More

    ನೀರಾವರಿ ಕ್ಷೇತ್ರಕ್ಕೆ ಉಮೇಶ ಕೊಡುಗೆ ಅಪಾರ – ರಮೇಶ ಕತ್ತಿ

    ಹುಕ್ಕೇರಿ: ಮತೇತ್ರದಲ್ಲಿ ಕೆರೆ ಕಟ್ಟೆಗಳು ತುಂಬಿ ನಿಂತಿರುವುದನ್ನು ನೋಡಿದಾಗ ಅಣ್ಣನ ನೆನಪು ಕಾಡುತ್ತದೆ ಎಂದು ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
    ತಾಲೂಕಿನ ಶಿರಹಟ್ಟಿ, ಸಾರಾಪುರ, ಶೇಲಪುರ, ಯಾದಗೂಡ, ಅಮ್ಮಣಗಿ ಗ್ರಾಮದ ಕೆರೆಗಳನ್ನು ಭಾನುವಾರ ವೀಸಿ ಬೆಳವಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಣ್ಣ ಉಮೇಶ ಕತ್ತಿ ನೀರಾವರಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಪರಿಶ್ರಮದ ಲವಾಗಿ ಇಂದು ಕೆರೆಗಳು ತುಂಬಿ ನಿಂತಿವೆ. ಆದರೆ ಅದನ್ನು ನೋಡಲು ಇಂದು ಅಣ್ಣನೇ ಇಲ್ಲ ಎಂದರು.

    ಹುಕ್ಕೇರಿ ಮತೇತ್ರದಲ್ಲಿ ಶೇ.80 ನೀರಾವರಿಯಾಗಲು ಕೆರೆ ಕಟ್ಟೆಗಳೇ ಕಾರಣವಾಗಿವೆ. ಈಗ ಕೆರೆ ತುಂಬಿಸಿ ಬೇಸಿಗೆಯಲ್ಲಿ ಹಳ್ಳ&ಕೊಳ್ಳ, ಬಾವಿ, ಬೋರ್​ವೆಲ್​ಗಳ ಅಂತರ್ಜಲ ಹೆಚ್ಚಳವಾಗುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಗಮನಿಸಬೇಕೆಂದು ಸೂಚಿಸಿದರು.

    ಸುಲ್ತಾನಪುರ ಬಳಿ ಇರುವ ಬಾಂದಾರದಿಂದ ಪ್ರತ್ಯೇಕವಾಗಿ ಪೈಪ್​ಲೈನ್​ ಮೂಲಕ ತಾಲೂಕಿನ ಉತ್ತರ ಭಾಗದ 19 ಕೆರೆಗಳಿಗೆ ನಿರಂತರ ನೀರು ಹರಿಸುವ ಯೋಜನೆಯ ಟೆಂಡರ್​ ಪ್ರಕ್ರಿಯೆ ಮುಗಿದಿದೆ. ಸಂಕೇಶ್ವರದ ಶಂಕರಲಿಂಗ ಗುಡಿಯವರೆಗೆ ಹಿರಣ್ಯಕೇಶಿ ನದಿಯುದ್ದಕ್ಕೂ ಪೈಪ್​ಲೈನ್​ ಅಳವಡಿಸಿ ಬೇಸಿಗೆಯಲ್ಲಿ ಹಿರಣ್ಯಕೇಶಿ ನದಿಯ ಬ್ಯಾರೇಜ್​ಗಳಿಗೆ ನೀರು ತುಂಬಿಸುವ ಯೋಜನೆ ಸಹ ರೂಪಿಸಿದ್ದಾರೆ. ಇದರಿಂದ ಹುಕ್ಕೇರಿ ಮತೇತ್ರದಲ್ಲಿ 12 ತಿಂಗಳೂ ರೈತರಿಗೆ ನೀರಾವರಿ ಸೌಲಭ್ಯ ಸಿಗುತ್ತದೆ ಎಂದರು.

    ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ತೆಪ್ಪ ನಾಯಿಕ ಮಾತನಾಡಿ, ಪ್ರತಿ ಭಾನುವಾರ ಮಾಜಿ ಸಚಿವ ಉಮೇಶ ಕತ್ತಿ ಅವರು ತಾಲೂಕಿನ ಕೆರೆಗಳನ್ನು ವೀಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದರು. ಅವರ ಅಗಲಿಕೆಯಿಂದ ಈ ಕಾರ್ಯ ಸ್ಥಗಿತವಾಗುತ್ತದೆ ಎಂದು ಭಾವಿಸಿದ್ದ ನಮಗೆ ಅವರ ಕೆಲಸವನ್ನು ಅವರ ತಮ್ಮ ಮಾಡುತ್ತಿರುವುದು ಹರ್ಷ ಮೂಡಿಸಿದೆ ಎಂದರು.

    ಹೊನ್ನಪ್ಪ ನಾಯಿಕ, ಬಾಪು ನಾಯಿಕ, ಸಾತಪ್ಪ ನಾಯಿಕ, ಪ್ರಶಾಂತ ಪಾಟೀಲ, ಆನಂದ ದಪ್ಪಾಧೂಳಿ, ಡಿ.ಕೆ.ಅವರಗೋಳ, ಶಿವನಗೌಡ ಪಾಟೀಲ, ರಾಮಣ್ಣ ಜನ್ಮಟ್ಟಿ, ಮಲ್ಲಪ್ಪ ವಾಳಕಿ, ಕಲ್ಲನಗೌಡ ಪಾಟೀಲ, ಶಿವು ನಾಯಿಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts