More

    ನಾರಾಯಣಪುರ ನಾಲೆಗೆ 2.75 ಟಿಎಂಸಿ ನೀರು

    ದೇವದುರ್ಗ: ನಾರಾಯಣಪುರ ಬಲ ಹಾಗೂ ಎಡದಂಡೆ ನಾಲೆ ನೀರು ನಂಬಿಕೊಂಡು ಮೆಣಸಿನಕಾಯಿ ಬಿತ್ತನೆ ಮಾಡಿ ನಾಲೆಯಲ್ಲಿ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರಾಯಚೂರು ಹಾಗೂ ಯಾದಗಿರಿ ಜಿಲ್ಲೆ ರೈತರ ಹೋರಾಟಕ್ಕೆ ಸರ್ಕಾರ ಸ್ವಲ್ಪ ಮಣಿದಿದೆ. ಬೆಳೆ ರಕ್ಷಣೆಗಾಗಿ ನಾಲೆಗೆ 2.75 ಟಿಎಂಸಿ ನೀರು ಹರಿಸಲು ನೀರಾವರಿ ಇಲಾಖೆ ಮುಂದಾಗಿದೆ. ಆದರೆ, ನೀರಾವರಿ ಇಲಾಖೆ ನಿರ್ಧಾರ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

    ಮೆಣಸಿನಕಾಯಿ ಫಸಲು ಬರಲು ಫೆಬ್ರುವರಿವರೆಗೆ 8 ಟಿಎಂಸಿ ನೀರನ್ನು ವಾರಬಂದಿ ಪ್ರಕಾರ ಹರಿಸುವಂತೆ ರೈತರು ಒತ್ತಾಯ ಮಾಡಿದ್ದರು. ಆದರೆ, ಸರ್ಕಾರ ಕೇವಲ 2.75ಟಿಎಂಸಿ ನೀರು ಬಿಡಲು ತೀರ್ಮಾನಿಸಿದೆ. ಈ ಪ್ರಕಾರ ನಾರಾಯಣಪುರ ಬಲದಂಡೆ, ಎಡದಂಡೆ, ಜೇವರ್ಗಿ ಹಾಗೂ ಇಂಡಿ ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿಸಲಾಗುತ್ತಿದೆ. ಮೆಣಸಿನಕಾಯಿ ಬೆಳೆಗೆ ಮಾತ್ರ ನೀರು ಪಡೆದುಕೊಳ್ಳಬೇಕೆಂಬುದು ನೀರಾವರಿ ಇಲಾಖೆ ಅಧಿಕಾರಿಗಳ ಸೂಚನೆಯಾಗಿದೆ.

    ಆದರೆ, 2.75 ಟಿಎಂಸಿ ನೀರು ಹರಿಸಿದರೆ ನಾಲೆ ಕೊನೇ ಭಾಗಕ್ಕೆ ತಲುಪುವುದೇ ಅನುದಾನ ಎಂಬುದು ರೈತರ ವಾದವಾಗಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಬಲದಂಡೆ ನಾಲೆಯಲ್ಲಿ 68 ಟಿಎಂಸಿ ನೀರಿದ್ದು, ಕುಡಿವ ನೀರು ಸೇರಿ ವಿವಿಧ ಉದ್ದೇಶಕ್ಕೆ 40 ಟಿಎಂಸಿ ಕಾಯ್ದಿರಿಸಬಹುದು. ಬರ ನಿರ್ವಹಣೆ ಹಾಗೂ ಮುಂಜಾಗ್ರತೆ ಕ್ರಮವಾಗಿ 20 ಟಿಎಂಸಿ ನೀರು ಉಳಿಸಿಕೊಂಡರೂ ಉಳಿಯುವ 8 ಟಿಎಂಸಿ ನೀರನ್ನು ನಾಲೆಗೆ ಹರಿಸುವಂತೆ ರೈತರು ಒತ್ತಾಯಿಸಿದ್ದರು. ಆದರೆ, ಸರ್ಕಾರ ರೈತರ ಬೇಡಿಕೆಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸದೆ 2.75ಟಿಎಂಸಿ ನೀರನ್ನು 4 ದಿನ ನಾಲೆಗೆ ಹರಿಸಲು ಮುಂದಾಗಿದೆ.
    ಸರ್ಕಾರದ ನಿರ್ಧಾರ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು ಜ.8ರಂದು ಸಿರವಾರ ಕ್ರಾಸ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts