More

    ನಿರಂತರ ಧರಣಿ ಸತ್ಯಾಗ್ರಹ ಆರಂಭ

    ಸವಣೂರ: ಪರಿಶಿಷ್ಟ ಪಂಗಡದ ವಾಲ್ಮೀಕಿ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 7.5ರಷ್ಟು ಮೀಸಲಾತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು, ಸದಸ್ಯರು ಪಟ್ಟಣದ ಕಂದಾಯ ಇಲಾಖೆ ಕಚೇರಿ ಎದುರು ಗುರುವಾರ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದರು.

    ಪರಿಶಿಷ್ಟ ಪಂಗಡದ ವಾಲ್ಮೀಕಿ ಜನಾಂಗಕ್ಕೆ ಶೇ. 7.5 ಮೀಸಲಾತಿ ನೀಡುವ ಕುರಿತು ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನದಾಸ್ ಆಯೋಗ ವರದಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆದೇಶದ ಮೇರೆಗೆ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುತ್ತಿದೆ ಎಂದು ಮಹಾಸಭಾ ತಾಲೂಕಾಧ್ಯಕ್ಷ ಪ್ರಕಾಶ ರ್ಬಾ ತಿಳಿಸಿದರು.

    ಪದಾಧಿಕಾರಿಗಳಾದ ಉಡಚಪ್ಪ ಬಡಲಿಂಗಪ್ಪನವರ, ರಾಜಶೇಖರ ಬಳ್ಳಾರಿ, ಮೇಲಾರಪ್ಪ ತಳವಾರ, ಬಸವರಾಜ ಮೈದೂರ, ನಾಗಪ್ಪ ತಿಪ್ಪಕ್ಕನವರ, ಫಕೀರಪ್ಪ ವಾಲ್ಮೀಕಿ, ಶಿವಪುತ್ರಪ್ಪ ಕಲಕೋಟಿ, ಶಿವಪ್ಪ ಕಬನೂರ, ಗುಡ್ಡಪ್ಪ ಅತ್ತಿಗೇರಿ, ನಾಗಪ್ಪ ಓಲೇಕಾರ, ಗಂಗಾಧರ ಬಾಣದ, ಮಾರುತಿ ನಾಯಕ, ಕಾಂತೇಶ ವಾಲ್ಮೀಕಿ, ಯಲ್ಲಪ್ಪ ಅತ್ತಿಗೇರಿ, ಉಮೇಶ ದೊಡ್ಡಮನಿ, ನಾಗರಾಜ ವಾಲ್ಮೀಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts