More

    ನಿರ್ಗತಿಕರ ಸೇವೆ ಭಗವಂತನಿಗೆ ಪ್ರಿಯ: ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ಬಣ್ಣನೆ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ನಿರ್ಗತಿಕರು, ಅನಾಥರು, ವೃದ್ಧರ ಸೇವೆ ಭಗವಂತನಿಗೆ ಅತ್ಯಂತ ಪ್ರೀತಿಯ ಕಾರ್ಯ ಎಂದು ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ತಿಳಿಸಿದರು.
    ತಾಲೂಕಿನ ಯಂಟಗಾನಹಳ್ಳಿ ಗ್ರಾಪಂನ ಚಿಕ್ಕಮಾರನಹಳ್ಳಿಯಲ್ಲಿ ಶನಿವಾರ ರಾಜರತ್ನ ೌಂಡೇಷನ್ ಟ್ರಸ್ಟ್‌ನಿಂದ ಆಯೋಜಿಸಿದ್ದ ನೂತನ ರಾಜರತ್ನನ ಗಂಧದಗುಡಿ ಸೇವಾಶ್ರಮ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
    ಪ್ರತಿಯೊಬ್ಬರೂ ದುಡಿಮೆಯ ಸ್ವಲ್ಪ ಪ್ರಮಾಣದ ಹಣವನ್ನು ಸಮಾಜದ ಏಳಿಗೆಗೆ ಮೀಸಲಿಡಿಸುವ ಗುಣ ಬೆಳೆಸಿಕೊಳ್ಳಬೇಕು. ಹಿರಿಯರನ್ನು ಗೌರವಿಸಿದ್ದರೆ ದೇವರನ್ನು ಗೌರವಿಸಿದಂತೆ. ವೃದ್ಧರ ರಕ್ಷಣೆ ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದರು.


    ಅವಿಭಕ್ತ ಕುಟುಂಬ ಸಂಸ್ಕೃತಿ ಬದಲಾಗಿ ಪ್ರಸ್ತುತದಲ್ಲಿ ಮಾತೃಪ್ರಧಾನ, ಪಿತೃಪ್ರಧಾನ ಕುಟುಂಬಗಳಾಗಿ ವಿಭಾಗವಾಗುತ್ತಿದೆ. ಕೆಲವರು ಹೆತ್ತ ತಂದೆ-ತಾಯಿಯನ್ನು ಆರೈಕೆ ಮಾಡದೆ ಬೀದಿಪಾಲು ಮಾಡುತ್ತಿದ್ದು, ಅತಂಹ ನೆರವಿಗೆ ವೃದ್ಧಾಶ್ರಮ ಮುಖ್ಯ ಪಾತ್ರವಹಿಸುತ್ತದೆ. ಸಾಕಷ್ಟು ಮಂದಿ ಇಂದಿಗೂ ಬೀದಿಯಲ್ಲಿ ಜೀವನ ನಡೆಸುತ್ತಿದ್ದು, ಅವರ ಆರೋಗ್ಯ ಮತ್ತು ಆಯುಷ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಆಶ್ರಮಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜರತ್ನನ ಗಂಧದಗುಡಿ ಸೇವಾಶ್ರಮ ಕಾರ್ಯ ಶ್ಲಾಘನೀಯ ಎಂದರು.
    ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ವರನಟ ಡಾ.ರಾಜ್‌ಕುಮಾರ್ ಅವರ ಪುತ್ರ ಪುನೀತ್‌ರಾಜ್‌ಕುಮಾರ್ ಅವರ ಸೇವಾ ಮನೋಭಾವನೆದಿಂದ ಪ್ರೇರಣೆಗೊಂಡಿರುವ ರಾಜರತ್ನ ೌಂಡೇಷನ್ ಸಿಬ್ಬಂದಿ, ನಿರ್ಗತಿಕರಿಗೆ ಸೇವಾಶ್ರಮ ನಿರ್ಮಿಸಲು ಮುಂದಾಗಿರುವುದು ಮಾದರಿ ಕಾರ್ಯ, ಒಳ್ಳೆಯ ಕೆಲಸ ದೇವರ ಕೆಲಸವಾಗಿದ್ದು, ಅಂತಹ ಕೆಲಸಕ್ಕೆ ಮುಂದಾಗಿರುವವರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
    ದಕ್ಷಿಣ ಶಿರಡಿ ಶ್ರೀ ಸಾಯಿ ಮಂದಿರ ದತ್ತಪೀಠದ ಧರ್ಮದರ್ಶಿ ರಘನಂದನ್, ತಹಸೀಲ್ದಾರ್ ಕೆ.ಮಂಜುನಾಥ್, ರಾಜಸ್ವನಿರೀಕ್ಷಕ ಅಶ್ವತ್ಥ, ಕಾರ್ಮಿಕ ನಿರೀಕ್ಷಕ ಸಿ.ಡಿ.ನಾಗರತ್ನ, ಹಿರಿಯ ವೈದ್ಯಕೀಯ ತಜ್ಞೆ ಡಾ.ನಿರ್ಮಲಾ, ತಾಪಂ ಮಾಜಿ ಸದಸ್ಯ ಎಂ.ವಿ.ರುದ್ರೇಶ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮಮುನಿರಾಜು, ಸದಸ್ಯರಾದ ಮಂಜುನಾಥಯ್ಯ, ಶಿಲ್ಪಾಶ್ರೀಕುಮಾರ್, ಹನುಮಂತರಾಜು, ಕಣೇಗೌಡನಹಳ್ಳಿ ಗ್ರಾಪಂ ಅಧ್ಯಕ್ಷೆ ಅಶ್ವತ್ಥ್, ಕಲಾವಿದ ಚಿಕ್ಕಮಾರನಹಳ್ಳಿದಿನೇಶ್, ಸಿ.ಎಚ್.ಸಿದ್ದಯ್ಯ, ಡಿ.ಆರ್.ಆನಂದ್, ಮುಖಂಡರಾದ ಎಂ.ಎನ್.ರವಿಕುಮಾರ್, ನರಸಿಂಹಮೂರ್ತಿ, ರಾಜರತ್ನ ೌಂಡೇಷನ್ ಟ್ರಸ್ಟ್ ಅಧ್ಯಕ್ಷೆ ಡಿ.ಟಿ.ಚೈತ್ರಾ, ಕಾರ್ಯದರ್ಶಿ ಡಿ.ರಂಜಿತ, ಖಜಾಂಚಿ ಅಭಿಷೇಕ್, ಸದಸ್ಯರಾದ ಎಚ್.ಮಧು, ಭಾಗಮ್ಮ, ಗಂಧದಗುಡಿ ಸೇವಾಶ್ರಮ ವ್ಯವಸ್ಥಾಪಕ ಪುರುಷೋತ್ತಮ್, ನಿರ್ದೇಶಕರಾದ ಯಲಚಗೆರೆದೇವರಾಜು, ಎ.ಮಹೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts