More

    ನಿರಂತರ ಅಧ್ಯಯನದಿಂದ ಭವಿಷ್ಯ ಉಜ್ವಲ

    ಗೋಕಾಕ: ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು.
    ಇಲ್ಲಿನ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಉಜ್ವಲ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.
    ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಐ.ಭಂಡಾರೆ, ಪ್ರಾಚಾರ್ಯ ಅರುಣ ಪೂಜೇರ, ಕೆ.ಎಲ್.ಗುಂಡ್ಯಾಗೋಳ, ಎಸ್.ಎಂ.ಮುಲ್ಲಾ, ಎಸ್.ಬಿ.ಬಾಗಾಯಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕೆಂಪಣ್ಣ ಕಡಬಿ, ಸಮೀನಾ ಹುಲಕುಂದ, ಮುತ್ತೆವ್ವ ಆಡಿನ, ಸುಮಿತ್ರಾ ಲಮಾಣಿ, ಲಕ್ಷ್ಮೀ ಕಡಕೋಳ, ತನುಜಾ ಪೆದ್ದೆನವರ ಇತರರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts