾಲತೇಶ ಮುದ್ದಜ್ಜಿ, ಚಳ್ಳಕೆರೆ ತಾಲೂಕು ಸ ರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಎಲ್.ಲಿಂಗೇಗೌಡ, ಎಚ್.ಕೆ.ಪ್ರಾಣೇಶ್, ಎಸ್.ಕೆ.ಮಂಜುನಾಥ್, ರಾಜೇಂದ್ರ ಚಕ್ರವರ್ತಿ, ಬಿ.ತಿಪ್ಪೇ ಸ್ವಾಮಿ, ಶ್ರೀನಿವಾಸ್,ರಂಗನಾಥ್, ಕೃಷ್ಣಪ್ಪ, ಜಿ.ಬಿ.ಮಹಾಂತೇಶ್, ಎಸ್.ವಿನುತಾ, ಎನ್.ಜೆ.ತಾಯಕ್ಕ, ಈರಣ್ಣ,ವೀರಣ್ಣ,ಕೇಶವಮೂರ್ತಿ, ವತ್ಸಲಾಕುಮಾರಿ, ಸರ್ಕಾರಿ ನೌಕರರ ಸಂಘ, ಕಂದಾಯ ಇಲಾಖೆ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts