More

    ನೂರು ರೂಪಾಯಿಗೆ ಐದು ಬಿಯರ್ ಬಾಟಲಿ

    ಕಾರವಾರ: ಗೋವಾದಲ್ಲಿ ನೂರು ರೂಪಾಯಿಗೆ ಐದು ಬಿಯರ್ ಬಾಟಲಿ…ಬಲು ಸಸ್ತಾ…ಸಸ್ತಾ…..

    ಗೋವಾದ ಬಾರ್ ಹಾಗೂ ಮದ್ಯದ ಅಂಗಡಿಗಳಲ್ಲಿ ಎಂಆರ್​ಪಿಗಿಂತ ಅತಿ ಕಡಿಮೆ ಬೆಲೆಗೆ ಬಿಯರ್ ಮಾರಾಟ ಮಾಡುತ್ತಿದ್ದಾರೆ.

    ಲಾಕ್​ಡೌನ್ ಸಮಯದಲ್ಲಿ ಮಾರಾಟವಾಗದೇ ಉಳಿದ, ಮಾರಾಟದ ಅಂತಿಮ ದಿನಾಂಕ ಹತ್ತಿರ ಬರುತ್ತಿರುವ ಬಿಯರ್​ಗಳನ್ನು ಗೋವಾದ ಬಾರ್ ಹಾಗೂ ಲಿಕ್ಕರ್ ಅಂಗಡಿಗಳ ಮಾಲೀಕರು ಅತಿ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ.

    ರಾಜ್ಯದಲ್ಲಿ 120 ರೂ.ಗೆ ಮಾರಾಟವಾಗುವ ಪ್ರತಿ ಬಿಯರ್ ಟಿನ್ ಗೋವಾದಲ್ಲಿ 100 ರೂ.ಗೆ 3, ಕೆಲವೆಡೆ 5 ಸಿಗುತ್ತಿದೆ. ಈ ಹಿಂದೆ ಗೋವಾಕ್ಕೆ ತೆರಳಿ ಮದ್ಯ ಸೇವಿಸಿ ಬರುತ್ತಿದ್ದ ಕಾರವಾರ ಭಾಗದ ಸಾವಿರಾರು ಜನರಿಗೆ ಈಗ ಕರೊನಾ ಲಾಕ್​ಡೌನ್ ಪ್ರಾರಂಭವಾದಾಗಿನಿಂದ ಈ ಅವಕಾಶ ತಪ್ಪಿದೆ. ಕೇಂದ್ರ ಸರ್ಕಾರ ಅಂತರಾಜ್ಯ ಗಡಿಯಲ್ಲಿ ಮುಕ್ತ ಅವಕಾಶ ನೀಡುವಂತೆ ಸೂಚಿಸಿದರೂ ಗೋವಾ ಸರ್ಕಾರ ಮಾತ್ರ ಗಡಿಯನ್ನು ಮುಕ್ತ ಮಾಡಿಲ್ಲ. ಅತ್ತ ಸುರೆಯ ಧಾರೆ ಹರಿಯುವುದನ್ನು ನೋಡಿ ಗಡಿಯಲ್ಲಿರುವ ಮದ್ಯಪ್ರಿಯರು ಬೇಸರಗೊಂಡಿದ್ದಾರೆ.

    ಅಕ್ರಮ ಮದ್ಯ ವಶ: ಈ ನಡುವೆ ಗೋವಾದಿಂದ ಕಾರವಾರಕ್ಕೆ ಅಕ್ರಮ ಮದ್ಯ ಸಾಗಣೆ ಕೂಡ ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರವಾರ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟು ದಾಳಿ ನಡೆಸುತ್ತಿದೆ.

    ಮಲ್ಲಾಪುರ ಲಕ್ಷ್ಮೀ ನಗರದದ ಶೆಡ್ ಒಂದರಲ್ಲಿ ದಾಸ್ತಾನಿಟ್ಟಿದ್ದ 85,302 ರೂ. ಮೌಲ್ಯದ 183.690 ಲೀಟರ್ ಗೋವಾ ಮದ್ಯ ಹಾಗೂ 99 ಲೀಟರ್ ಫೆನ್ನಿಯನ್ನು ವಶಕ್ಕೆ ಪಡೆದಿದ್ದಾರೆ.

    ಅಮದಳ್ಳಿಯ ಗಾಂವ್ಕರ್​ವಾಡದಲ್ಲಿ ಮನೆಯ ಹಿಂದಿನ ಶೆಡ್​ನಲ್ಲಿ ಇರಿಸಲಾಗಿದ್ದ 90300 ರೂ. ಮೌಲ್ಯದ 203.400 ಲೀಟರ್ ಗೋವಾ ಮದ್ಯ 40 ಲೀಟರ್ ಗೋವಾ ಬಿಯರ್​ನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ನಿರೀಕ್ಷಕ ಗಣೇಶ ನಾಯ್ಕ, ಸಿಬ್ಬಂದಿ, ಪ್ರವೀಣ ಕುಮಾರ ಕಲ್ಲೋಳಿ, ಶಿವಾನಂದ ಕೋರಡ್ಡಿ, ನಾಗರಾಜ ಹೂವಿನಾಳ, ವಿರೇಶ ಕುರಿ,ರವಿಚಂದ್ರ ನಾಯ್ಕ ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts