More

    ನೀರುಗಂಟಿಗಳಿಗೆ ತರಬೇತಿ ಕಾರ್ಯಗಾರ


    ಯಾದಗಿರಿ: ಗ್ರಾಮೀಣ ಭಾಗದಲ್ಲಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿಯ ಜಲ ಜೀವನ್ ಮಿಷನ್ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಮೌಲಾಲಿ ಸಲಹೆ ನೀಡಿದರು.


    ಗುರುವಾರ ನಗರದ ಚರ್ಚ್ ಹಾಲ್ನಲ್ಲಿ ಜಿಪಂ, ಯಾದಗಿರಿ ತಾಪಂ ಹಾಗೂ ಟಾಟಾ ಕಲಿಕೆ ಟ್ರಸ್ಟ್ ಸಹಯೋಗದಲ್ಲಿ ಗ್ರಾಪಂಗಳ ನೀರುಗಂಟಿಗಳಿಗೆ ಆಯೋಜಿಸಿದ್ದ ಜೆಜೆಎಂ ಯೋಜನೆ ಕುರಿತಾದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗಬೇಕಾದರೆ ಹರ ಸಾಹಸ ಪಡಬೇಕಿತ್ತು. ಅದರಲ್ಲೂ ಬೆಟ್ಟ ಗುಡ್ಡದ ಪ್ರದೇಶದಲ್ಲಿನ ಗ್ರಾಮೀಣ ಭಾಗದಲ್ಲಿ ಚಿಂತಾಚನಕ ಸ್ಥಿತಿ ಇತ್ತು. ಆದರೆ, ಇದೀಗ ಸಕರ್ಾರ ಕುಡಿಯುವ ನೀರಿನ ಬಗ್ಗೆ ಸಾಖಷ್ಟು ಕಾಳಜಿ ವಹಿಸಿ, ದೊಡ್ಡ ದೊಡ್ಡ ಯೋಜನೆ ಜಾರಿಗೆ ತರುತ್ತಿದೆ ಎಂದರು.

    ತಾಪಂ ಅಧೀಕ್ಷಕ ಶಿವರಾಯ ಮಾತನಾಡಿ, ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರತಿ ಮನೆಗಳಿಗೆ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಕೆಲ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿ ಇವೆ. ಕಲಿಕೆ ಟಾಟಾ ಟ್ರಾಸ್ಟ್ ಸಂಸ್ಥೆ ಪ್ರತಿ ಗ್ರಾಮದಲ್ಲಿ ಜೆಜೆಎಂ ಯೋಜನೆ ಕುರಿತು ಮತ್ತು ನೀರು ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಯೋಜನೆ ಅನುಷ್ಠಾನದಲ್ಲಿ ನೀರುಗಂಟಿಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

    ಸಂಸ್ಥೆಯ ತಾಲೂಕು ಸಂಯೋಜಕ ಪವನ್ ಕುಮಾರ, ಇಂದಿನ ದಿನಗಳಲ್ಲಿ ನೀರು ಹೆಚ್ಚು ಪೋಲಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜೆಜೆಎಂ ಯೋಜನೆಯಡಿ ಪ್ರತಿ ಹಳ್ಳಿಗಳ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಅದನ್ನು ಪೋಲು ಮಾಡದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಸಂಸ್ಥೆ ಸಂಯೋಜಕ ಮಂಜುನಾಥ ಧನ್ನಿ ಪ್ರಾಸ್ತಾವಿಕ ಮಾತನಾಡಿ, ಜೆಜೆಎಂ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ನಳದ ಸಂಪರ್ಕವನ್ನು ಕಲ್ಪಿಸಿದೆ. ವಾಟರ್ ಮ್ಯಾನ್ಗಳು ಪ್ರತಿ ಮನೆಗೆ ಸರಿಯಾದ ಸಮಯದಲ್ಲಿ ನೀರು ಹಂಚಿಕೆ ಹೇಗೆ ಮಾಡುವುದು ಎನ್ನುವುದು ಈ ಕಾಯರ್ಾಗಾರದ ಪ್ರಮುಖ ಉದ್ದೇಶ ಎಂದರು.

    ಟ್ರಸ್ಟ್ ಸಂಯೋಜಕ ಶಾಂತಲಿಂಗ, ಅಭಿಯಂತರ ಪ್ರಶಾಂತ, ವಿಶ್ವನಾಥ ಇದ್ದರು. ಪವನ್ ಕುಮಾರ ಕಾರ್ಯಗಾರದ ಉಸ್ತುವಾರಿ ನೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts