More

    ನಿವೃತ್ತ ನೌಕರರಿಗೂ ನಗದುರಹಿತ ಆರೋಗ್ಯ ಭಾಗ್ಯ ಯೋಜನೆ

    ಸಾಗರ: ರಾಜ್ಯದಲ್ಲಿರುವ 4 ಲಕ್ಷ ನಿವೃತ್ತ ನೌಕರರು ಮತ್ತು 1.5 ಲಕ್ಷ ಪಿಂಚಣಿದಾರರಿಗೆ ನಗದುರಹಿತ ಆರೋಗ್ಯ ಭಾಗ್ಯ ಯೋಜನೆ ಮುಂದಿನ ಎರಡು, ಮೂರು ತಿಂಗಳಿನಲ್ಲಿ ಜಾರಿಗೆ ಬರಲಿದೆ ಎಂದು ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್.ಭೈರಪ್ಪ ಹೇಳಿದರು.
    ಸಾಗರದ ಸಾಹಿತ್ಯ ಭವನದಲ್ಲಿ ನಿವೃತ್ತ ನೌಕರರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿ, ಈಚೆಗೆ ಬೆಂಗಳೂರಿನಲ್ಲಿ ನಡೆದ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳಿಗೆ ನಿವೃತ್ತ ನೌಕರರಿಗೆ ಆರೋಗ್ಯ ಭಾಗ್ಯ, ಪಿಂಚಣಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗಿದು, ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
    ಸಾಗರ ತಾಲೂಕಿನಲ್ಲಿ ನಿವೃತ್ತ ನೌಕರರ ಭವನ ನಿರ್ಮಿಸುವ ಯೋಜನೆ ಅತಿ ಶೀಘ್ರವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನೀವು ಹಮ್ಮಿಕೊಳ್ಳುವ ಎಲ್ಲ ಕೆಲಸಕ್ಕೆ ರಾಜ್ಯ ಸಂಘ ಸಂಪೂರ್ಣ ಸಹಕಾರ ನೀಡಲಿದೆ. ಸರ್ಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡುವುದರಿಂದ ಅದು ಸರ್ಕಾರಿ ಸ್ವತ್ತು ಆಗಿರುತ್ತದೆ. ಅದನ್ನು ನಾವು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದರು.
    ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾ.ಸ.ನಂಜುಂಡಸ್ವಾಮಿ ಮಾತನಾಡಿದರು. ರಾಜ್ಯ ಸಂಘದ ಪದಾಧಿಕಾರಿಗಳಾದ ಎನ್.ನಂಜಪ್ಪ, ಎಸ್.ಎಂ.ಆನಂದ್, ಮುನಿ ದೇವರಾಜ್, ಗುರುಲಿಂಗಸ್ವಾಮಿ, ಶಾಂತಾವತಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಎ.ಸಿದ್ದಾನಾಯ್ಕ, ಎಂ.ಸಿ.ಪರಶುರಾಮಪ್ಪ, ಎಸ್.ಎಂ.ಮಂಜಪ್ಪ, ನರಹರಿ, ಚಂದ್ರಶೇಖರ್, ದತ್ತಾತ್ರೇಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts