More

    ನೂತನ ಶಿಕ್ಷಣ ನೀತಿ ಜಾರಿಯಿಂದ ಶೈಕ್ಷಣಿಕ ಕ್ರಾಂತಿ

    ಬೆಳಗಾವಿ: ರಾಜ್ಯದಲ್ಲಿ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಣ ನೀತಿಯು ಪ್ರಾಯೋಗಿಕತೆ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು ಕೊಟ್ಟಿದೆ. ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಮತ್ತು ರಾಜ್ಯದ ಮೂಲೆ ಮೂಲೆಗಳಲ್ಲಿ ಗುಣಮಟ್ಟದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಲೆಯೆತ್ತಿ, ಶೈಣಿಕ ಕ್ರಾಂತಿಯಾಗಲಿದೆ ಎಂದು
    ಉನ್ನತ ಶಿಣ ಸಚಿವ ಡಾ. ಸಿ.ಎನ್​.ಅಶ್ವತ್ಥನಾರಾಯಣ ಹೇಳಿದರು.

    ನಗರದ ಕೆಎಲ್​ಇ ಶತಮಾನೋತ್ಸವ ಕನ್ವೆನ್ಷನ್​ ಸೆಂಟರ್​ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಎಲ್​ಇ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಆ್ಯಂಡ್​ ರಿಸರ್ಚ್​ ವಿಶ್ವವಿದ್ಯಾಲಯದ 12ನೇ ಟಿಕೋತ್ಸವದಲ್ಲಿ ಅವರು ಮಾತನಾಡಿದರು. ಎನ್​ಇಪಿ ದೇಶೀಯ ಮಾದರಿಯ ಸರ್ವಾಂಗೀಣ ಕಲಿಕೆಯನ್ನು ಮುನ್ನೆಲೆಗೆ ತರುತ್ತಿದೆ. ಇದರಿಂದ ಸುಸ್ಥಿರ ಮತ್ತು ಸಮಾನತೆಯನ್ನು ಆಧರಿಸಿದ ಬೆಳವಣಿಗೆ ಸಾಧ್ಯವಾಗಲಿದೆ ಎಂದರು.

    ಎನ್​ಇಪಿಯಲ್ಲಿ ಮೌಲ್ಯಗಳ ಜತೆಗೆ ಸಮಾಜಮುಖಿ ಶಿಣ ನೀಡಲಾಗುತ್ತಿದೆ. ರಾಜ್ಯದ ಉನ್ನತ ಶಿಣ ೇತ್ರದಲ್ಲಿ ಕಳೆದ ಶೈಣಿಕ ವರ್ಷದಿಂದಲೇ ಎನ್​ಇಪಿ ಅನುಷ್ಠಾನವಾಗಿದೆ ಎಂದರು. ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿಯಿಂದಾಗಿ ಕೆಎಲ್​ಇ ಅಗಾಧವಾಗಿ ಬೆಳೆದಿದೆ. ಇದರಿಂದಾಗಿ ಬೆಳಗಾವಿ ಯಂತಹ ಎರಡನೇ ಸ್ತರದ ನಗರ ಕೂಡ ಶೈಣಿಕ ಸಂಸತಿಯ ನಗರವಾಗಿ ಬೆಳೆದಿದೆ. ಕೆಎಲ್​ಇ ಇಂದು 290 ಸಂಸ್ಥೆಗಳ ಮಟ್ಟಿಗೆ ಬೆಳೆಯಲು ಕೋರೆ ಅವರ ಪರಿಶ್ರಮವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ವೈದ್ಯಕಿಯ ಪದವಿ ಪಡೆದಿರುವವರು ಸಮಾಜದ ಸದಸ್ಯರಿಗೆ ಕೈಗೆಟುಕುವ ಹಾಗೆ ಆರೋಗ್ಯ ಮತ್ತು ವೈದ್ಯಕಿಯ ಸೇವೆಗಳನ್ನು ಒದಗಿಸಬೇಕು. ಆರೋಗ್ಯ ಸೇವೆಗಳಿಗೆ ಜಗತ್ತಿನಲ್ಲಿ ಇಂದು ಅಪಾರ ಬೇಡಿಕೆ ಇದೆ. ಆದರೆ, ಅವುಗಳ ದುಬಾರಿ ದರದಿಂದಾಗಿ ಜನರ ಕೈಗೆಟುಕುತ್ತಿಲ್ಲ. ಈ ಕಂದಕವನ್ನು ಹೊಸ ಪೀಳಿಗೆಯ ವೈದ್ಯಕಿಯ ಪದವೀಧರರು ಮುಚ್ಚಿ, ಸಮುದಾಯಗಳ ಮಟ್ಟದಲ್ಲಿ ಭರವಸೆ ಹುಟ್ಟಿಸಬೇಕು ಎಂದರು. ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿವೇಕ ಸಾವೋಜಿ ವರದಿ ಮಂಡಿಸಿದರು. ವಿವಿಯ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ವಿ.ಎ.ಕೋಠಿವಾಲೆ, ಡಾ.ಬಿ.ಜಿ.ದೇಸಾಯಿ, ಡಾ.ವಿ.ಡಿ.ಪಾಟೀಲ, ಡಾ. ಎನ್​.ಎಸ್​. ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ. ಜ್ಯೋತಿ ನಾಗಮೋತಿ, ಡಾ.ಎಂ.ಎಸ್​. ಗಣಾಚಾರಿ, ಸುಧಾ ರೆಡ್ಡಿ, ಡಾ. ವಿ.ಎಸ್​. ಸಾಧುನವರ, ಮಹಾಂತೇಶ ಕೌಜಲಗಿ, ಡಾ. ವಿ.ಐ. ಪಾಟೀಲ ಇತರರಿದ್ದರು.

    ಕೆಎಲ್​ಇಯ ಕಾಹೇರ್​ ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಿತು. ಇಲ್ಲಿಯ ಇಲ್ಲಿಯ ಬೋಧನಾ ಸಿಬ್ಬಂದಿ ಉತ್ತಮವಾಗಿ ಕಲಿಸಿದ್ದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಎಂಬಿಬಿಎಸ್​ನಲ್ಲಿ ನನಗೆ ಎರಡು ಚಿನ್ನದ ಪದಕ ಸಿಕ್ಕಿದ್ದು, ಖುಷಿ ತಂದಿದೆ.
    | ಯೋಗೇಶ್ರೀ ಪ್ರಧಾನ, ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ (ಓರಿಸ್ಸಾದ ಅಂಗುಲ್​ ಜಿಲ್ಲೆ)

    ಎಂಬಿಬಿಎಸ್​ ನಲ್ಲಿ ಎರಡು ಚಿನ್ನದ ಪದಕ ದೊರೆತಿರುವುದು ಸಂತಸ ತಂದಿದೆ. ಕಾಹೇರ್​ ವಿವಿಯಿಂದ ಉತ್ತಮ ಶಿಕ್ಷಣ ದೊರೆಯಿತು. ಇಲ್ಲಿಯ ಬೋಧನಾ ಸಿಬ್ಬಂದಿ ಉತ್ತಮವಾಗಿ ಸಹಕಾರ ನೀಡಿದರು. ದಿನಕ್ಕೆ 6 ಗಂಟೆ ಓದಲು ಸಮಯ ವ್ಯಯ ಮಾಡುತ್ತಿದ್ದೆ. ಅಪ್ಪ ವೈದ್ಯ ವೃತ್ತಿಯಲ್ಲಿದ್ದಾರೆ. ಮುಂದೆ ಪಿಜಿ ಮಾಡುವ ಆಸೆ ಇದೆ. ಬೆಳಗಾವಿಯಲ್ಲಿ ಮತ್ತೆ ಕಲಿಯಲು ಅವಕಾಶ ಸಿಕ್ಕರೆ ಬರುವೆ.
    | ಅಲಿಶಾ, ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ (ಪಂಚಾಬ್​& ಹೋಶಿಯಾರಪುರ ಜಿಲ್ಲೆ)

    ದಿನಕ್ಕೆ ಸುಮಾರು 6 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದೆ. ಇಲ್ಲಿ ಕಲಿಕೆಗೆ ಉತ್ತಮವಾದ ವಾತಾವರಣ ದೊರೆಯಿತು. ಇಲ್ಲಿಯ ಪರಿಣಾಮಕಾರಿಯಾದ ಬೋಧನೆಯಿಂದ ಚಿನ್ನದ ಪದಕ ಗಳಿಸಲು ಸಾಧ್ಯವಾಯಿತು. ಕಾಹೇರ್​ ವಿವಿಗೆ ಧನ್ಯವಾದ. ಭವಿಷ್ಯದಲ್ಲಿ ನಾನು ಪ್ರಾಧ್ಯಾಪಕಿಯಾಗಬೇಕೆನ್ನುವ ಆಸೆ ಇದೆ. ಈ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿರುವೆ. ತಂದೆ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತ@ ನಾವು ರಾಜಸ್ಥಾನದ ಜೈಪುರದವಳು. ಬೆಳಗಾವಿಯ ವಾತಾವರಣ, ಕೆಎಲ್​ಇ ವಿವಿಯ ಕ್ಯಾಂಪಸ್​ ಮನಸ್ಸಿಗೆ ಬಹಳ ಹಿಡಿಸಿದೆ. ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ ಸಿಬ್ಬಂದಿಗೆ ಧನ್ಯವಾದ.
    | ನಿವೇದಿತಾ ಸಕ್ಸೆನಾ, ಎಂಡಿಎಸ್​ನಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts