More

    ನೀರಾವರಿ ಯೋಜನೆ ಪೂರ್ಣಗೊಳಿಸಲು ಸಿಎಂ ಆದೇಶ

    ಕಾಗವಾಡ, ಬೆಳಗಾವಿ: ತಾಲೂಕಿನ ಬರದ ನಾಡಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವದ ಯೋಜನೆಯಾದ ಖಿಳೇಗಾವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದು ಶಾಸಕ ಶ್ರೀಮಂತ ಪಾಟೀಲ ತಿಳಿಸಿದರು.

    ತಾಲೂಕಿನ ಉಗಾರ ಖುರ್ದ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಹಾಗೂ ವಿವಿಧ ಯೋಜನೆಯಡಿ ಸುಮಾರು 5.27 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ, ವಾಜಪೇಯಿ ನಗರ ವಸತಿ ಯೋಜನೆ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ ಮತ್ತು ಪಟ್ಟಣದ ಪ್ರತಿಯೊಂದು ಮನೆಗೂ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸಲು ಡಸ್ಟ್ ಬೀನ್ ವಿತರಿಸಿ ಅವರು ಮಾತನಾಡಿದರು. ಕಾಗವಾಡ ಮತಕ್ಷೇತ್ರವನ್ನು ಮಾದರಿ ಮಾಡುವ ಗುರಿ ಹೊಂದಿದ್ದು, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಸುಭಾಷ ಕುರಾಡೆ ಮಾತನಾಡಿ, 20 ವರ್ಷಗಳಿಂದ ಉಗಾರ ಖುರ್ದ ಪುರಸಭೆ ವ್ಯಾಪ್ತಿಯಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು 4 ವರ್ಷದಲ್ಲಾಗಿವೆ ಎಂದರು. ಪುರಸಭೆಗೆ 5.27 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಶಾಸಕ ಶ್ರೀಮಂತ ಪಾಟೀಲ ಅವರನ್ನು ಪುರಸಭೆ ವತಿಯಿಂದ ಸತ್ಕರಿಸಲಾಯಿತು.

    ಮುಖಂಡರಾದ ವಿಲಾಸ ಪಾಟೀಲ, ರಾಕೇಶ ಪಾಟೀಲ, ಪುರಸಭೆ ಸದಸ್ಯರಾದ ಪ್ರುಲ ಥೋರುಸೆ, ರಾಜು ಪಾಟೀಲ, ಸುಜಯ ಫರಾಕಾಟೆ, ಮದನ ದೇಶಿಂಗೆ, ಯೋಗೇಶ ಕುಂಬಾರ, ರೂಪಾ ದೇಶಿಂಗೆ, ಹೀನಾ ಶೇಖ, ಪ್ರತಾಪ ಜತ್ರಾಟ, ವಿನಾಯಕ ಕಾಮೇರಿ, ರಾಕೇಶ ಕಾಂಬಳೆ, ಸದಾಶಿವ ಸಿಂಗೆ, ಅಶೋಕ ಕಾಂಬಳೆ, ಲಕ್ಷ್ಮಣ ಕಟಗೇರಿ, ರಾಮು ಸೊಡ್ಡಿ, ಅಬ್ದುಲ್ ಮುಲ್ಲಾ, ಸುನೀಲ ಬಬಲಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts