More

    ನೀರಿಗಾಗಿ ಆಗ್ರಹಿಸಿ ಶಹಾಪುರ ಬಂದ್


    ಯಾದಗಿರಿ: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟದಲ್ಲಿದ್ದರೂ ಸರಕಾರ ಅನ್ನದಾತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

    ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸಬೇಕೆಂದು ನಡೆಯುತ್ತಿರುವ ಧರಣಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸದೆ ಇರುವುದು ಮತ್ತು ನೀರಿನ ಸಮಸ್ಯೆಗೆ ಪರಿಹಾರ ಸೂಚಿಸದೆ ಇರುವುದು ನೋವಿನ ಸಂಗತಿ. ಅಧಿಕಾರದಲ್ಲಿರುವ ಶಾಸಕರು, ಮಂತ್ರಿಗಳು ರೈತರ ಹಿತ ಕಾಪಾಡವಲ್ಲಿ ವಿಫಲರಾಗಿದ್ದಾರೆ. ರೈತರನ್ನು ಹೊರಗಿಟ್ಟು ಐಸಿಸಿ ಸಭೆಯಲ್ಲಿ ವ್ಯತಿರಿಕ್ತ ತಿಮರ್ಾನಗಳನ್ನು ತೆಗುದುಕೊಳ್ಳಲಾಗಿದೆ ಎಂದು ಭಾನುವಾರ ಭೀ.ಗುಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಎಡದಂಡೆಯ ಕಾಲುವೆಯ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸರಕಾರ ನೀರು ಬಿಡದಿದ್ದರೆ ಅನ್ನದಾತರು 30ಕೋಟಿ ರೂ.ನಷ್ಟ ಅನುಭವಿಸಬೇಕಾಗುತ್ತದೆ. ಮೇಣಸಿನಕಾಯಿ ಹಾಗೂ ಇತರೆ ಬೆಳೆಗಳಿಗೆ ನೀರು ಕೊಡಬೇಕು. ಇಲ್ಲದಿದ್ದರೆ ಬೆಳೆಗಳ ನಷ್ಟಕ್ಕೆ ಪರಿಹಾರ ಕೊಡಬೇಕು. ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿರುವ ರೈತ ಸಮುದಾಯ ಸಾಮಾಜಿಕ, ಆಥರ್ಿಕ, ರಾಜಕೀಯ ಸ್ಥಾನಮಾನಗಳಿಂದ ವಂಚಿತವಾಗಿವೆ ಎಂದು ಹರಿಹಾಯ್ದರು.

    ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಸಂವೇದನಾಶೀಲತೆ ಇಲ್ಲ. ಈ ಭಾಗದ ರೈತರು ಬಿತ್ತಿದ ಮೇಣಸಿನಕಾಯಿ ಬೆಳೆಗಳು ಹೂ-ಕಾಯಿ ಬಿಡುವ ಹಂತದಲ್ಲಿವೆ. ಇಂಥ ಸಂದರ್ಭದಲ್ಲಿ ಎಡದಂಡೆ ಕಾಲುವೆಗೆ ನೀರು ಬಿಡಬೇಕು ಇಲ್ಲದಿದ್ದರೆ ಮೆಣಸಿನಕಾಯಿ ಬೆಳೆ ಒಣಗಿ ಹೊಗುತ್ತದೆ. ಸಕರ್ಾರವನ್ನು ಬಡಿದೆಬ್ಬಿಸಲು ಸೋಮುವಾರ ನಡೆಯುವ ಶಹಾಪುರ ಬಂದ್ಗೆ ಸಮಸ್ತ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts