More

    ನಿಯಮ ಉಲ್ಲಂಘಿಸಿ ಹೊರಗಡೆ ಸುತ್ತಾಟ

    ಬ್ಯಾಡಗಿ: ಗೃಹ ಬಂಧನದಲ್ಲಿರಬೇಕಾದ ಬಹುತೇಕರು ನಿಯಮ ಉಲ್ಲಂಘಿಸಿ ಹೊರಗೆ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

    ತಾಲೂಕಿನಲ್ಲಿ ಒಟ್ಟು 11 ಜನ ವಿದೇಶದಿಂದ ಬಂದವರಿದ್ದಾರೆ. ಚಿಕ್ಕಬಾಸೂರು ಕೇಂದ್ರ ವ್ಯಾಪ್ತಿಯಲ್ಲಿ 160ಕ್ಕೂ ಹೆಚ್ಚು ಜನ ಹೊರರಾಜ್ಯ ಸೇರಿ ಬೇರೆ ಜಿಲ್ಲೆಗಳಿಂದ ಬಂದಿದ್ದಾರೆ. ಶಂಕರಿಪುರ ಕೇಂದ್ರ ವ್ಯಾಪ್ತಿಯಲ್ಲಿ ಹೊರರಾಜ್ಯದಿಂದ 53 ಹಾಗೂ ಬೇರೆ ಜಿಲ್ಲೆಯಿಂದ 453, ಕದರಮಂಡಲಗಿ ಕೇಂದ್ರ ವ್ಯಾಪ್ತಿಯಲ್ಲಿ 15 ಹೊರರಾಜ್ಯ, 370 ಬೇರೆ ಜಿಲ್ಲೆ, ಕಾಗಿನೆಲೆ ವ್ಯಾಪ್ತಿಯಲ್ಲಿ ಹೊರರಾಜ್ಯ 15, ಹೊರಜಿಲ್ಲೆಯಿಂದ 145 ಜನರು ಸ್ವಗ್ರಾಮಕ್ಕೆ ಮರಳಿದ್ದಾರೆ.

    ಇವರಲ್ಲಿ ಬಹುತೇಕರು ಕೇರಳ, ಮಂಗಳೂರು, ಬೆಂಗಳೂರು, ಗೋವಾಕ್ಕೆ ಪ್ರದೇಶಗಳಿಗೆ ದುಡಿಯಲು ತೆರಳಿದವರು. ಸ್ಥಳೀಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಹಲವರನ್ನು ಗುರುತಿಸಿ, ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಗೃಹ ಬಂಧನದಲ್ಲಿರಲು ತಿಳಿಸಿದ್ದಾರೆ. ಆದರೆ, ಇನ್ನೂ ಅನೇಕರು ಯಾವುದೇ ಪರೀಕ್ಷೆಗೆ ಒಳಪಡದೆ, ವೈದ್ಯರ ತಂಡ ಭೇಟಿ ನೀಡಿದಾಗ ಸುಳ್ಳು ಹೇಳುವುದು, ತಪ್ಪಿಸಿಕೊಳ್ಳುವ ಕೆಲಸದಲ್ಲಿ ತೊಡಗಿರುವುದು ಜನರ ಭಯಕ್ಕೆ ಕಾರಣವಾಗಿದೆ.

    ತಾಲೂಕು ಕೇಂದ್ರದಲ್ಲಿ ಮಾಹಿತಿಯಿಲ್ಲ: ಈಗಾಗಲೇ ದುಡಿಯಲು ಹೊರಹೋಗಿ ಗ್ರಾಮಕ್ಕೆ ಬಂದು ನಾಲ್ಕಾರು ದಿನ ಗತಿಸಿವೆ. ಆಶಾ ಕಾರ್ಯಕರ್ತೆಯರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಆದರೆ, ಹೆಸರು ಕೊಟ್ಟ ಎಲ್ಲರೂ ಬಂದು ಪರೀಕ್ಷೆ ಮಾಡಿಕೊಂಡ ಬಗ್ಗೆ ಅಧಿಕಾರಿಗಳ ಬಳಿ ಸಂಪೂರ್ಣ ಮಾಹಿತಿಯಿಲ್ಲ. ಉಪಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡವರ ಪಟ್ಟಿ ಮಾತ್ರ ನೀಡುತ್ತಿದ್ದು, ಉಳಿದವರ ಬಗ್ಗೆ ನಿಗಾ ಇಡದಿದ್ದಲ್ಲಿ ಸಮಸ್ಯೆ ಬಿಗಡಾಯಿಸಲಿದೆ ಎನ್ನುತ್ತಾರೆ ಗ್ರಾಮಸ್ಥರು.

    ಕೂಡಲೇ ಆಯಾ ಭಾಗದಲ್ಲಿ ಗ್ರಾಮ ಜಾಗೃತ ಸಮಿತಿಯವರು ಎಲ್ಲರ ಪಟ್ಟಿ ತೆಗೆದುಕೊಂಡು ಮನೆಯಿಂದ ಆಚೆಗೆ ಹೋಗದಂತೆ ಕಟ್ಟೆಚ್ಚರ ವಹಿಸಬೇಕು. ಮನೆಯವರಿಗೆ ನಿಗದಿಪಡಿಸಿದ ಅವಧಿಯವರೆಗೆ ಹೊರಹೋಗದಂತೆ ಖಡಕ್ಕಾಗಿ ಸೂಚಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts