More

    ನಿಯಮ ಪಾಲಿಸಿ ಕರೊನಾ ಮುಕ್ತಗೊಳಿಸಿ

    ನಿಯಮ ಪಾಲಿಸಿ ಕರೊನಾ ಮುಕ್ತಗೊಳಿಸಿ

    ಚಿಕ್ಕಮಗಳೂರು: ಕರೊನಾ ತಡೆಗೆ ಮಾಸ್ಕ್ ಧರಿಸುವಂತೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದ ಮಾಸ್ಕ್ ದಿನವನ್ನು ಗುರುವಾರ ಜಿಲ್ಲಾದ್ಯಂತ ಆಚರಿಸಲಾಯಿತು. ಮಸ್ಕ್ ಬಳಕೆ ಉಪಯೋಗದ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.

    ಡಿಸಿ ಕಚೇರಿ ಆವರಣದಲ್ಲಿ ನಗರಸಭೆ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಹಮ್ಮಿಕೊಂಡಿದ್ದ ಜಾಥಾ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

    ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು. ಈ ಉದ್ದೇಶವನ್ನು ನಾಗರಿಕರಿಗೆ ತಿಳಿಸುವ ಸಲುವಾಗಿ ಜಾಥಾ ನಡೆಸಲಾಗುತ್ತಿದೆ ಎಂದರು.

    ನಗರಸಭೆ ಹಾಗೂ ತಾಲೂಕು ಕಚೇರಿಯ 50 ಸಿಬ್ಬಂದಿ ಡಿಸಿ ಕಚೇರಿಯಿಂದ ವಿವಿಧ ಘೊಷಣೆಯ ಫಲಕ ಹಿಡಿದು ಐಜಿ ರಸ್ತೆ ಮೂಲಕ ಸಾಗಿ ತಾಲೂಕು ಕಚೇರಿಗೆ ತೆರಳಿದರು.

    ಪೌರಾಯುಕ್ತ ಬಿ.ಸಿ.ಬಸವರಾಜ್, ತಹಸೀಲ್ದಾರ್ ಡಾ. ಕಾಂತರಾಜ್, ಉಪ ತಹಸೀಲ್ದಾರ್ ರತ್ನಾಕರ್, ಸತ್ಯನಾರಾಯಣ, ಕಂದಾಯ ಅಧಿಕಾರಿ ಬಸವರಾಜು, ಪರಿಸರ ಅಭಿಯಂತ ರಕ್ಷತ್ ಗೌಡ, ಎಇಇ ನಾಗಲಿಂಗಪ್ಪ ಬಡಿಗೇರ್, ಅಭಿಯಂತ ಚಂದನ್ ಇದ್ದರು.

    ಜನಜಾಗೃತಿಗೆ ಜಾಥಾ: ಕರೊನಾ ಮುಕ್ತ ಸಮಾಜ ನಿರ್ವಣಕ್ಕಾಗಿ ಸರ್ಕಾರದ ನಿಯಮ ಪಾಲನೆ ಅಗತ್ಯ. ಮಾಸ್ಕ್ ಉಪಯೋಗ ಜನರಿಗೆ ತಿಳಿಸಿ ಅವರನ್ನು ಕರೊನಾದಿಂದ ರಕ್ಷಣೆ ಮಾಡಲು ಜಾಥಾ ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಹೇಳಿದರು.

    ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಜಾಥಾ ಉದ್ಘಾಟಿಸಿ ಮಾತನಾಡಿ, ಮನೆಯಿಂದ ಹೊರಗೆ ಹೋಗುವಾಗ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎನ್.ಉಮೇಶ್ ತಿಳಿಸಿದರು.

    ಪುರುಷ, ಮಹಿಳಾ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ತಾಲೂಕು ಕಚೇರಿಯಿಂದ ಜಿಲ್ಲಾ ಆಸ್ಪತ್ರೆವರೆಗೆ ಮೆರವಣಿಗೆ ನಡೆಸಿದರು.

    ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ, ಡಾ. ಅಶ್ವತ್ಥ್​ಬಾಬು, ಡಾ. ಭರತ್, ಡಾ. ಸೀಮಾ, ಸಿಬ್ಬಂದಿ ಜಲಜಾಕ್ಷಿ, ಪ್ರಭುಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts