More

    ನೂತನ ಮೈದಾನದಲ್ಲಿ ಸಂತೆ ನಾಳೆಯಿಂದ

    ಸೊರಬ: ಪರಸ್ಪರ ಅಂತರ ಕಾಯ್ದುಕೊಂಡು ತರಕಾರಿ ಮಾರಾಟ ಮಾಡಲು ಅವಕಾಶ ನೀಡಿದರೆ ದಂಡಾವತಿ ಸೇತುವೆ ಅಕ್ಕಪಕ್ಕ ದಿನನಿತ್ಯ ಜಾತ್ರೆಯಂತೆ ಜನ ಸೇರುತ್ತಿದ್ದಾರೆ. ಕೂಡಲೇ ಸಂತೆ ತೆರವುಗೊಳಿಸಿ ನೂತನ ಸಂತೆ ಮೈದಾನಕ್ಕೆ ಸ್ಥಳಾಂತರಿಸುವಂತೆ ಪಪಂ ಮುಖ್ಯಾಧಿಕಾರಿ ಜಗದೀಶ ನಾಯ್ಕ ಅವರಿಗೆ ಶಾಸಕ ಕುಮಾರ ಬಂಗಾರಪ್ಪ ಸೂಚಿಸಿದರು.

    ಹಳೇ ಸೊರಬ ಗ್ರಾಪಂನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಎಪಿಎಂಸಿಯಲ್ಲಿ ಸಂತೆ ಸ್ಥಗಿತಗೊಳಿಸಲಾಗಿದೆ. ನೂತನ ಸಂತೆ ಮೈದಾನದಲ್ಲಿ ಜು.22ರಿಂದಲೇ ತರಕಾರಿ ಹಾಗೂ ಮಾಂಸ ಮಾರಾಟ ಮಾಡಬಹುದು ಎಂದರು.

    ಹೊಸಪೇಟೆ ಬಡವಣೆಯ ಮನೆಗಳಿಗೆ ಖಾತೆಯಿಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ. ಈ ಬಡಾವಣೆ ಪುರಸಭೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಮನೆಗಳ ದಾಖಲಾತಿ ಸರಿಪಡಿಸಿ ಖಾತೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಹಳೇ ಸೊರಬ ಗ್ರಾಪಂ ಆಡಳಿತಾಧಿಕಾರಿ, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್ ಮಾತನಾಡಿ, ಗ್ರಾಪಂನ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು. 15ನೇ ಹಣಕಾಸು ಯೋಜನೆಯಲ್ಲಿ 64 ಲಕ್ಷ ರೂ. ಅನುದಾನ ಲಭ್ಯವಿದ್ದು ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ತಾಪಂ ಇಒ ನಂದಿನಿ, ಸಹಾಯಕ ನಿರ್ದೇಶಕ ದಿನೇಶ್, ಇತರರಿದ್ದರು.

    3 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಶೌಚಗೃಹ ನಿರ್ವಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಹಳೇ ಸೊರಬದಲ್ಲಿ ಮಿನಿ ವಿಧಾನಸೌಧ, ತಾಪಂ, ಪುರಸಭೆ ಕಟ್ಟಡ, ಹೆಲಿಪ್ಯಾಡ್ ನಿರ್ವಣ, ಸರ್ಕಾರಿ ಅಧಿಕಾರಿಗಳ ವಸತಿ ಗೃಹ ನಿರ್ವಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಸಿದ್ಧಪಡಿಸಿ ಶೀಘ್ರ ಜಿಲ್ಲಾಧಿಕಾರಿಗೆ ಸಲ್ಲಿಸಿ.

    | ಕುಮಾರ ಬಂಗಾರಪ್ಪ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts