More

    ನೀರು ಹರಿಸುವಲ್ಲಿ ಅಧಿಕಾರಿಗಳ ತಾರತಮ್ಯ

    ನೀರು ಹರಿಸುವಲ್ಲಿ ಅಧಿಕಾರಿಗಳ ತಾರತಮ್ಯ
    ಕೆಂಭಾವಿ : ಮಳೆ ಇಲ್ಲದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೆ, ಕೃಷ್ಣೆ ನೀರು ಕಾಲುವೆಗೆ ಹರಿಸುವಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ ಮತ್ತೊಂದಕ್ಕೆ ಬೆಣ್ಣೆ ಸವರುವ ಕೆಲಸ ಮಾಡುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿಬರುತ್ತಿವೆ.

    ನಾಲ್ಕು ದಿನಗಳಿಂದ ನಾರಾಯಣಪುರ ಮುಖ್ಯ ಕಾಲುವೆಯಿಂದ ಕೇವಲ ಇಂಡಿ ಶಾಖಾ ಕಾಲುವೆಗೆ ನೀರು ಹರಿಸಿ ನೆರೆಯ ಜೇವರ್ಗಿ ಶಾಖಾ ಕಾಲುವೆ ಗೇಟ್ ಬಂದ್ ಮಾಡಿz್ದೆÃ ಅಧಿಕಾರಿಗಳ ಮಲತಾಯಿ ಧೋರಣೆಗೆ ಸಾಕ್ಷಿ.

    ಪಟ್ಟಣದಲ್ಲಿ ಹಾದು ಹೋಗಿರುವ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದು, ಇಲ್ಲಿಂದಲೇ ಇಂಡಿ, ಜೇವರ್ಗಿ, ಶಹಾಪುರ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಆದರೆ ಇಂಡಿ ಮುಖ್ಯ ಕಾಲುವೆಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ ಜೇವರ್ಗಿ ಕಾಲುವೆ ಗೇಟ್ ಬಂದ್ ಮಾಡಿ ಅಧಿಕಾರಿಗಳು ಆ ಭಾಗದ ರೈತರಿಗೆ ಮೋಸ ಮಾಡುತ್ತಿದ್ದಾರೆ.

    ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ರೈತರು ಈ ಕಾಲುವೆ ನೀರನ್ನೇ ಅವಲಂಬಿಸಿ ಮೆಣಸಿನಕಾಯಿ, ಹತ್ತಿ, ತೊಗರಿ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಏಕಾಏಕಿ ನೀರು ಸ್ಥಗಿತಗೊಳಿಸಿದ್ದರಿಂದ ಬೆಳೆಗಳು ಬಾಡುವ ಹಂತಕ್ಕೆ ಬಂದಿವೆ. ಇನ್ನು ಕೇವಲ ೧೫ ದಿನ ಕಾಲುವೆಗೆ ನೀರು ಹರಿಯುವ ಕಾರಣ ರೈತರು ಕಂಗಾಲಾಗಿದ್ದಾರೆ. ದೇವರು ವರ ಕೊಟ್ಟರೂ ಪೂಜಾರಿ ನೀಡಲಿಲ್ಲ ಎಂಬ ಸ್ಥಿತಿ ಜೇವರ್ಗಿ ಮತ್ತು ಯಡ್ರಾಮಿ ರೈತರದ್ದಾಗಿದೆ.

    ಬೆಂಗಳೂರು ಮತ್ತು ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ನಾರಾಯಣಪುರ ಎಡದಂಡೆ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ಏಕಕಾಲಕ್ಕೆ ವಾರಬಂದಿ ಮೂಲಕ ನೀರು ಬಿಡಬೇಕೆಂಬ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ಮಾತ್ರ ಯಾರದೋ ಒತ್ತಡಕ್ಕೆ ಮಣಿದು ಕೇವಲ ಇಂಡಿ ಕಾಲುವೆಗೆ ಹೆಚ್ಚಿನ ನೀರು ಬಿಡುತ್ತಿದ್ದಾರೆ. ಇದರಿಂದ ಜೇವರ್ಗಿ ಮತ್ತು ಯಡ್ರಾಮಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತಿಭಟನೆ ಬಿಸಿ ಎದುರಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts