More

    ನೇರ ಪ್ರಸಾರದಲ್ಲಿ ಶರೀರ ಛೇಧನ ಅವಶ್ಯಕ

    ಬಾಗಲಕೋಟೆ: ವೈದ್ಯಕೀಯ ವಿದ್ಯಾರ್ಥಿಗಳಿಗೆ ನೇರ ಪ್ರಸಾರದಲ್ಲಿ ಶರೀರ ಛೇಧನ ತೋರಿಸುವುದು ಶ್ರೇಷ್ಠ ಕಲಿಕೆಗೆ ಸಹಾಯಕವಾಗುತ್ತದೆ ಎಂದು ಡಾ. ಬಿ ಎಸ್ ಪ್ರಸಾದ್ ತಿಳಿಸಿದರು.

    ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಶರೀರ ಚಿಂತನ 2024ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಎನ್ ಸಿ ಐ ಎಸ್ ಎಂ ನ ಅಧ್ಯಕ್ಷರಾದ ಡಾ. ಬಿ ಎಸ್ ಪ್ರಸಾದ್ ಮಾತನಾಡುತ್ತಾ ಈ ಕಾಲೇಜಿನಲ್ಲಿ ನಡೆಯುತ್ತಿರುವ ನೇರ ಪ್ರಸಾರದಲ್ಲಿನ ಶರೀರ ಛೇಧನ ಕಾರ್ಯಕ್ರಮ ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿದ್ದು ಕಾಲೇಜಿನ ಈ ಪ್ರಯತ್ನಕ್ಕೆ ಧನ್ಯವಾದಗಳು ಎಂದರು.

    ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಕಾರ್ಯಕ್ರಮದ ಮುಖ್ಯ ಪೋಷಕರಾದ ಡಾ/ ಮುರುಗೇಶ್ ಆರ್ ನಿರಾಣಿ ಮಾತನಾಡುತ್ತಾ ಕಾಲೇಜಿನಲ್ಲಿ ನಡೆಯುತ್ತಿರುವ ಪ್ರತಿ ಚಟುವಟಿಕೆಯಲ್ಲಿ ಪಾಲ್ಗೊಂಡ ತಮಗೆಲ್ಲರಿಗೂ ಒಳ್ಳೆಯ ಭವಿಷ್ಯ ದೊರಕಲಿ ಎಂದು ಆಶಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿ ಐ ಇ ಐ ನ ಅಧ್ಯಕ್ಷರಾದ ಮಾಧುರಿ ಮುಧೋಳ ಮಾತನಾಡುತ್ತಾ ಕಾಲೇಜಿನ ಇಂತಹ ಪ್ರಯತ್ನಗಳಿಗೆ ಯಶಸ್ಸು ದೊರಕುವುದು ಎಲ್ಲ ವಿದ್ಯಾರ್ಥಿಗಳು ಚಟುವಟಿಕೆಗಳ ಪ್ರಯೋಜನ ಪಡೆದಾಗ ಎಂದರು.

    ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಶರೀರ ಛೇಧನ ಮಾಡುವ ನೇರ ಪ್ರಸಾರ ಕಾರ್ಯಕ್ರಮವನ್ನು ವಿಶೇಷ ಉಪನ್ಯಾಸಕರು ಹಾಗೂ ಖ್ಯಾತ ವೈದ್ಯರಾದ ಡಾ.ಮುರುಳಿಧರ್ ಬಡಿಗೇರ್, ಡಾ. ಹರ್ಷವರ್ಧನ್ ಬ್ಯಾಳಿಹಾಳ, ಡಾ.ಬಿ ಜಿ ಕುಲಕರ್ಣಿ, ಡಾ.ರವಿರಾಜ್ ಕುರುಬೆಟ್ ವಿಷಯ ವಿಶ್ಲೇಷಣೆಯ ಮೂಲಕ ಶರೀರಛೇಧನ ಹಾಗೂ ನರಗಳ ಹಾಗೂ ಮೆದುಳಿನ ಕಾರ್ಯವನ್ನು ತಿಳಿಸಿಕೊಟ್ಟರು.

    ರಾಷ್ಟ್ರೀಯ ಮಟ್ಟದ ಈ ಕಾರ್ಯಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಹ್ಲಾದ ಗಂಗಾವತಿ, ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗ ಹಾಗೂ ಹೊರ ರಾಜ್ಯಗಳ ಸುಮಾರು 50 ಕಾಲೇಜುಗಳ 1500 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಆಯುರ್ವೇದಿಕ್ಕಿಗೆ ಸಂಬಂಧಪಟ್ಟ ಕಾಗದ ಪ್ರಸ್ತುತತೆಯ ಸ್ಪರ್ಧೆಯನ್ನು ನಡೆಸಲಾಯಿತು.

    ಡಾ. ರಜನಿ ದಡೇದ ಹಾಗೂ ಡಾ. ಅಂಜನಾ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಈಶ್ವರ ಪಾಟೀಲ್ ಸ್ವಾಗತಿಸಿದರು. ಡಾ. ದೀಪಾ ಗಂಗಾಲ್, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಡೀನ್/ ಆಡಳಿತಾಧಿಕಾರಿಯಾದ ಡಾ. ಶಿವಕುಮಾರ್ ಗಂಗಾಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts